ಕೇರಳದಂತೆ ಕರ್ನಾಟಕದ ಕರಾವಳಿಯ ನೀರಿನ ಮೇಲೆ ತೇಲಲಿವೆ ಬೋಟ್ ಹೌಸ್!

ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೇಲ್ದರ್ಜೆಗೇರಿಸಲು 459 ಕೋಟಿ ರು. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೇಲ್ದರ್ಜೆಗೇರಿಸಲು 459 ಕೋಟಿ ರು. ಘೋಷಿಸಿದೆ.
ಕೇರಳದ ಅಲೆಪ್ಪಿ ಮತ್ತು ತೆಕ್ಕಾಡಿಯಂತೆ ಕರ್ನಾಟಕದ ಕರಾವಳಿಯಲ್ಲಿ  ಪ್ರವಾಸಿಗರನ್ನು ಸೆಳೆಯಲು ಬೋಟ್ ಹೌಸ್ ನಿರ್ಮಿಸಲು ಯೋಜಿಸಿದೆ. ಪ್ರವಾಸಿಗರನ್ನು ಓಲೈಸಲು ತೇಲುವ ದೋಣಿಗಳಲ್ಲಿ ಕ್ಯಾಂಟೀನ್ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಕರಾವಳಿಯ ಕೆಲವು ಆಯ್ದ ಪ್ರದೇಶಗಳಲ್ಲಿ ಈ ಸೌಲಭ್ಯ ಒದಗಿಸಲಾಗುವುದು.
20 ಪಾರಂಪರಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಚಿಂತನೆ ಮಾಡಲಾಗಿದ್ದು, ಹಂಪಿ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ನಂದಿಹಿಲ್ಸ್,  ಸನ್ನತಿ ಮತ್ತು ಕಲಬುರಗಿ ಕೋಟೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು.
ದೆಹಲಿ ಹಾಟ್' ಮಾದರಿಯಂತೆ 'ಮೈಸೂರು ಹಾಟ್' ಅಭಿವೃದ್ಧಿಗೆ ಪ್ರಸ್ತಾಪಿಸಲಾಗಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ನಿಖರ  ಮಾಹಿತಿಗಾಗಿ ಮಾಹಿತಿ ಸಮೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com