ನರಗುಂದ: ಮೃತನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಾನರ!

ಮನುಷ್ಯ ಸತ್ತಾಗ ಬಂಧು-ಬಾಂಧವರು, ಮಿತ್ರರು ಬಂದು ಸಾಂತ್ವನ ಹೇಳುವುದೇ ಕಷ್ಟ ಎನ್ನುವಂತಹ ಕಾಲದಲ್ಲಿ ಮಂಗವೊಂದು ಸಾವಿನ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ರವ ಹೇಳಿರುವ ಅಪರೂಪದ ಘಟನೆಯೊಂದು ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ...
ನರಗುಂದ: ಮೃತನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕೋತಿ!
ನರಗುಂದ: ಮೃತನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕೋತಿ!
Updated on
ಗದಗ: ಮನುಷ್ಯ ಸತ್ತಾಗ ಬಂಧು-ಬಾಂಧವರು, ಮಿತ್ರರು ಬಂದು ಸಾಂತ್ವನ ಹೇಳುವುದೇ ಕಷ್ಟ ಎನ್ನುವಂತಹ ಕಾಲದಲ್ಲಿ ಮಂಗವೊಂದು ಸಾವಿನ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ರವ ಹೇಳಿರುವ ಅಪರೂಪದ ಘಟನೆಯೊಂದು ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ. 
71 ವರ್ಷದ ನಾಗನಗೌಡ ಪಾಟೀಲ್ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಹಿನ್ನಲೆಯಲ್ಲಿ ಕುಟುಂಬಸ್ಥರು ಅತೀವ ದುಃಖದಲ್ಲಿದ್ದರು. ಈ ವೇಳೆ ಮನೆಗೆ ಬಂದಿರುವ ಕೋತಿಯೊಂದು ಶವದ ಬಳಿ ಸುಮ್ಮನೆ ಕುಳಿತು ಶ್ರದ್ಧಾಂಜಲಿ ಸಲ್ಲಿಸಿದೆ. ಅಂತಿ ಸಂಸ್ಕಾರದ ಪೂಜೆ ಪೂರ್ಣಗೊಳ್ಳುವವರೆಗೂ ಸ್ಥಳಧಲ್ಲಿಯೇ ಇದ್ದ ಕೋತಿ, ನಂತರ ಮೃತನ ಹಿರಿಯ ಪುತ್ರ ಮರೀಗೌಡ ಅವರ ಬಳಿ ಹೋಗಿ ಹೆಗಲೇರಿ ತಲೆ ಮೇಲೆ ಕೈಯಾಡಿಸಿದೆ. ಅಲ್ಲದೆ, ಕಿವಿಯಲ್ಲಿ ತನ್ನದೇ ಭಾಷೆಯಲ್ಲಿ ಸಾಂತ್ವನ ಕೂಡ ಹೇಳಿದೆ. 
ಕೋತಿ ಸಾಂತ್ವನ ಹೇಳಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗತೊಡಗಿದೆ. ಸಾಮಾನ್ಯವಾಗಿ ಜನರು ಇರುವ ಕಡೆ ಕೋತಿಗಳು ಸುಳಿಯುವುದಿಲ್ಲ. ಆದರೆ, ಜನದಡಟ್ಟಣೆ ನಡುವೆಯೇ ಬಂದಿರುವ ಈ ಕೋಟಿ, ಮೃತದೇಹ ಇರಿಸಿದ್ದ ಪ್ರದೇಶಕ್ಕೆ ಯಾವುದೇ ಭಯವಿಲ್ಲದೆ ತೆರಳಿ, ಯಾರಿಗೂ ತೊಂದರೆ ಮಾಡದೆ, ಅರ್ಚಕರು ಪೂಜೆ ಸಲ್ಲಿಸುವಾಗ ಅಲ್ಲಿಯೇ ಮೌನವಾಗಿ ಕುಳಿತು, ಪೂಜೆ ಪೂರ್ಣಗೊಳ್ಳುವವರೆಗೂ ಇದ್ದು, ಸಾಂತ್ವನ ಹೇಳಿ ಹೋಗಿರುವುದು ಸ್ಥಳೀಯ ಜನರಲ್ಲಿ ಅಚ್ಚರಿ ಮೂಡುವಂತೆ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com