ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ 200 ಕೋಟಿ ರೂ. ನೀಡಿದ ಬೆಂಗಳೂರು ದಂಪತಿ

ಬೆಂಗಳೂರು ಮೂಲದ ಉದ್ಯಮಿ ದಂಪತಿ ವಿಜಯ್ ಟಾಟಾ ಮತ್ತು ಅಮೃತಾ ಟಾಟಾ ದಂಪತಿ ನ್ಯೂ ಇಂಡಿಯಾ ಎ ಚಾರಿಟೆಬಲ್ ಟ್ರಸ್ಟ್ ಗೆ 200 ಕೋಟಿ ರು ಹಣ ನೀಡಿದ್ದಾರೆ....
ನ್ಯೂ ಇಂಡಿಯಾ ಎ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿದ ನಟ ಇಮ್ರಾನ್ ಹಶ್ಮಿ
ನ್ಯೂ ಇಂಡಿಯಾ ಎ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿದ ನಟ ಇಮ್ರಾನ್ ಹಶ್ಮಿ
ಬೆಂಗಳೂರು: ಬೆಂಗಳೂರು ಮೂಲದ ಉದ್ಯಮಿ ದಂಪತಿ ವಿಜಯ್ ಟಾಟಾ ಮತ್ತು ಅಮೃತಾ ಟಾಟಾ ದಂಪತಿ ನ್ಯೂ ಇಂಡಿಯಾ ಎ ಚಾರಿಟೆಬಲ್ ಟ್ರಸ್ಟ್ ಗೆ 200 ಕೋಟಿ ರು ಹಣ ನೀಡಿದ್ದಾರೆ.
ಬೆಂಗಳೂರಿನಲ್ಲಿ ಉಚಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕಾಗಿ ಈ ದಂಪತಿ ಹಣ ನೀಡಿದ್ದು ಬಾಲಿವುಡ್ ನಟ ಇಮ್ರಾನ್ ಹಸ್ಮಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಮ್ರಾನ್ ಹಸ್ಮಿ ಮಗಳ ಹುಟ್ಟುಹಬ್ಬದ ನಿಮಿತ್ತ ಆಸ್ಪತ್ರೆ ನಿರ್ಮಿಸಲು ಹಣ ನೀಡಲು ನಿರ್ಧರಿಸಿದ್ದರು.
ಈ ದಂಪತಿ ಕಳೆದ ಆರು ವರ್ಷಗಳಿಂದ ಸುಮಾರು 40 ಮಕ್ಕಳಿಗೆ ಆಶ್ರಯ ನೀಡಿದ್ದಾರೆ, ಸಮಾಜದ ಮುಖ್ಯವಾಹಿನಿಗೆ ತರಲು ಆ ಮಕ್ಕಳ ಕನಸನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನ್ಯೂ ಇಂಡಿಯಾ ಎಂಬ ಕಲ್ಪನೆ ಹುಟ್ಟಿಕೊಂಡಿತು. ಈ ಟ್ರಸ್ಟ್ ಮೂಲಕ ಮಹಿಳೆ, ಮಕ್ಕಳಿಗೆ ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹಾಗೂ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರಿಗೆ  ಮತ್ತೆ ಅವರ ಬದುಕನ್ನು ಕಟ್ಟಿಕೊಡಲು ಈ ಟ್ರಸ್ಟ್ ಆರಂಭವಾಗಿದೆ.
ಟ್ರಸ್ಟ್ ಗಾಗಿ ಈ ದಂಪತಿ 100 ಕೋಟಿ ರು. ಬೆಲೆಯ 50 ಎಕರೆ ಭೂಮಿಯನ್ನು ಟ್ರಸ್ಟ್ ಗೆ ನೀಡಿದ್ದು, 100 ಕೋಟಿ ರು ಹಣವನ್ನು ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಕೇರ್ ಆಸ್ಪತ್ರೆ ನಿರ್ಮಾಣಕ್ಕೆ ನೀಡಲಾಗುವುದು, ದೇಶಾದ್ಯಂತ ಎಲ್ಲಾ ಕ್ಯಾನ್ಸರ್ ರೋಗಿಗಳು ಬಂದು ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ, ಈ ಆಸ್ಪತ್ರೆಯಲ್ಲಿ 150 ಹಾಸಿಗೆಗಳಿರುತ್ತವೆ. ವಿವಿಧ ಹಂತಗಳಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದ್ದು, ಯುಕೆ ಮೂಲದ ಆರ್ಕಿಟೆಕ್ಟ್ ಮತ್ತು ಎಂಜಿನೀಯರ್ ಗಳು ಈ ಕಟ್ಟಡ ನಿರ್ಮಾಣ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com