ಜೆಡಿಎಸ್ ಕಾರ್ಯಕರ್ತ ಹತ್ಯೆ ಪ್ರಕರಣ: 4 ಆರೋಪಿಗಳು ವಶಕ್ಕೆ
ಜೆಡಿಎಸ್ ಕಾರ್ಯಕರ್ತ ಹತ್ಯೆ ಪ್ರಕರಣ: 4 ಆರೋಪಿಗಳು ವಶಕ್ಕೆ

ಜೆಡಿಎಸ್ ಕಾರ್ಯಕರ್ತ ಹತ್ಯೆ ಪ್ರಕರಣ: 4 ಆರೋಪಿಗಳು ವಶಕ್ಕೆ

ಜೆಡಿಎಸ್ ಕಾರ್ಯಕರ್ತ ಪ್ರಕಾಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ಬುಧವಾರ ತಿಳಿದುಬಂದಿದೆ...
ಮದ್ದೂರು: ಜೆಡಿಎಸ್ ಕಾರ್ಯಕರ್ತ ಪ್ರಕಾಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ಬುಧವಾರ ತಿಳಿದುಬಂದಿದೆ. 
ಮಳವಳ್ಳಿ ತಾಲೂಕಿನ ಬೆಳಕವಾಡಿ ಠಾಣೆಯಲ್ಲಿ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. 
ತೊಪ್ಪನಹಳ್ಳಿಯ ಹೇಮಂತ್, ಸ್ವಾಮಿ, ಯೋಗೇಶ್, ಶಿವರಾಜ್ ಪೊಲೀಸರ ವಶದಲ್ಲಿರುವ ಆರೋಪಿಗಳೆಂದು ಹೇಳಲಾಗುತ್ತಿದೆ. 
ಎಲ್ಲಾ ನಾಲ್ವರು ಆರೋಪಿಗಳನ್ನೂ ಮಳವಳ್ಳಿ ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. 
ಈ ನಡುವೆ ಪ್ರಕಾಶ್ ಅವರ ಸ್ವಗ್ರಾಮ ತೊಪ್ಪನಹಳ್ಳಿಗೆ ಸಿಎಂ ಕುಮಾರಸ್ವಾಮಿಯವರು ಭೇಟಿ ನೀಡಿದ್ದು, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಈ ವೇಳೆ ಪ್ರಕಾಶ್ ಅವರು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಆವರು ಆರೋಪಿಗಲನ್ನು ಶಿಕ್ಷೆಗೆ ಗುರಿಪಡಿಸುವ ಭರವಸೆ ಯನ್ನೂ ನೀಡಿದರು. 
ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಗ್ರಾಮಕ್ಕೆ ಕುಮಾರಸ್ವಾಮಿಯವರು ಭೇಟಿ ನೀಡಿದ ಸಂದರ್ಭದಲ್ಲಿ ದುಃಖದ ಕಟ್ಟೆ ಒಡೆಯಿತು. ಬೋರಾಪುರ ಹೆಲಿಪ್ಯಾಡ್ ನಿಂದ ನೇರವಾಗಿ ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿಯವರು ಪ್ರಕಾಶ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಈ ವೇಳೆ ಒಂದು ಹಂತದಲ್ಲಿ ಸಿಎಂ ಕೂಡ ಭಾವುಕರಾಗಿದ್ದೂ ಕಂಡು ಬಂತು. 

Related Stories

No stories found.

Advertisement

X
Kannada Prabha
www.kannadaprabha.com