ಕದಿರೇಶನ್
ರಾಜ್ಯ
ಬೆಂಗಳೂರು: ಹಾಡಹಗಲೇ ಬಿಜೆಪಿ ಕಾರ್ಪೋರೇಟರ್ ಪತಿ ಕದಿರೇಶನ್ ಬರ್ಬರ ಹತ್ಯೆ
ಹಾಡಹಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 138ನೇ ವಾರ್ಡ್ ನ ಬಿಜೆಪಿ ಕಾರ್ಪೋರೇಟರ್ ರೇಖಾ ಅವರ....
ಬೆಂಗಳೂರು: ಹಾಡಹಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 138ನೇ ವಾರ್ಡ್ ನ ಬಿಜೆಪಿ ಕಾರ್ಪೋರೇಟರ್ ರೇಖಾ ಅವರ ಪತಿ ಕದಿರೇಶನ್ ಅವರನ್ನು ಬುಧವಾರ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಇಂದು ಮಧ್ಯಾಹ್ನ ಕಾಟನ್‌ಪೇಟೆ ವ್ಯಾಪ್ತಿಯ ಅಂಜನಪ್ಪ ಗಾರ್ಡನ್ ಬಳಿ ನಾಲ್ವರು ದುಷ್ಕರ್ಮಿಗಳು ಹಳೆ ರೌಡಿ ಕದಿರೇಶನ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಬೆಕ್ಕಿನ ಕಣ್ಣು ರಾಜೇಂದ್ರನ ಸಹಚರನಾಗಿ ಗುರುತಿಸಿಕೊಂಡಿದ್ದ ಕದಿರೇಶನ್ ಇತ್ತೀಚೆಗೆ ದೇವಸ್ಥಾನದ ಸಮೀಪ ಗಾಂಜಾ ಹೊಡೆಯಬೇಡಿ ಎಂದು ಕೆಲವು ಯುವಕರಿಗೆ ಬುದ್ಧಿವಾದ ಹೇಳಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ