ಮುಂಬಯಿಯಂತೆ ಮಂಗಳೂರಿನ ಹಲವು ರೆಸ್ಟೊರೆಂಟ್ ಗಳು ಪ್ರೇಮಿಗಳಿಗಾಗಿ ವಿಶೇಷವಾಗಿ ಅಲಂಕರಿಸಲ್ಪಟ್ಟಿತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರೀತಿಸುವ ಜೀವಗಳಿಗಾಗಿ ಹಲವು ಆಫರ್ ಗಳನ್ನು ನೀಡಲಾಗಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದಾಗಿ ಎಲ್ಲೆಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಸ್ಥಳದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಲಕ್ಷ್ಮಿ ಶೆಣೈ ಎಂಬುವರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡದಂತೆ ಮಂಗಳೂರಿನಾದ್ಯಂತ ಅಲಿಖಿತ ನಿಯಮ ಜಾರಿಯಾಗಿದೆ.