ಎಡೆಸ್ನಾನ ಕೈಬಿಟ್ಟ ಉಡುಪಿ ಕೃಷ್ಣಮಠ: ಪರ್ಯಾಯ ಪಲಿಮಾರು ಶ್ರೀಗಳ ನಿರ್ಧಾರ

ಇದೇ ಮೊದಲ ಬಾರಿಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಷಷ್ಠಿಯ ಪ್ರಯುಕ್ತ ನಡೆಯುವ ಎಡೆಸ್ನಾನ ಗುರುವಾ ನಡೆಯಲಿಲ್ಲ. ತಿನ್ನುವ ಅನ್ನದ ಮೇಲೆ ಭಕ್ತರು ಉರುಳಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಪರ್ಯಾಯ ಪಲಿಮಾರು ಮಠದ...
ಎಡೆಸ್ನಾನ ಕೈಬಿಟ್ಟ ಉಡುಪಿ ಕೃಷ್ಣಮಠ: ಪರ್ಯಾಯ ಪಲಿಮಾರು ಶ್ರೀಗಳ ನಿರ್ಧಾರ
ಎಡೆಸ್ನಾನ ಕೈಬಿಟ್ಟ ಉಡುಪಿ ಕೃಷ್ಣಮಠ: ಪರ್ಯಾಯ ಪಲಿಮಾರು ಶ್ರೀಗಳ ನಿರ್ಧಾರ
ಉಡುಪಿ: ಇದೇ ಮೊದಲ ಬಾರಿಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಷಷ್ಠಿಯ ಪ್ರಯುಕ್ತ ನಡೆಯುವ ಎಡೆಸ್ನಾನ ಗುರುವಾ ನಡೆಯಲಿಲ್ಲ. ತಿನ್ನುವ ಅನ್ನದ ಮೇಲೆ ಭಕ್ತರು ಉರುಳಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಈ ರೀತಿಯ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. 
ಕೃಷ್ಣಮಠದೊಳಗೆ ಇರುವ ಸುಬ್ರಹ್ಮಣ್ಯ ಗುಡಿಯ ಮುಂಭಾಗದಲ್ಲಿ ಅನಾದಿಕಾಲದಿಂದಲೂ ಭಕ್ತರು ಊಟ ಮಾಡಿದ ಎಂಜಲಿನ ಎಲೆ ಮೇಲೆ ಉರುಳಾಡುವ ಮಡೆಸ್ನಾನ ನಡೆಯುತ್ತಿತ್ತು. ಈ ಬಗ್ಗೆ ಸಾಕಷ್ಟು ವಿವಾದಗಳೂ ಕೂಡ ಎದುರಾಗಿತ್ತು. 
ವಿವಾದದ ಬಳಿಕ ಪೇಜಾವರ ಶ್ರೀಗಳು ಮೂರು ವರ್ಷಗಳ ಹಿಂದೆ ತಮ್ಮ ಪರ್ಯಾಯದ ಅವಧಿಯಲ್ಲಿ ಎಂಜಲಿನ ಬದಲು ದೇವರ ಪ್ರಸಾದ ಅನ್ನದ ಮೇಲೆ ಉರುಳಾಡುವ ಎಡೆಸ್ನಾನ ಜಾರಿಗೆ ತಂದಿದ್ದರು. ಆದರೆ, ಈಗಿನ ಪರ್ಯಾಯ ಪಲಿಮಾರು ಶ್ರೀಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ಅನ್ನದ ಮೇಲೆ ಉರುಳಾಡುವುದಕ್ಕೂ ಬ್ರೇಕ್ ಹಾಕಿದ್ದಾರೆ. 
ಹಿಂದೆ ಮಡೆಸ್ನಾನ ನಡೆಯುತ್ತಿದ್ದಾಗ ವಿವಾದ ಉಂಟಾಗಿತ್ತು. ನಂತರ ಎಡೆಸ್ನಾನದಿಂದಲೂ ಕೆಲವರಿಗೆ ಬೇಸರವಾಗಿದೆ. ತಿನ್ನುವ ಅನ್ನದ ಮೇಲೆ ಉರುಳಾಡಿ ಅದನ್ನು ವ್ಯರ್ಥ ಮಾಡುವುದು ಸರಿಯಲ್ಲ ಆದ್ದರಿಂದ ಅನಗತ್ಯ ವಿವಾದ ಬೇಟ ಎಂಬ ಕಾರಣಕ್ಕೆ ಎಡೆಸ್ನಾನಕ್ಕೆ ಅವಕಾಶ ನೀಡಿಲ್ಲ ಎಂದು ಪಲಿಮಾರು ಶ್ರೀಗಳು ತಿಳಿಸಿದ್ದಾರೆ. 
ಪಲಿಮಾರು ಶ್ರೀಗಳ ನಿರ್ಧಾರಕ್ಕೆ ಪೇಜಾವರ ಶ್ರೀಗಳು ಶ್ಲಾಘನೆ
ಎಡೆ ಸ್ನಾನ ಮತ್ತು ಮಡೆಸ್ನಾನ ಎರಡಕ್ಕೂ ಅವಕಾಶ ನೀಡದಿರುವ ಪಲಿಮಾರು ಶ್ರೀಗಳ ನಿರ್ಧಾರ ಸ್ವಾಗತಿಸುತ್ತೇನೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. 
ಎಡೆಸ್ನಾನ-ಮಡೆಸ್ನಾನದಲ್ಲಿ ಜಾತಿ ಪ್ರಸ್ತಾಪದಿಂದ ವಿರೋಧ ವ್ಯಕ್ತವಾಗುತ್ತಿದೆ. ಮಡೆಸ್ನಾನ/ಎಡೆಸ್ನಾನಗಳು ಅನಿವಾರ್ಯವಲ್ಲ. ಇದರಿಂದ ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ಲಾಭ ಇಲ್ಲ. ಉತ್ಸವ, ಪೂಜೆ ಇತ್ಯಾದಿಗಳು ಶಾಸ್ತ್ರಬದ್ಧವಾಗಿ ನಡೆದರೆ ಸಾಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com