ಬೆಂಗಳೂರು: ಫೆ.11 (ಬಾನುವಾರ) ಬೆಂಗಳೂರಿನಲ್ಲಿ ಮೊದಲ ಆವೃತ್ತಿಯ ಲೆಸ್ ಟ್ರಾಫಿಕ್ ಡೇ ನಡೆಯಲಿದೆ. ಪರಿಸರ ಮಾಲಿನ್ಯ ಪ್ರಮಾಣ ತಗ್ಗಿಸಲು ಖಾಸಗಿ ವಾಹನಗಳನ್ನು ಅತ್ಯಂತ ಕಡಿಮೆ ಬಳಕೆ ಮಾಡುವುದು, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಿಕೊಳ್ಳಬೇಕೆಂದು ಉದ್ದೇಶದೊಡನೆ ರಾಜ್ಯ ಸಾರಿಗೆ ಇಲಾಖೆ ಮತ್ತು ಇತರೆ ಸೇವಾ ಸಂಘಟನೆಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದೆ.