ಹಳೇ ನೋಟು ಬದಲಾವಣೆ ದಂಧೆಗೆ ಇಲ್ಲ ಬ್ರೇಕ್: ಬೆಂಗಳೂರಿನಲ್ಲಿ 1.95 ಕೋಟಿ ಹಣ ಪತ್ತೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ರೂ., 1 ಸಾವಿರ ರೂ. ನೋಟು ಬ್ಯಾನ್ ಮಾಡಿ ಸರಿಸುಮಾರು 2 ವರ್ಷ ಆಗುತ್ತಿದ್ದರೂ ನಗರದಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ರೂ., 1 ಸಾವಿರ ರೂ. ನೋಟು ಬ್ಯಾನ್ ಮಾಡಿ ಸರಿಸುಮಾರು 2 ವರ್ಷ ಆಗುತ್ತಿದ್ದರೂ ನಗರದಲ್ಲಿ ಹಳೇ ನೋಟು ಬದಲಾವಣೆ ದಂಧೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ. 
ನಿಷೇಧಿತ 500 ಹಾಗೂ ಸಾವಿರ ರು ಮುಖಬೆಲೆಯ ನೋಟುಗಳನ್ನು ವರ್ಗಾವಣೆ ಮಾಡುತ್ತಿದ್ದ 4 ಮಂದಿಯನ್ನು ಬಂಧಿಸಿರುವ ಪೊಲೀಸರು ಅವರಿಂದ 1.95 ಕೋಟಿ ರು ನಿಷೇಧಿತ ಹಣವನ್ನು ವಶ ಪಡಿಸಿಕೊಂಡಿದ್ದಾರೆ.
ರಮೇಶ್, ಸಕಾರಕ್, ಪ್ರಕಾಶ್, ವೆಂಕಟರಾಮ್ ಬಂಧಿತ ಆರೋಪಿಗಳು. ಮಡಿಕೇರಿ ಮೂಲದ ವ್ಯಕ್ತಿಯೊಬ್ಬರಿಂದ ಹಳೇ ನೋಟು ತಂದಿದ್ದ ನಾಲ್ವರು ಇಪ್ಪತ್ತು ಪರ್ಸೆಂಟ್ ಕಮೀಷನ್‍ಗೆ ಹಳೇ ನೋಟು ಕೊಟ್ಟು ಹೊಸ ನೋಟು ಪಡೆಯುತ್ತಿದ್ದರು.
ನಗರದ ನಂದಿನಿ ಲೇಔಟ್ ಬಸ್ ನಿಲ್ದಾಣದ ಬಳಿ 1,95 ಕೋಟಿ ರೂ. ಹಣ ಬದಲಾವಣೆಗಾಗಿ ಕಾದು ಕುಳಿತಿದ್ದ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ನಗದು ಸಮೇತ ಬಂಧಿಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಈ ಗ್ಯಾಂಗಿನ ಪ್ರಮುಖ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com