ಬೆಂಗಳೂರು: ಸಿಬ್ಬಂದಿ ಎಂದು ವಿಧಾನಸೌಧದ ಸಿಎಂ ಕಚೇರಿಗೆ ನುಗ್ಗಿದ ಅಪರಿಚಿತ ಪೊಲೀಸರ ವಶಕ್ಕೆ

ಭದ್ರತಾ ಸಿಬ್ಬಂದಿ ಎಂದು ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ವಿಧಾನಸೌಧದಲ್ಲಿರುವ ಸಿಎಂ ಕಚೇರಿಗೆ ನುಗ್ಗಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದ್ದು ಆಡಳಿತ ಕೇಂದ್ರದ ...
ವಿಧಾನಸೌಧ
ವಿಧಾನಸೌಧ
ಬೆಂಗಳೂರು: ಭದ್ರತಾ ಸಿಬ್ಬಂದಿ ಎಂದು ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ವಿಧಾನಸೌಧದಲ್ಲಿರುವ ಸಿಎಂ ಕಚೇರಿಗೆ ನುಗ್ಗಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದ್ದು ಆಡಳಿತ ಕೇಂದ್ರದ ಭದ್ರತಾ ವೈಫಲ್ಯಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. 
ಭಾಸ್ಕರ್ ಎಂಬಾತ ಬೆಳಗ್ಗೆ 11.30ರ ವೇಳೆಗೆ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಕಾಣಿಸಿಕೊಂಡಿದ್ದಾನೆ,  ಆತನನ್ನು ಪೊಲೀಸರು ಪ್ರಶ್ನಿಸಿದಾಗ ತಾನು ವಿಧಾನಸೌಧ ಸಿಬ್ಬಂದಿ ಎಂದು ಹೇಳಿಕೊಂಡು ಹೋಗಿದ್ದಾನೆ. ವಿಧಾನಸೌಧದ ಮೂರನೇ ಗೇಟ್ ಬಳಿ ಶ್ವಾನ ದಳ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಆತನ ಬಳಿ ಯಾವುದೇ ಗುರುತಿನ ಪತ್ರ ಇಲ್ಲದಿರುವುದು ತಿಳಿದು ಬಂದಿದೆ. ಹೀಗಾಗಿ ಅನುಮಾನಗೊಂಡ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. 
ಸಿಎಂ ಸಿದ್ದರಾಮಯ್ಯ ಅವರಿಗೆ ತಾನು ದೂರು ನೀಡಲು ಬಂದಿದ್ದೆ, ಆದರೆ ಕಚೇರಿಯಲ್ಲಿ ಅವರು ಇರಲಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. 8ನೇ ತರಗತಿ ಅನುತ್ತೀರ್ಣನಾಗಿರುವ ಭಾಸ್ಕರ್ ಮಾನಸಿಕವಾಗಿ ನೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡು ಮೂಲದವನಾದ ಭಾಸ್ಕರ್ ಹೊರಮಾವು ಸಮೀಪದ ಕಲ್ಕೆರೆಯಲ್ಲಿ ವಾಸವಾಗಿದ್ದಾನೆ. ಈ ಘಟನೆ ನಂತರ ವಿಧಾನಸೌಧದ ಬಳಿ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com