ಬೆಂಗಳೂರು ಸಂಚಾರ ನಿಯಮ ಪಾಲನೆ ವೈಫಲ್ಯಕ್ಕೆ ವಾಹನ ಸವಾರರು ಮಾತ್ರ ಕಾರಣವಲ್ಲ: ಸಂಚಾರ ತಜ್ಞರು

ಸಂಚಾರ ನಿಯಮದ ಪಾಲನೆಯಾಗದಿರುವುದಕ್ಕೆ ವಾಹನ ಸವಾರರನ್ನು ಸಂಪೂರ್ಣವಾಗಿ ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಂಚಾರ ನಿಯಮದ ಪಾಲನೆಯಾಗದಿರುವುದಕ್ಕೆ ವಾಹನ ಸವಾರರನ್ನು ಸಂಪೂರ್ಣವಾಗಿ ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ ಎಂದು ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜನರ ಮನಸ್ಥಿತಿ ಬದಲಾಗಬೇಕು.  ವಾಹನ ಸವಾರರು ಮಾತ್ರ ರಸ್ತೆ ನಿಯಮ ಪಾಲನೆಯಾಗದಿರಲು ಕಾರಣ ಎನ್ನುವುದು ತಪ್ಪಾಗುತ್ತದೆ ಎಂದು  ಸಂಚಾರ ತಜ್ಞ ಎಂ ಎನ್ ಶ್ರೀಹರಿ ಹೇಳಿದರು.
"ಟ್ರಾಫಿಕ್ ಫ್ಲೋ ದರವನ್ನು ಮಾಪನ ಮಾಡುವ ಮಾನದಂಡವೆಂದರೆ ಪ್ರಯಾಣಿಕ ಕಾರುಗಳ ಸಂಖ್ಯೆ (ಪಿಸಿಯು). ಟ್ರಾಫಿಕ್ ದರವು 1,100 ಪಿಸಿಯು ಗಳ ಕೆಳಗೆ ಇದ್ದರೆ, ರಸ್ತೆ ಸಂಚಾರ ನಿಯಮಗಳನ್ನು  ಕಾರ್ಯಗತಗೊಳಿಸಲಾಗುವುದಿಲ್ಲ, " ಅವರು ಹೇಳಿದ್ದಾರೆ. ಟ್ರಾಫಿಕ್ ಪರಿಣಿತ ಆಶಿಶ್ ವರ್ಮಾ ಹೇಳುವಂತೆ ವಾಹನ ಸವಾರರ ಮನಸ್ಥಿತಿ ಬೇರೆ ಬೇರೆ೪ಯದಾಗಿರುವ ಕಾರಣ ಬೆಂಗಳೂರಿನಲ್ಲಿ ಸಂಚಾರ ನಿಯಮ ಅಳವಡಿಕೆ ಕಷ್ಟ.
"ನಮ್ಮ ರಸ್ತೆಗಳಲ್ಲಿ ಲೇನ್ ಆಧಾರಿತ ಟ್ರಾಫಿಕ್ ಸಿಸ್ಟಮ್ ಅನ್ನು ಅಳವಡಿಕೆಗೆ ಹಲವು ನಿರ್ಬಂಧಗಳಿವೆ. ಒಂದೇ ರಸ್ತೆಯಲ್ಲಿ ಅನೇಕ ರೀತಿಯ ವಾಹನಗಳು ಸಂಚಾರ ನಡೆಸುತ್ತದೆ. ಬೆಂಗಳೂರಿಗಿಂತ ಟ್ರಾಫಿಕ್ ಸಾಂದ್ರತೆಯು ಕಡಿಮೆ ಇರುವ ದೇಶದಲ್ಲಿನ ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿಯೂ ಸಹ ಈ ಸಂಚಾರ ನಿಯಮಗಳ ಅಳವಡಿಕೆ ಆಗಿಲ್ಲ" ಅವರು ಹೇಳಿದ್ದಾರೆ. ಮೋಟಾರು ಚಾಲಕರು ಈ ಅಭ್ಯಾಸವನ್ನು ಅನುಸರಿಸಲು ಸರಿಯಾದ ಮೂಲಭೂತ ಸೌಕರ್ಯವನ್ನು ಒದಗಿಸಬೇಕಾಗಿದೆ ಎಂದು ಶ್ರೀಹರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com