ಸಂಗ್ರಹ ಚಿತ್ರ
ರಾಜ್ಯ
ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗಕ್ಕೆ ಕತ್ತರಿ, ರಕ್ತಸ್ರಾವದಿಂದ ವ್ಯಕ್ತಿ ಸಾವು!
ಕಂಠಪೂರ್ತಿ ಕುಡಿದು ಮತ್ತಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವ್ಯಕ್ತಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ಕಂಠಪೂರ್ತಿ ಕುಡಿದು ಮತ್ತಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವ್ಯಕ್ತಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೋಲದೇವನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕೂಲಿಕಾರನಾಗಿ ಕೆಲಸ ಮಾಡುತ್ತಿದ್ದ 57 ವರ್ಷದ ನಂಜಪ್ಪ ಎಂಬುವರು ಮೃತಪಟ್ಟ ದುರ್ದೈವಿ. ನಂಜಪ್ಪ ನೋವಿನಿಂದ ಕಿರುಚುತ್ತಿದ್ದ ವೇಳೆ ನೆರೆ ಮನೆಯವರು ಹೋಗಿ ನೋಡಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲು ತಯಾರಿ ನಡೆಸಿದ್ದಾಗ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.
ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ನಂಜಪ್ಪ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ ಎಂಬ ವಿಚಾರ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ