ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಸಹೋದರಿ ಕವಿತಾ ಲಂಕೇಶ್ ವಿರೋಧ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದರೆ, ವಿರೋಧ ವ್ಯಕ್ತಪಡಿಸುತ್ತೇವೆಂದು ಕವಿತಾ ಲಂಕೇಶ್ ಅವರು ಶುಕ್ರವಾರ ಹೇಳಿದ್ದಾರೆ...
ಗೌರಿ ಲಂಕೇಶ್, ಕವಿತಾ ಲಂಕೇಶ್
ಗೌರಿ ಲಂಕೇಶ್, ಕವಿತಾ ಲಂಕೇಶ್
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದರೆ, ವಿರೋಧ ವ್ಯಕ್ತಪಡಿಸುತ್ತೇವೆಂದು ಕವಿತಾ ಲಂಕೇಶ್ ಅವರು ಶುಕ್ರವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ರಾಜ್ಯದ ವಿಶೇಷ ತನಿಖಾ ದಳ (ಎಸ್ಐಟಿ) ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದು, ತನಿಖೆ ಉತ್ತಮವಾಗಿ ಸಾಗುತ್ತಿದೆ. ಈವರೆಗೂ 16 ಮಂದಿ ಶಂಕಿತರನ್ನೂ ಬಂಧಿಸಿದ್ದಾರೆ. ಅಲ್ಲದೆ, 2 ಚಾರ್ಜ್ ಶೀಟ್ ಗಳನ್ನೂ ಕೂಡ ದಾಖಲಿಸಿದೆ. ತನಿಖೆ ಉತ್ತಮವಾಗಿ ಸಾಗುತ್ತಿರುವಾಗ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ. 
ಗೌರಿಲ ಲಂಕೇಶ್, ಎಂಎಂ ಕಲಬುರಗಿ ಹಾಗೂ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳು ನಂಟು ಹೊಂದಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡುವಂತೆ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ಶಿಫಾರಸ್ಸು ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com