ಬೆಂಗಳೂರು: ವಾಟ್ಸಪ್​ನಲ್ಲಿ ತಲಾಖ್ ನೀಡಿ ವಿಮಾನ ನಿಲ್ದಾಣದಲ್ಲೇ ಪತ್ನಿಯನ್ನು ಬಿಟ್ಟು ಹೋದ ಪತಿ!

ಪತಿಯೊಬ್ಬ ತನ್ನ ಪತ್ನಿಗೆ ವಾಟ್ಸ​ಪ್​ನಲ್ಲೇ ತಲಾಖ್ ಹೇಳಿದ್ದಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲೇ ಹೆಂಡತಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಡಾ. ಜಾವೀದ್  ಮತ್ತು ರೇಷ್ಮಾ
ಡಾ. ಜಾವೀದ್ ಮತ್ತು ರೇಷ್ಮಾ
ಬೆಂಗಳುರು: ಪತಿಯೊಬ್ಬ ತನ್ನ ಪತ್ನಿಗೆ ವಾಟ್ಸ​ಪ್​ನಲ್ಲೇ ತಲಾಖ್ ಹೇಳಿದ್ದಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲೇ ಹೆಂಡತಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಮೆರಿಕಾದಲ್ಲಿ ವೈದ್ಯನಾಗಿರುವ ಡಾ. ಜಾವೀದ್ ಖಾನ್ ಪರಾರಿಯಾಗಿರುವ ಪತಿಯಾಗಿದ್ದು ಇವರು ವಾಟ್ಸ​ಪ್​ನ ಮೂಲಕ ತಮ್ಮ ಪತ್ನಿ ರೇಷ್ಮಾ ಅಜೀಜ್ ಎಂಬಾಕೆಗೆ ತಲಾಖ್ (ವಿಚ್ಚೇದನ) ನೀಡಿದ್ದನು. ಬಳಿಕ ಆಕೆಯನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಜಾವೀದ್ ಹಾಗೂ ರೇಷ್ಮಾ 2003ರಲ್ಲಿ  ವಿವಾಹವಾಗಿದ್ದರು.ಕೆಲ ಕಾಲ ಇಂಗ್ಲೆಂಡ್ ನಲ್ಲಿ ನೆಲೆಸಿದ್ದ ದಂಪತಿ ಬಳಿಕ ಕುಟುಂಬ ಸಮೇತವಾಗಿ ಅಮೆರಿಕಾಗೆ ಶಿಫ್ಟ್​ ಆಗಿದ್ದರು.ದಂಪರ್ತಿಗಳಿಗೆ 13 ವರ್ಷದ ಹೆಣ್ಣುಮಗು, 10 ವರ್ಷದ ಗಂಡು ಮಗುವೂ ಇದೆ.
ಸಂಸಾರ ಚೆನ್ನಾಗಿಯೇ ಸಾಗಿಸುತ್ತಿದ್ದ ಇವರಲ್ಲಿ ಇತ್ತೀಚಿನ ವರ್ಷದಲ್ಲಿ ಜಗಳ, ಅಸಮಾಧಾನ ಮೂಡಿತ್ತು. ಈ ಸಂಬಂಧ ಹಿರಿಯರೊಡನೆ ಚರ್ಚಿಸಿ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಮಕ್ಕಳನ್ನು ಅಮೆರಿಕಾದಲ್ಲೇ ಬಿಟ್ಟು ದಂಪತಿಗಳು ಂಆತ್ರ ಬೆಂಗಳೂರಿಗೆ ಆಗಮಿಸಿದ್ದರು.
ಎಮಿರೇಟ್ಸ್ ವಿಮಾನದ ಮೂಲಕ ನವೆಂಬರ್ 30ರಂದು ಬೆಂಗಳೂರಿಗೆ ಇವರು ಆಗಮಿಸಿದ್ದರು. ಈ ನಡುವೆ ಪತಿ ಜಾವೀದ್ ಹೆಂಡತಿ ರೇಷ್ಮಾಳ ಫಾಸ್ ಪೋರ್ಟ್, ಡೆಬಿಟ್, ಕ್ರೆಡಿಟ್ ಕಾರ್ಡ್ ಗಳನ್ನು ತೆಗೆದುಕೊಂಡಿದ್ದಾನೆ.ಹಾಗೂ ಏರ್​ಪೋರ್ಟ್​ಗೆ ಆಗಮಿಸಿದ ಬೆನ್ನಿಗೇ ಬೌನ್ಸರ್ಗಳ ಭದ್ರತೆಯಲ್ಲಿ ರೇಷ್ಮಾಳನ್ನು ಬಿಟ್ಟು ತಾನೊಬ್ಬನೇ ಮಎರಿಕಾಗೆ ಹಿಂತಿರುಗಿದ್ದಾನೆ. ಅಲ್ಲದೆ ಅಮೆರಿಕಾಗೆ ತೆರಳಿದ ಜಾವೀದ್  ವಾಯ್ಸ್ ಮೆಸೇಜ್ ಮತ್ತು ಟೆಕ್ಸ್ಟ್​ ಮೂಲಕ ತಲಾಖ್ ಸಂದೇಶ ರವಾನಿಸಿದ್ದಾನೆ.
ಸಂದೇಶ ನೋಡಿದ ರೇಷ್ಮಾ ಕಂಗಾಲಾಗಿದ್ದು ಬೆಂಗಳೂರು  ಉತ್ತರ ವಿಭಾಗ ಡಿಸಿಪಿ ಚೇತನ್​ ಸಿಂಗ್​ ರಾಥೋಡ್​, ಶಾಸಕ ಸುರೇಶ್ ಕುಮಾರ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಬಳಿ ತೆರಳಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com