ಮೊದಲ ಪತ್ನಿಗೆ 'ಪಾಠ' ಕಲಿಸಲು ಪತಿ, ಎರಡನೇ ಪತ್ನಿಯಿಂದ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ!

ತನ್ನ ವಿರುದ್ಧ ದೂರು ನೀಡಿದ್ದ ಮೊದಲ ಹೆಂಡತಿಗೆ ಪಾಠ ಕಲಿಸಲು ವ್ಯಕ್ತಿಯೊಬ್ಬ ತನ್ನ ಎರಡನೇ ಹೆಂಡತಿಯೊಡನೆ ಸೇರಿ ........
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ತನ್ನ ವಿರುದ್ಧ ದೂರು ನೀಡಿದ್ದ ಮೊದಲ ಹೆಂಡತಿಗೆ ಪಾಠ ಕಲಿಸಲು ವ್ಯಕ್ತಿಯೊಬ್ಬ ತನ್ನ ಎರಡನೇ ಹೆಂಡತಿಯೊಡನೆ ಸೇರಿ 'ತನ್ನ ಮೊದಲ ಪತ್ನಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾನವನ್ನು ಸ್ಪೋಟಿಸಲಿದ್ದಾಳೆ' ಎಂದು ಹುಸಿ ಕರೆ ಮಾಡಿದ ಪ್ರಸಂಗವೊಂದು ತಡವಾಗಿ ಬೆಳಕಿಗೆ ಬಂದಿದೆ.
ಒಂದು ವಾರದ ಹಿಂದೆ ನಡೆದಿದ್ದ ಪ್ರಕರಣ ಸಂಬಂಧ ನ್ಯಾಯಾಲಯದ ಆದೇಶದಂತೆ ವಿದ್ಯಾರಣ್ಯಪುರ ಪೋಲೀಸರು ಆರೋಪಿಯ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಲಯದ ಆದೇಶದಂತೆ ವಿದ್ಯಾರಣ್ಯಪುರ ಪೋಲೀಸರು ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಪ್ರಕಾಶ್ ರಾಥೋಡ್ ಎಂದು ಗುರುತಿಸಲಾಗಿದ್ದು ತನ್ನ ಮೊದಲ ಪತ್ನಿಯನ್ನು ಕಷ್ಟಕ್ಕೆ ಸಿಲುಕಿಸಿಅಲು ಈತ ತನ್ನ ಎರಡನೇ ಪತ್ನಿಯೊಡನೆ ಸೇರಿ ಈ ಹುಸಿ ಬಾಂಬ್ ಕರೆ ಮಾಡಿದ್ದನೆನ್ನಲಾಗಿದೆ.
ಜ.26ರಂದು ಆರೋಪಿ ಪ್ರಕಾಶ್ ಪೋಲೀಸ ಅಧಿಕಾರಿ ಮರಿಗೌಡರಿಗೆ ಕರೆ ಮಾಡಿ ಮಧು ಎನ್ನುವ ನಕ್ಸಲ್ ಮಹಿಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಡಾಣವನ್ನು ಸ್ಪೋಟಿಸಲು ಸಂಚು ರೂಪಿಸಿದ್ದಾಳೆ ಎಂದು ಹೇಳಿದ್ದ. ಅಧಿಕಾರಿಗಳು ಕರೆಯ ಮೂಲವನ್ನು ಪರಿಶೀಲಿಸಿದಾಗ ಅದು ಪ್ರಕಾಶ್ ಎರಡನೇ ಪತ್ನಿ ವೀಣಾಳ ಮೊಬೈಲ್ನಿಂದ ಬಂದ ಕರೆ ಎನ್ನುವುದು ತಿಳಿದಿದೆ.
ಪ್ರಕಾಶ್ ಮೊದಲ ಪತ್ನಿ ಮಧುವನ್ನು ಸಂಪರ್ಕಿಸಿದ ಪೋಲೀಸರು ಅವಳಿಂದ ಮಾಹಿತಿ ಪಡೆದಿದ್ದು ಆಕೆ ಹಾಗೂ ಪ್ರಕಾಶ್ ನಡುವೆ ಕೆಲವು ತಿಂಗಳಿನಿಂದ ಭಿನ್ನಾಭಿಪ್ರಾಯಗಳಿದ್ದವೆನ್ನುವುದು ತಿಳಿದುಬಂದಿದೆ. ಇದರೊಡನೆ ವಿದ್ಯಾರಣ್ಯಪುರದಲ್ಲಿ ಕೌಟುಂಬಿಕ ವಿವಾದ ಪ್ರಕರಣವೂ ದಾಖಲಾಗಿದೆ. "ಇದೀಗ ನಾವು ಆರೋಪಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದೇವೆ" ಎಂದು ಪೋಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com