ನಿತ್ಯೋತ್ಸವ ಕವಿ ಪ್ರೊ. ಕೆಎಸ್ ನಿಸಾರ್ ಅಹಮದ್'ಗೆ ಪಂಪ ಪ್ರಶಸ್ತಿ ಪ್ರದಾನ

ಕದಂಬೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಆದಿಕವಿ ಪಂಪನ ಹೆಸರಿನಲ್ಲಿ ಕೊಡಮಾಡುವ ಪಂಪ ಪ್ರಶಸ್ತಿಯನ್ನು ಶುಕ್ರವಾರ ಪ್ರದಾನ ಮಾಡಲಾಯಿತು...
ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್'ಗೆ ಪಂಪ ಪ್ರಶಸ್ತಿ
ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್'ಗೆ ಪಂಪ ಪ್ರಶಸ್ತಿ
ಶಿರಸಿ: ಕದಂಬೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಆದಿಕವಿ ಪಂಪನ ಹೆಸರಿನಲ್ಲಿ ಕೊಡಮಾಡುವ ಪಂಪ ಪ್ರಶಸ್ತಿಯನ್ನು ಶುಕ್ರವಾರ ಪ್ರದಾನ ಮಾಡಲಾಯಿತು. 
ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಗೈರು ಹಾಜರಾಗಿರುವುದಕ್ಕೆ ಸ್ಥಳೀಯ ಜನರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. 
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ನಿಸಾರ್ ಅಹಮದ್ ಅವರು, ಪಂಪನ ನಾಡಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಬಹಳ ಹೆಮ್ಮೆಯೆನಿಸುತ್ತಿದೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸುವ ಅಗತ್ಯವಿದೆ. ಇಲ್ಲದೇ, ಹೋದರೆ, ಭಾಷೆಯನ್ನು ರಕ್ಷಣೆ ಮಾಡುವುದು ಬಹಳ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. 
ವಿಶ್ವದಲ್ಲಿಯೇ ಅತ್ಯಂತ ಹಳೆಯ ಭಾಷೆಯೆಂದರೆ ಅದು ಕನ್ನಡ. ಜಗತ್ತಿನ 2000 ಭಾಷೆಗಳಲ್ಲಿ ಕನ್ನಡಕ್ಕೆ 19ನೇ ಸ್ಥಾನ ನೀಡಿ ಗೌರವಿಸಿದ್ದರೂ ಕನ್ನಡದ ಇತಿಹಾಸ ಅರಿಯದ ಕನ್ನಡಿಗರು ಅನ್ಯಭಾಷಿಕರನ್ನು ಕಂಡಾಗ ಆತ್ಮಭಾಷೆ ಕನ್ನಡವನ್ನು ತ್ಯಜಿಸುತ್ತಿರುವುದು ವಿಷಾದಕರ. 
ಇತರ ಭಾಷೆಯನ್ನು ವಿರೋಧಿಸುವ ಅಗತ್ಯವಿಲ್ಲ. ಆದರೆ, ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com