ವ್ಯಾಲೆಂಟೈನ್ಸ್ ಡೇ : ಬೆಂಗಳೂರು ನಮ್ಮ ಮೆಟ್ರೋಗೆ ಶೀಘ್ರ ಹೊಸ ಬೋಗಿ ಸೇರ್ಪಡೆ
ಬೆಂಗಳೂರು: ನಮ್ಮ ಮೇಟ್ರೋ ರೈಲಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿರಿಸಬೇಕೆಂಬ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತದೆ. ಫೆಬ್ರುವರಿ 14ರಂದು ವ್ಯಾಲೆಂಟೆನ್ಸ್ ದಿನದಂದು ನಮ್ಮ ಬೆಂಗಳೂರು ಮೆಟ್ರೋಗೆ ಮೂರು ಹೊಸ ಬೋಗಿಗಳನ್ನು ರೈಲ್ವೆ ಬೋಗಿ ಉತ್ಪಾದನಾ ಕಾರ್ಖಾನೆ ಬಿಇಎಂಎಲ್ ನೀಡುತ್ತಿದೆ.ಇದರ ಪರಿಶೀಲನಾ ಕಾರ್ಯ ನಡೆದು ಮಾರ್ಚ್ ವೇಳೆಗೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.
ಮಹಿಳೆಯರಿಗೆ ಪ್ರತ್ಯೇಕ ಬೋಗಿ ಇರಬೇಕೆಂಬ ಬೇಡಿಕೆ ಹಲವು ದಿನಗಳಿಂದ ಕೇಳಿಬರುತ್ತಿದ್ದು, ಹೆಚ್ಚುವರಿ ಬೋಗಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಮಾತ್ರ ಮೀಸಲಿರಿಸಲಾಗುವುದು ಆರು ಬೋಗಿಗಳ ರೈಲಿನಲ್ಲಿ ಲೋಕೋ ಪೈಲಟ್ ಕ್ಯಾಬಿನ್ ಹಿಂಬಾಗದ ಬೋಗಿಯನ್ನು ಮಹಿಳೆಯರಿಗೆ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಸ್ಪಷ್ಪಪಡಿಸಿದ್ದಾರೆ.
ನಮ್ಮ ಮೆಟ್ರೋ ಮೊದಲ ಹಂತ ಕಳೆದ ವರ್ಷ ಪೂರ್ಣಗೊಂಡ ನಂತರ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ 50 ರೈಲಿಗಳಿಗೆ ಮೂರು ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತಿದೆ.ಈಗ ಪ್ರತಿನಿತ್ಯ 4 ಲಕ್ಷ ಪ್ರಯಾಣಿಕರು ರೈಲಿನಲ್ಲಿ ಸಂಚರಿಸುತ್ತಿದ್ದಾರೆ. ಹೆಚ್ಚುವರಿ ಬೋಗಿ ಪೂರೈಕೆಗಾಗಿ ಕಳೆದ ವರ್ಷ ಬಿಇಎಂಎಲ್ ನೊಂದಿಗೆ 1421 ಕೋಟಿ ರೂ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.
ಉಳಿದಿರುವ ರೈಲ್ವೆ ಕಾಮಗಾರಿ ಜೂನ್ 2019ರಂದು ಪೂರ್ಣಗೊಳ್ಳಲಿದ್ದು , ಫೆಬ್ರುವರಿ 14ರಂದು ನಡೆಯುವ ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಪಾಲ್ಗೊಳ್ಳಲಿದ್ದಾರೆ ಎಂದು ಮಹೇಂದ್ರ ಜೈನ್ ತಿಳಿಸಿದರು.
ಶೀಘ್ರದಲ್ಲಿಯೇ ಎಲ್ಲ ನಿಲ್ದಾಣಗಳಲ್ಲಿ ಹೆಚ್ಚುವರಿ ಎಸ್ಕಾಲೇಟರ್
ಪ್ರಯಾಣಿಕರ ಅನುಕೂಲಕ್ಕಾಗಿ ಮೊದಲ ಹಂತದ ಎಲ್ಲಾ ನಮ್ಮ ಮೆಟ್ರೋ ರೈಲು ನಿಲ್ದಾಣಗಳು ಶೀಘ್ರದಲ್ಲಿಯೇ ಹೆಚ್ಚುವರಿ ಎಸ್ಕಾಲೆಟರ್ ಗಳನ್ನು ಪಡೆಯಲಿವೆ. ಪ್ರಸ್ತುತ ಇರುವ 196 ಎಸ್ಕಾಲೇಟರ್ ಗಳು ಹೆಚ್ಚುತ್ತಿರುವ ಪ್ರಯಾಣಿಕರಿಗೆ ಸಾಕಾಗುತ್ತಿಲ್ಲ. ಆದ್ದರಿಂದ 40 ನಿಲ್ದಾಣಗಳಲ್ಲಿ 29 ಹೆಚ್ಚುವರಿ ಎಸ್ಕಾಲೇಟರ್ ಅಳವಡಿಸಲು ಯೋಜಿಸಲಾಗಿದೆ ಎಂದು ಮಹೇಂದ್ರ ಜೈನ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಎಲ್ಲಾ ನಿಲ್ದಾಣಗಳಲ್ಲಿ 511 ಎಸ್ಕಾಲೇಟರ್ ಗಳನ್ನು ಅಳವಡಿಸಲಾಗುತ್ತಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳೊಳಗೆ ಎಲ್ಲಾ ನಿಲ್ದಾಣಗಳಲ್ಲಿ ಹೆಚ್ಚುವರಿ ಎಸ್ಕಾಲೇಟರ್ ಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ