ತ"ರಬೇತಿ ಪಡೆಯುತ್ತಿರುವ ಅಗರ ಹೈ ಸ್ಕೂಲ್ ವಿದ್ಯಾರ್ಥಿಗಳ ಒಂದು ತಂಡ
ರಾಜ್ಯ
ನಗರದ ಕಾಲೇಜು ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ರೋಬೋಟ್ ತಯಾರಿಕಾ ತರಬೇತಿ
ಜ್ಞಾನ ಮತ್ತು ರೋಬೋಟ್ ತಂತ್ರಜ್ಞಾನ ದಲ್ಲಿ ಪ್ರೀತಿ, ಅರಿವು ಮೂಡಿಸಲು ಬೆಂಗಳೂರು ಮೂಲದ ಮೂವರು ಕಾಲೇಜು ವಿದ್ಯಾರ್ಥಿಗಳು ಪ್ರಾಜಕ್ಟ್ ಎನ್ ಎಕ್ಸ್ ಜಿ ಎನ್ನುವ ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ಬೆಂಗಳೂರು: ವಿಜ್ಞಾನ ಮತ್ತು ರೋಬೋಟ್ ತಂತ್ರಜ್ಞಾನ ದಲ್ಲಿ ಪ್ರೀತಿ, ಅರಿವು ಮೂಡಿಸಲು ಬೆಂಗಳೂರು ಮೂಲದ ಮೂವರು ಕಾಲೇಜು ವಿದ್ಯಾರ್ಥಿಗಳು ಪ್ರಾಜಕ್ಟ್ ಎನ್ ಎಕ್ಸ್ ಜಿ ಎನ್ನುವ ಯೋಜನೆಯನ್ನು ಪ್ರಾರಂಭಿಸಿದ್ದಾರೆ . ಈ ಯೋಜನೆಯಲ್ಲಿ ವಿಜ್ಞಾನ ಮತ್ತು ರೋಬೋಟ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶವಿಲ್ಲದ ಮಕ್ಕಳಿಗೆ ಈ ವಿದ್ಯಾರ್ಥಿಗಳು ತರಬೇತಿ ನೀಡುತ್ತಿದ್ದಾರೆ. ಸ್ನೇಹಿತರಾದ ವಿನೋದ್ ಕುಮಾರ್ ಮತ್ತು ವಸಂತ್ ಸೊಲೊಮನ್ ಧೀರಜ್ ತಿವಾರಿ ಈ ಯೋಜನೆ ಪ್ರಾರಂಭಿಸಿದರು.
"ಅನನ್ಯ,,ಅವರು ಯುಎಸ್ ನಲ್ಲಿರುವ ಬಡ ಶಾಲೆಗಳಲ್ಲಿ ಲೆಜೋ ರೊಬೊಟಿಕ್ ತರಬೇತಿ ನೀಡುತ್ತಿದ್ದಾರೆ. ಅಲ್ಲಿ ಆಕೆ ಪ್ರಾರಂಭಿಸಿದ ಕಾರ್ಯವನ್ನೇ ಮಾದರಿಯಾಗಿಟ್ಟುಕೊಂಡು ನಾವು ಬೆಂಗಳೂರಿನಲ್ಲಿ ಈ ಯೋಜನೆ ತಯಾರಿಸಿದ್ದೇವೆ." ಧೀರಜ್ ಹೇಳಿದರು.ಹೀಗೆ ನಾವು ಈ ಎನ್ ಎಕ್ಸ್ ಜಿ ಪ್ರಾಜಕ್ಟ್ ಪ್ರಾರಂಭಿಸಿದೆವು. .ಭವಿಷ್ಯದ ತಂತ್ರಜ್ಞಾನದ ಬಗ್ಗೆ ಅವರಿಗೆ ನಿರ್ದಿಷ್ಟ ಮಟ್ಟದ ತರಬೇತಿಯನ್ನು ನೀಡುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಬಹಿರಂಗಪಡಿಸುವುದು ಇಲ್ಲಿನ ಮುಖ್ಯ ಕಲ್ಪನೆಯಾಗಿದೆ" ಎಂದು ಧೀರಜ್ ಹೇಳುತ್ತಾರೆ.
ಈ ಯೋಜನೆ ಪ್ರಾರಂಭಕ್ಕೆ ಸಾಕಷ್ಟು ಸವಾಲುಗಳು ಎದುರಾಗಿದ್ದು ನಾವು ಕಡಿಮೆ ಆದಾಯ ಮೂಲವಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೆವು. ಹಾಗೆಯೆ ಪಠ್ಯಕ್ರಮದ ಪ್ರಾರಂಭದಲ್ಲಿ ನಾವು ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಮೂಲಭುತ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ.ಆ ನಂತರದಲ್ಲಿ ಕೆಲವು ಸಂಕೀರ್ಣ ವಿಚಾರಗಳನ್ನು ತಿಳಿಸುತ್ತೇವೆ. ಅಂತಿಮವಾಗಿ ರಿಮೋಟ್ ಕಂಟ್ರೋಲ್ ಕಾರ್ ನ್ನು ವಿನ್ಯಾಸಗೊಳಿಸುವ ವಿಧಾನವನ್ನು ನಾವು ಮಕ್ಕಳಿಗೆ ಕಲಿಸಿಕೊಡಲಿದ್ದೇವೆ.ಇದಕ್ಕಾಗಿ ಒಂದು ವರ್ಷದ ಅವಧಿಗೆ ಸರಿಹೋಗುವಂತೆ ಪಠ್ಯಕ್ರಮವನ್ನು ರಚಿಸಲಾಗಿದ್ದು ಮೂರು ವಾರಗಳಿಗೊಮ್ಮೆ ಶಾಲೆಗೆ ತೆರಳಿ ಅಲ್ಲಿ ಎಂಟರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ತರಬೇತಿ ನೀಡುತ್ತೇವೆ.ಶಾಲಾ ವಿದ್ಯಾರ್ಥಿಗಳು ಸಾಕಷ್ಟು ಕುತೂಹಲಿಗಳಿದ್ದಾರೆ. ರೋಬೋಟಿಕ್ ತಂತ್ರಜ್ಞಾನದ ಬಗೆಗೆ ಅವರಲ್ಲಿ ಅತ್ಯಂತ ಆಸಕ್ತಿ ಇದೆ ಎನ್ನುವುದನ್ನು ನಾವು ಮನಗಂಡಿದ್ದೇವೆ. ನಾವು ಪ್ರತಿ ಮಂಗಳವಾರದಂದು ಶಾಲೆಗೆ ತೆರಳಿ ತರಗತಿ ತೆಗೆದುಕೊಳ್ಳುತ್ತಿದ್ದೇವೆ.
"ನಮ್ಮ ತರಗತಿಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇದೆ. ಗಂಡು ಮಕ್ಕಳಿಗೆ ಹೋಲಿಸಿದಾಗ ನಮ್ಮ ತರಬೇತಿಗೆ ಹಾಜರಾಗುವ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ. ಇದಕ್ಕೆ ಕಾರಣವೆಂದರೆ ನಾವು ನಿತ್ಯದ ತರಗತಿಗಳ ಶಾಲಾ ಅವಧಿ ಮುಕ್ತಾಯಗೊಂಡ ಮೇಲೆ ನಮ್ಮ ತರಬೇತಿ ಇರಿಸಿಕೊಳ್ಳುತ್ತೇವೆ. ಬಹುತೇಕ ಮಕ್ಕಳು ದೂರ ಪ್ರದೇಶದಿಂಡ ಬರುವುದರಿಣ್ದ ಸಂಜೆಯ ಮೇಲೆ ಹೆಣ್ಣು ಮಕ್ಕಳನ್ನು ತರಬೇತಿಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಹಾಗೆಂದು ನಾವು ಶಾಲಾ ಅವಧಿಯಲ್ಲಿ ತರಬೇತಿ ನೀಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ನಾವೀಗ ಹುಡುಗಿಯರಿಗಾಗಿ ಮಹಿಳಾ ತರಬೇತುದಾರರನ್ನು ಹೊಂದ;ಲು ಬಯಸಿದ್ದೇವೆ. ಅಲ್ಲದೆ ಶಾಲಾ ಅವಧಿಯಲ್ಲಿಯೇ ಒಂದು ಗಂಟೆ ಕಾಲವನ್ನು ನಮಗೆ ನೀಡುವಂತೆ ಶಾಲಾ ಶಿಕ್ಷಕರನ್ನು ಮನವೊಲಿಸುವ ಪ್ರಯತ್ನದಲ್ಲಿದ್ದೇವೆ. ಹೆಣ್ಣು ಮಕ್ಕಳಿಗೆ ಸಹ ನಮ್ಮ ತರಬೇತಿಯ ಉಪಯೋಗ ದೊರೆಯಬೇಕೆನ್ನುವುದು ನಮ್ಮ ಬಹುದೊಡ್ಡ ಆಸೆಯಾಗಿದೆ." ಧೀರಜ್ ಹೇಳುತ್ತಾರೆ.
ಎನ್ ಎಕ್ಸ್ ಜಿ ಪ್ರಾಜಕ್ಟ್ ಸದ್ಯ ನಗರದ ನಾಲ್ಕು ಶಾಲೆಗಳಲ್ಲಿ ಕಾರ್ಯಾಚರಿಸುತ್ತಿದೆ. ನಾವು ಬಿಡುವಿಲ್ಲದ ಟೈಮ್ ಟೇಬಲ್ ಹೊಂದಿದ್ದೇವೆ. ವಸಂತ್ ಪ್ರಸ್ತುತ ಐರ್ಲೆಂಡಿನಲ್ಲಿದ್ದು ಅಲ್ಲಿಂದಲೇ ಈ ಯೋಜನೆಯಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ತೋರುತ್ತಿರುವ ಆಸಕ್ತಿಯು ನಮಗೆ ಇನ್ನಷ್ಟು ಪ್ರೇರಣೆಯಾಗಿದೆ. ಧೀರಜ್ ಹೇಳಿದ್ದಾರೆ.

