ಮಹಾಮಸ್ತಕಾಭಿಷೇಕ: ಕಾರ್ಯಕ್ರಮ, ಸಾರ್ವಜನಿಕ ದರ್ಶನಕ್ಕೆ ಸಮಯ ಇತ್ಯಾದಿ ವಿವರ

ಪ್ರವಾಸಿಗರ ಕೇಂದ್ರ ಬಿಂದುವಾಗಿರುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಆರಂಭವಾಗಿದ್ದು, ಫೆಬ್ರವರಿ 17ರಿಂದ ಫೆಬ್ರವರಿ 25ರವರೆಗೂ ಮಹಾಮಜ್ಜನ ಕಾರ್ಯಕ್ರಮ ನೆರವೇರಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹಾಸನ: ಪ್ರವಾಸಿಗರ ಕೇಂದ್ರ ಬಿಂದುವಾಗಿರುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಆರಂಭವಾಗಿದ್ದು, ಫೆಬ್ರವರಿ 17ರಿಂದ ಫೆಬ್ರವರಿ 25ರವರೆಗೂ ಮಹಾಮಜ್ಜನ ಕಾರ್ಯಕ್ರಮ ನೆರವೇರಲಿದೆ.
ಇಂದು ಬೆಳಗ್ಗೆ 5 ಗಂಟೆಯಿಂದಲೇ ಶ್ರವಣ ಬೆಳಗೊಳದ ವಿಂದ್ಯಗಿರಿಯಲ್ಲಿ ಬಾಹುಬಲಿ ಮೂರ್ತಿಗೆ ಮಹಾಮಜ್ಜನ ನಿಮಿತ್ತ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳು, ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಇಂದು 108 ಕಳಾಭಿಷೇಕ  ನಡೆಯಲಿದೆ. ಮಧ್ಯಾಹ್ಮ 2 ಗಂಟೆಯಿಂದ 3.30ರವರೆಗೂ ಹಾಲು, ಕೇಸರಿ, ಆರಿಶಿಣ, ಕಬ್ಬಿನರಸ ಮತ್ತು ಅಕ್ಕಿ ಹಿಟ್ಟು ಸೇರಿದಂತೆ ಹಲವು ಸುಂಗಂಧಿತ ಪದಾರ್ಥಗಳಿಂದ ಮಜ್ಜನ ಮಾಡಿಸಲಾಗುತ್ತದೆ. ಬಳಿಕ 3.30ರಿಂದ  5.030ರವರೆಗೂ ಪಂಚಾಮೃತ ಅಭಿಷೇಕ ನಡೆಯಲಿದ್ದು, 5.30 ರಿಂದ ಸಂಜೆ 6.00ಗಂಟೆಯವರೆಗೂ ಅಷ್ಟದ್ರವ್ಯ ಪೂಜೆ ಮತ್ತು ಮಹಾ ಮಂಗಳಾರತಿ ಕಾರ್ಯ ಕ್ರಮ ನಡೆಯುತ್ತದೆ.
ಸಂಜೆ 6.30ರ ಬಳಿಕ ಸಾರ್ವಜನಿಕರಿಗೆ ದರ್ಶನಾವಕಾಶ ಕಲ್ಪಿಸಲಾಗಿದೆ. ಅಂತೆಯೇ ಮಾರ್ಚ್ 5 ರಿಂದ ಪ್ರತೀ ಭಾನುವಾರ 2018ರ ಆಗಸ್ಟ್ ಅಂತ್ಯದವರೆಗೂ ಅದೇ ಪ್ರಮಾಣದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ.
ಉಳಿದಂತೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳ ವಿವರ ಇಲ್ಲಿದೆ.
ದಿನಾಂಕ: 17-02-2018 (ಶನಿವಾರ)
ಸಮಯ:
ಬೆಳಗ್ಗೆ 5.00 ರಿಂದ ಮಧ್ಯಾಹ್ನ 02.00: ಧಾರ್ಮಿಕ ವಿಧಿ ವಿಧಾನ, ತ್ಯಾಗಿಗಳು ಕಳಶಧಾರಿಗಳು ಆಸೀನರಾಗುವುದು
ಮಧ್ಯಾಹ್ನ 2.00ರಿಂದ 3.30: 108 ಕಳಶಾಭಿಷೇಕ (ಜಲಾಭಿಷೇಕ)
ಮಧ್ಯಾಹ್ನ 3.30ರಿಂದ ಸಂಜೆ 5.30: ಪಂಚಾಮೃತ ಅಭಿಷೇಕ
ಸಂಜೆ 5.30 ರಿಂದ 6.30: ಅಷ್ಟದ್ರವ್ಯ ಪೂಜೆ ಮತ್ತು ಮಹಾ ಮಂಗಳಾರತಿ
ಸಂಜೆ 6.30 ರಿಂದ ರಾತ್ರಿ 9.30: ಸಾರ್ವಜನಿಕರಿಗೆ ದರ್ಶನಾವಕಾಶ
ದಿನಾಂಕ: 18-02-2018 (ಭಾನುವಾರ)-25-02-2018 (ಭಾನುವಾರ)
ಸಮಯ:
ಬೆಳಗ್ಗೆ 8.00 ರಿಂದ ಬೆಳಗ್ಗೆ 11.00: 1008 ಕಳಶಾಭಿಷೇಕ (ಜಲಾಭಿಷೇಕ)
ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00: ಪಂಚಾಮೃತ ಅಭಿಷೇಕ
ಮಧ್ಯಾಹ್ನ 1.00ರಿಂದ 1.30: ಅಷ್ಟದ್ರವ್ಯ ಪೂಜೆ ಮತ್ತು ಮಹಾ ಮಂಗಳಾರತಿ
ಮಧ್ಯಾಹ್ನ 2.00ರಿಂದ ರಾತ್ರಿ 9.30: ಸಾರ್ವಜನಿಕರಿಗೆ ದರ್ಶನಾವಕಾಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com