ಬೆಂಗಳೂರಿನಲ್ಲಿ ಆನ್ ಲೈನ್ ಉದ್ಯೋಗ ವಂಚನೆ ಪ್ರಮಾಣದಲ್ಲಿ ಹೆಚ್ಚಳ, ದಿನಕ್ಕೆ ಸರಾಸರಿ 10 ಪ್ರಕರಣ ದಾಖಲು

ಇತ್ತೀಚೆಗೆ ಬೆಂಗಳೂರಿನಲ್ಲಿ ನಕಲಿ ಉದ್ಯೋಗದ ಆಫರ್ ನೀಡುವ ಪ್ರಕರಣಗಳು ಹೆಚ್ಚುತ್ತಿದೆ.
ಆನ್ ಲೈನ್ ಉದ್ಯೋಗ ವಂಚನೆ  = ಸಾಂದರ್ಭಿಕ ಚಿತ್ರ
ಆನ್ ಲೈನ್ ಉದ್ಯೋಗ ವಂಚನೆ = ಸಾಂದರ್ಭಿಕ ಚಿತ್ರ
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ನಕಲಿ ಉದ್ಯೋಗದ ಆಫರ್ ನೀಡುವ ಪ್ರಕರಣಗಳು ಹೆಚ್ಚುತ್ತಿದೆ. ಈ ಸಂಬಂಧ ಪ್ರತಿ ದಿನವೂ ಸುಮಾರು 10 ರಿಂದ 12 ಪ್ರಕರಣಗಳು ದಾಕಲಾಗುತ್ತಿದೆ. ಇಮೇಲ್ ಐಡಿ ಯನ್ನು ನಕಲು ಮಾಡುವ ಮತ್ತು ಬಹುರಾಷ್ಟ್ರೀಯ ಕಂಪನಿಗಳ ನಕಲಿ ಇಮೇಲ್ ಐಡಿಗಳನ್ನು ಸೃಷ್ಟಿಸುವ 3,600 ಕ್ಕೂ ಹೆಚ್ಚಿನ ಜಾಲತಾಣಗಳು ಕಾರ್ಯಾಚರಿಸುತ್ತಿದ. 
ಆನ್ ಲೈನ್ ವಂಚನೆ ಪ್ರಕರಣದ ಒಟ್ಟಾರೆ ಶೇ.39ರಷ್ಟು ಪ್ರಕರಣಗಳು ಆನ್ ಲೈನ್ ಉದ್ಯೋಗ ವಂಚನೆ ಪ್ರಕರಣಗಳೇ ಆಗಿರುತ್ತದೆ ಎಂದು ನಗರದ ಪೋಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಮುಖ್ಯವಾಗಿ ಇಮೇಲ್ ಕಾಂಪ್ರಮೈಸ್, ಉದ್ಯೋಗ ಪೋರ್ಟಲ್ ಗಳನ್ನು ಬಳಸಿ ನಿಜವಾದ ಇಮೇಲ್ ಐಡಿಗಳನ್ನು ಸೃಷ್ಟಿ ಮಾಡುವುದರ ಮೂಲಕ ಉದ್ಯೋಗ ಭರವಸೆ ನಿಡುವ ವಂಚನೆ ಜಾಲವಾಗಿದೆ.
ಒಂದು ವಾರದ ಹಿಂದೆ ಅಜಯ್ ಜಾನ್ (ಹೆಸರು ಬದಲಾಗಿದೆ)ಎನ್ನುವ ವ್ಯಕ್ತಿಯು ಈ ವಂಚನೆಗೆ ಬಲಿಯಾಗಿದ್ದ. ಆದರೆ ತನ್ನ ಕೌಶಲ್ಯ ಮತ್ತು ಜಾಗೃತಿಯಿಂದ ತಕ್ಷಣ ಎಚ್ಚೆತ್ತುಕೊಂಡಿದ್ದ. ಭಾರೀ ಮೊತ್ತದ ಹಣ ಪಾವತಿಸುವುದರಿಂದ ತಪ್ಪಿಸಿಕೊಂಡ.
ಅಜಯ್ ಉದ್ಯೋಗ ವೆಬ್ ತಾಣದಲ್ಲಿ ತನ್ನ ಕೆಲಸದ ವಿವರವನ್ನು ಹಾಕಿದ್ದು ಆತನಿಗೆ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯೊಂದರಿಂದ ಎಸ್ ಎಂಎಸ್ ಮತ್ತು ಅಧಿಕೃತ ಈಮೇಲ್ ಸ್ವೀಕರಿಸಿದ್ದ. ಆಫರ್ ಲೆಟರ್ ಮತ್ತು ಸಹಿಗಳನ್ನು ನೋಡಿದರೆ ಇದೊಂದು ವಂಚನೆ ಪ್ರಕರಣ ಎಂದು ಯಾರೂ ಊಹಿಸಲು ಸಾಧ್ಯವಾಗದು. ಆದರೆ ವಂಚಕರು ಅಜಯ್ ನಿಂದ  `9,000 ರೂ. ಮುಂಗಡ ಹಣ ಕೇಳಿದಾಗ ಈತನಿಗೆ ಇದೊಂದು ವಂಚನೆ ಜಾಲವೆನ್ನುವುದು ತಿಳಿದು ಹೋಗಿತ್ತು.
"ನಾನು ಹಣವನ್ನು ಕೊಡುವುದಿಲ್ಲ ಎಂದಾಗ ಕಂಪನಿ ನನ್ನ ಪ್ರೊಫೈಲ್ ನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ಬೆದರಿಸಿತ್ತು.  ಆದರೆ, ನಾನು ಅವರ ನಕಲಿ ಇಮೇಲ್ ಐಡಿ ಮತ್ತು ನಕಲಿ ಬ್ಲಾಗ್ ಸ್ಪಾಟ್ ವೆಬ್ ತಾಣವನ್ನು ಕಪ್ಪುಪಟ್ಟಿಗೆ ಸೇರಿಸಿದೆ" ಅಜಯ್ ಹೇಳಿದ್ದಾರೆ.
ಆದರೆ ಈ ರೀತಿ ಎಲ್ಲರೂ ಈ ವಂಚಕರ ಸುಳಿವನ್ನು ಅರಿಯಲು ಸಾಧ್ಯವಾಗುವುದಿಲ್ಲ. ಜನವರಿಯಲ್ಲಿ ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದ ರೂಪಾ ಬಿ (ಹೆಸರು ಬದಲಾಗಿದೆ) ಇಉದೇ ರೀತಿಯ ವಂಚನೆಗೆ ಬಲಿಯಾಗಿ `50,000 ರೂ. ಕಳೆದುಕೊಂಡಿದ್ದಾರೆ.
ಎಫ್ ಬಿಐ ಅಂಕಿ ಅಂಶಗಳು ಹೇಳುವಂತೆ ಜೂನ್ 2016 ರಲ್ಲಿ ಅಮೆರಿಕಾದಲ್ಲಿ  3.1 ಶತಕೋಟಿ ಡಾಲರ್ ಮೊತ್ತದ  ಬಿಇಸಿ ವಂಚನೆ ನಡೆದಿದೆ  ಜಾಗತಿಕ ಸೈಬರ್ ಭದ್ರತಾ ಸಂಸ್ಥೆಯು ಸಿಇಒ ಕೆ. ಮೂಖೆಯವರು ವಂಚಕರು, ಡೊಮೈನ್ ಗಳ ಮೂಲಕ ಪ್ರವೇಶವನ್ನು ಪಡೆದು ಹಣವನ್ನು ದೋಚಲು ಸುಳ್ಳು ಈಮೇಲ್ ಸೃಷ್ಟಿಸುತ್ತಾರೆ ಎಂದಿದ್ದಾರೆ.
"ಬಿ ಇಸಿ ದಾಳಿಗಳು ನಿಮ್ಮ ಸಾಮಾನ್ಯ ಫಿಶಿಂಗ್ ಅಥವಾ ಮಾಲ್ವೇರ್ ರೀತಿಯದಲ್ಲ, ಇದು ದೊಡ್ಡ ಪ್ರಮಾಣದ ಲಾಭ ತಂದುಕೊಡುವುದರ ಕಾರಣ ಇದಕ್ಕೆ ಜನಪ್ರಿಯತೆ ಸಿಕ್ಕಿದೆ" ಟ್ರೆಂಡ್ ಮೈಕ್ರೊ ನ ದಕ್ಷಿಣ ಪೂರ್ವ ಏಷ್ಯಾ ಮತ್ತು ಭಾರತ- ಉಪಾಧ್ಯಕ್ಷ, ನಿಲೇಶ್ ಜೈನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com