ನಾನೂ ಕೂಡ 'ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್': ಮಾಜಿ ಪ್ರಧಾನಿ ದೇವೇಗೌಡ

ನಾನೂ ಕೂಡ ಆ್ಯಕ್ಸಿಡೆಂಟಲ್ ಪ್ರೈಮ್ ಮಿಸಿನ್ಟರ್ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ...
ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ
ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ
ನವದೆಹಲಿ: ನಾನೂ ಕೂಡ ಆ್ಯಕ್ಸಿಡೆಂಟಲ್ ಪ್ರೈಮ್ ಮಿಸಿನ್ಟರ್ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.  
ಆ್ಯಕ್ಸಿಡೆಂಟಲ್ ಪ್ರೈಮ್ ಮಿಸಿನ್ಟರ್ ಚಿತ್ರದ ಟ್ರೈಲರ್ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು. ನಿಜ ಹೇಳಬೇಕೆಂದರೆ ಚಿತ್ರಕ್ಕೇಕೆ ಅನುಮತಿ ನೀಡಿದರು ಎಂಬುದು ನನಗೂ ಗೊತ್ತಿಲ್ಲ. 3-4 ತಿಂಗಳ ಹಿಂದೆಯೇ ಈ ವಿವಾದ ಆರಂಭವಾಗಿತ್ತು. ಚಿತ್ರಕ್ಕೆ ಏಕೆ ಅನುಮತಿ ಕೊಟ್ಟರು ಎಂಬುದು ತಿಳಿಯುತ್ತಿಲ್ಲ. ನಾನೂ ಕೂಡ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್. ಆದರೆ, ನಾನೆಂದೂ ಇಂತಹ ಪರಿಸ್ಥಿತಿಗಳನ್ನು ಎದುರಿಸಿಲ್ಲ ಎಂದು ಹೇಳಿದ್ದಾರೆ. 
ಸ್ಥಳೀಯ ಪಕ್ಷಗಳು ಹಾಗೂ ಕಾಂಗ್ರೆಸ್ ಬೆಂಬಲದಿಂದ 1996ರ ಜೂನ್ ರಿಂದ 1997 ಏಪ್ರಿಲ್ 21ರವರೆಗೂ ದೇವೇಗೌಡ ಅವರು ದೇಶದ ಪ್ರಧಾನಮಂತ್ರಿಯಾಗಿದ್ದರು. ನಂತರ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ಹಿನ್ನಲೆಯಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com