ಮುಂದಿನ ವರ್ಷದಿಂದ ಬೆಂಗಳೂರಿನಲ್ಲಿ 24 ಗಂಟೆ ನಿರಂತರ ವಿದ್ಯುತ್: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಭರವಸೆ

ಬೆಂಗಳೂರು ನಗರದ ನಿವಾಸಿಗಳು ಶೀಘ್ರದಲ್ಲೇ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಮ್)ದಿಂದ ಉತ್ತಮ ಸೇವೆಯನ್ನು ಪಡೆಯಲಿದ್ದಾರೆ.
ಮುಂದಿನ ವರ್ಷದಿಂದ ಬೆಂಗಳೂರಿನಲ್ಲಿ 24 ಗಂಟೆ ನಿರಂತರ ವಿದ್ಯುತ್
ಮುಂದಿನ ವರ್ಷದಿಂದ ಬೆಂಗಳೂರಿನಲ್ಲಿ 24 ಗಂಟೆ ನಿರಂತರ ವಿದ್ಯುತ್
Updated on
ಬೆಂಗಳೂರು: ಬೆಂಗಳೂರು ನಗರದ ನಿವಾಸಿಗಳು ಶೀಘ್ರದಲ್ಲೇ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಮ್)ದಿಂದ ಉತ್ತಮ ಸೇವೆಯನ್ನು ಪಡೆಯಲಿದ್ದಾರೆ. ಮುಂದಿನ ಒಂದು ವರ್ಷದೊಳಗೆ ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಒದಗಿಸುವ ಗುರಿಯನ್ನು ನಿಗಮ ಹೊಂದಿದೆ. ಇದಕ್ಕಾಗಿ ನಗರದ ನಾಲ್ಕು ಉಪ ವಿಭಾಗಗಳನ್ನು ಮಾದರಿ ಉಪ ವಿಭಾಗಗಳನ್ನಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ.
ಪ್ರಾರಂಭದಲ್ಲಿ ಏಳು ಉಪ ವಿಭಾಗಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಬೆಸ್ಕಾಂ ನಾಲ್ಕು ವಿಭಾಗಗಳಲ್ಲಿ ಕಾರ್ಯಾಚರಿಸಲು ಮುಂದಾಗಿದೆ. ಯೋಜನೆಯ ಭಾಗವಾಗಿ,ನೆಲದಲ್ಲಿ ಕೇಬಲ್ ಅಳವಡಿಕೆಯೊಡನೆ ಓವರ್ ಹೆಡ್ ಕೇಬಲ್ ಗಳು ಮತ್ತು ಕಂಡಕ್ಟರ್ ವ್ಯವಸ್ಥೆಯನ್ನು ಬದಲಿಸುವ ಕೆಲಸವನ್ನು ಪ್ರಾರಂಭಿಸಲಾಗುತ್ತದೆ, ಇದರಿಂದ ಹವಾಮಾನ ಬದಲಾವಣೆಯಿಂದ ವಿದ್ಯುತ್ ಸರಬರಾಜಿಗೆ ಯಾವ ರೀತಿಯಲ್ಲಿ ತೊಂದರೆಯಾಗದೆಂದು ಹೇಳಲಾಗಿದೆ.
ಹೆಚ್ಚುವರಿಯಾಗಿ, ವಿದ್ಯುತ್ ಫೀಡರ್ ಗಳನ್ನು ಅಪ್ ಗ್ರೇಡ್ ಮಾಡುವ ಕೆಲಸವನ್ನು ಪ್ರಾರಂಭಿಸಲಾಗುತ್ತಿದ್ದು ಭೂಗತ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳುವ ಫೀಡರ್ ಪಿಲ್ಲರ್ ಪೆಟ್ಟಿಗೆಗೆಳನ್ನು ಇದಕ್ಕಾಗಿ ಅಳವಡಿಸಾಲಾಗುತ್ತದೆ.  ಇದು  ನಿವಾಸಿಗಳು ಮತ್ತು ನೌಕರರಿಗೆ ಹೆಚ್ಚು ಸುರಕ್ಷಿತವಾಗಿರುತ್ತದೆ. . ಸುಮಾರು 10,000 ಪೆಟ್ಟಿಗೆಗಳನ್ನು ನಾಲ್ಕು ಉಪ-ವಿಭಾಗಗಳಿಗೆ ಅಳವಡಿಸಲಾಗುತ್ತದೆ.
"ಒಮ್ಮೆ ಯೋಜನೆ ಪೂರ್ಣಗೊಂಡರೆ, ಆ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ಇರಲಿದೆ. ಇದರ ಜೊತೆಗೆ, ಸಂಸ್ಥೆಗೆ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ ಇಡೀ ವ್ಯವಸ್ಥೆಯು ಹೆಚ್ಚು ಸುರಕ್ಷಿತವಾಗಿರುತ್ತದೆ. ವಿದ್ಯುತ್ ಸರಬರಾಜಿನ ಗುಣಮಟ್ಟ ಸುಧಾರಣೆಯಾಗಲಿದ್ದು ಏರಿಳಿತಳು ತಗ್ಗಲಿದೆ. ಬೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕ ಪಿ ರಾಜೇಂದ್ರ ಚೋಳನ್ ಹೇಳಿದ್ದಾರೆ.
ಸ್ಥಳೀಯ ಮತ್ತು ವಾಣಿಜ್ಯ ಗ್ರಾಹಕರ ಆರೋಗ್ಯಕರ ಜನಸಂಖ್ಯೆಯ ಆಧಾರದ ಮೇಲೆ ಉಪವಿಭಾಗಗಳನ್ನು ಆಯ್ಕೆ ಮಾಡಲಾಗಿದೆ. ಯೋಜನೆಯಿಂದ ವಿದ್ಯುತ್ ಅಡಚಣೆ ಹಾಗೂ ಅಪಾಯದ ಘಟನೆಗಳಲ್ಲಿ ಭಾರೀ ಇಳಿಮುಖವಾಗಲಿದ್ದು ಸಂಸ್ಥೆಯ ಆದಾಯ ಹೆಚ್ಚುತ್ತದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ  ಮುಂದಿನ ಮೂರು ವರ್ಷಗಳಲ್ಲಿ, ಬೆಸ್ಕಾಮ್ ಮಾದರಿ ಉಪ-ವಿಭಾಗಗಳ ಸಂಖ್ಯೆಯನ್ನು 12 ಕ್ಕೆ ಹೆಚ್ಚಿಸಲು ಯೋಜಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com