ನಿನ್ನ ಹರಕೆಯಿಂದ ಮಗು ಹುಟ್ತು, ಆದರೆ ಈಗ ಗಂಡನನ್ನು ಕಿತ್ತುಕೊಂಡೆಯಾ ಅಮ್ಮಾ; ಕರಳು ಹಿಂಡುವಂತಿತ್ತು ಬಾಣಂತಿ ರೋಧನಾ!

ತಾಯಿ ನಿನಗೆ ಹರಕೆ ಮಾಡಿಕೊಂಡಿದ್ದಕ್ಕೆ ಮಗುವನ್ನು ಕರುಣಿಸಿದೆ. ಆದರೆ ಈಗ ತನ್ನ ಗಂಡನನ್ನೇ ಕಿತ್ತುಕೊಂಡೆಯಾ ಎಂದು ಬಾಣಂತಿ ಗಂಡನ ಶವದ ಮುಂದೆ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಚಾಮರಾಜನಗರ: ತಾಯಿ ನಿನಗೆ ಹರಕೆ ಮಾಡಿಕೊಂಡಿದ್ದಕ್ಕೆ ಮಗುವನ್ನು ಕರುಣಿಸಿದೆ. ಆದರೆ ಈಗ ತನ್ನ ಗಂಡನನ್ನೇ ಕಿತ್ತುಕೊಂಡೆಯಾ ಎಂದು ಬಾಣಂತಿ ಗಂಡನ ಶವದ ಮುಂದೆ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. 
ಹುನೂರು ತಾಲೂಕಿನ ಸುಳ್ವಾಡಿ ಗ್ರಾಮದ ಶಾಂತರಾಜು ಎಂಬುವರು ನಿನ್ನೆ ಸುಳ್ವಾಡಿ ಮಾರಮ್ಮನ ದೇವಸ್ತಾನದಲ್ಲಿ ನೀಡಿದ್ದ ಪ್ರಸಾದ ಸೇವಿಸಿ ಅಸುನೀಗಿದ್ದು ಗಂಡನನ್ನು ಕಳೆದುಕೊಂಡ ಪತ್ನಿಯ ರೋಧನೆ ನಿಜಕ್ಕೂ ಎಂತವರ ಮನಸ್ಸನ್ನು ಹಿಂಡುವಂತಿತ್ತು. 
ಶಾಂತರಾಜು ಎಂಬುವರಿಗೆ ಹಲವು ವರ್ಷಗಳಿಂದ ಮಕ್ಕಳಿರಲಿಲ್ಲ. ಮಕ್ಕಳಾಗದ್ದಕ್ಕೆ ಓಂ ಶಕ್ತಿ ದೇವರಿಗೆ ಹರಕೆ ಹೊತ್ತಿಕೊಂಡಿದ್ದರು. ದೇವಿಯ ಅನುಗ್ರಹವೆಂಬಂತೆ ದಂಪತಿಗೆ ಮೂರು ತಿಂಗಳ ಹಿಂದೆ ಮಗು ಹುಟ್ಟಿತ್ತು. ದೇವಿಯ ಹರಕೆಯಿಂದ ಮಗು ಜನನವಾಗಿದೆ ಎಂದು ತಿಳಿದು ದಂಪತಿ ಖುಷಿಯಿಂದ ಹರಕೆ ತೀರಿಸಲು ಮಾರಮ್ಮ ದೇವಸ್ಥಾನಕ್ಕೆ ಬಂದಿದ್ದರು. 
ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಶಾಂತರಾಜು ಪ್ರಸಾದವನ್ನು ಸೇವಿಸಿದ್ದಾರೆ. ಪ್ರಸಾದವನ್ನು ತಿಂದು ಅಸ್ವಸ್ಥಗೊಂಡಿದ್ದ ಶಾಂತರಾಜು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 
ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ ಹೊಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com