ಗಾಯಗೊಂಡ ಕಾರ್ಮಿಕ ಅನಿಲ್ ನಿಶಾದ್ ಭಾನುವಾರ ಬೆಂಗಳೂರಿನ ಸ್ಯಾನ್ ಫೋರ್ಡ್ ಸ್ಪೆಷಾಲಿಟಿ  ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ
ಗಾಯಗೊಂಡ ಕಾರ್ಮಿಕ ಅನಿಲ್ ನಿಶಾದ್ ಭಾನುವಾರ ಬೆಂಗಳೂರಿನ ಸ್ಯಾನ್ ಫೋರ್ಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ

ಕಸವನಹಳ್ಳಿ ಕಟ್ಟಡ ಕುಸಿದ ಪ್ರಕರಣ: ಸಂಕಷ್ಟದಲ್ಲಿ ಗಾಯಾಳು ಕಾರ್ಮಿಕರು

ಕಸವನಹಳ್ಳಿ ಕಟ್ಟಡ ಕುಸಿತದಲ್ಲಿ ಗಾಯಗೊಂಡು ಸ್ಯಾನ್ ಫೋರ್ಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚ್ಫಿಕಿತ್ಸೆ ಪಡೆಯುತ್ತಿರುವ ಒಂಭತ್ತು ಮಂದಿ ತಮ್ಮ ಕತ್ತಲು ತುಂಬಿದ ಭವಿಷ್ಯಕ್ಕಾಗಿ ಚಿಂತಿತರಾಗಿದ್ದಾರೆ.
Published on
ಬೆಂಗಳೂರು: ಕಸವನಹಳ್ಳಿ ಕಟ್ಟಡ ಕುಸಿತದಲ್ಲಿ ಗಾಯಗೊಂಡು ಸ್ಯಾನ್ ಫೋರ್ಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚ್ಫಿಕಿತ್ಸೆ ಪಡೆಯುತ್ತಿರುವ ಒಂಭತ್ತು ಮಂದಿ ತಮ್ಮ ಕತ್ತಲು ತುಂಬಿದ ಭವಿಷ್ಯಕ್ಕಾಗಿ ಚಿಂತಿತರಾಗಿದ್ದಾರೆ. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಲು ಸಹ ಹಣವಿಲ್ಲದೆ ಮುಂದೇನು ಎಂದು ದಾರಿ ಕಾಣದೆ ಕಂಗಾಲಾಗಿದ್ದಾರೆ.
ಇದೇ ವೇಳೆ ಕಾರ್ಮಿಕರು ತನ್ನ ಭವಿಷ್ಯದಲ್ಲಿ ಕಟ್ಟಡ ಕಾಮಗಾರಿ ಕೆಲಸಗಳಲ್ಲಿ ತೊಡಗಿಕೊಳ್ಳಲು ಅಸಮರ್ಥರಾಗಿದ್ದು ಕಟ್ಟಡ ಕುಸಿತದಿಂದ ಗಾಯಗೊಂಡ ಈ ಕಾರ್ಮಿಕರಿಗೆ ಇದುವರೆಗೆ ಯಾವುದೇ ಪರಿಹಾರ ದೊರಕಿಲ್ಲ..
ದಿನದ ಎಂಟು ಗಂಟೆ ಕೆಲಸಕ್ಕೆ `600 ರೂ. ವೇತನ ಸಿಗುವುದೆನ್ನುವ ಆಸೆಯಿಂದ ಇವರೆಲ್ಲಾ ಉತ್ತರ ಪ್ರದೇಶದ ಗೋರಖ್ ಪುರದಿಂದ ಬಂದಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಇವರಿಗೆ ವೇತನ ಪಾವತಿಯಾಗಿರಲಿಲ್ಲ. ಇದೀಗ ಕಾರ್ಮಿಕರು ಪುನಃ ತಮ್ಮ ಊರುಗಳನ್ನು ಸೇರಲು ರೈಲ್ವೆ ಟಿಕೆಟ್ ಸಹ ದೊರಕಿರುವುದಿಲ್ಲ. "ನಮಗೆ  ಶಿಫಾರಸು ಮಾಡಲಾದ ಔಷಧಿಗಳನ್ನು ನೀಡುತ್ತಿಲ್ಲ, ಮನೆಗೆ ತೆರಳಲು ರೈಲು ಟಿಕೆಟ್ ಖರೀದಿಸಲು ಸಹ ನಮ್ಮಲ್ಲಿ ಹಣವಿಲ್ಲ. ನಾವು ನಮ್ಮ ಹಣವನ್ನೆಲ್ಲಾ ಕಳೆದುಕೊಂಡಿದ್ದೇವೆ.ನಮಗೆ ವೇತನ ಪಾವತಿಸ್ಲ್ಲ, ಸರಿಯಾದ ಔಷಧ ದೊರಕಿಲ್ಲ. ನಾವು ಪುನಃ ನಮ್ಮ ಹಳ್ಳಿಗಳಿಗೆ ತೆರಳುವುದಕ್ಕೆ ಬಯಸಿದ್ದೇವೆ" ಕಟ್ಟಡ ಕುಸಿತದ 12 ಗಂಟೆಗಳ ನಂತರ ಅವಶೇಷದಿಂದ ಹೊರಬಂದ ಪೇಂಟರ್ ಧೀರೇಂದ್ರ ಕುಮಾರ್ ಅವರ ಸ್ನೇಹಿತ ಜಿಮ್ಲೆಶ್ ಪಾಸ್ವಾನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಕಟ್ಟಡ ಕುಸಿತದ ನಾಲ್ಕು ದಿನಗಳ ನಂತರ, ಸಹ ಯಾರೊಬ್ಬರಿಗೆ ಆಸ್ಪತ್ರೆಯಲ್ಲಿ ಸೂಕ್ತ ಔಷಧಿನೀಡಲಾಗುತ್ತಿಲ್ಲ. ವಿಕಾಸ್ ಕನೌಜಾ (21) ನ ಕೈ, ಮುಖ ಮತ್ತು ಕೂದಲಿನ ಭಾಗಕ್ಕೆ ಬ್ಯಾಂಡೇಜ್ ಸುತ್ತಲಾಗಿದೆ. ಆಸ್ಪತ್ರೆಯ ವೈದ್ಯತಂಡದ ನಿರ್ವಾಹಕಿ ಸಿಲ್ವಿಯಾ ವಿಕ್ಟರ್ ಹೇಳುವಂತೆ ಆತನ ಬೆನ್ನುಮೂಳೆಗೆ ಬಲವಾದ ಗಾಯವಾಗಿದ್ದು ಆತನಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ.
ಸೀಮಿತ ಸಿಬ್ಬಂದಿ ಹೊಂದಿರುವ ಸ್ಟಾನ್ಫೋರ್ಡ್ ಆಸ್ಪತ್ರೆ ಸಾಕಷ್ಟು ಚಿಕ್ಕದಾದ ಆಸ್ಪತ್ರೆಯಾಗಿದೆ. ಒಂದೇ ಕೊಠಡಿಯಲ್ಲಿ ಎರಡು ಮೂರು ರೋಗಿಗಳು ಇರುತ್ತಾರೆ. ಇನ್ನು ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿರುವಂತೆರೋಗಿಗಳಿಗೆ ನೆರವಾಗಲು ಯಾವ ಸಹಾಯಕ ಸಿಬ್ಬಂದಿಗಳಿಲ್ಲ. ಕಟ್ಟಡ ಕುಸಿತದಲ್ಲಿ ಗಾಯಗೊಂಡವರನ್ನು ಸಮೀಪದ ದೊಡ್ಡ ಆಸ್ಪತ್ರೆಗೆ ಏಕೆ ದಾಖಲಿಸಲಾಗುತ್ತಿಲ್ಲ, ಅವರಿಗೆ ಉತ್ತಮ ವೈದ್ಯರ ತಂಡದಿಂದ ಏಕೆ ಚಿಕಿತ್ಸೆ ನೀಡಲಾಗುತ್ತಿಲ್ಲ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.

X

Advertisement

X
Kannada Prabha
www.kannadaprabha.com