ಮೆಟ್ರೋ ನಿಲ್ದಾಣದಲ್ಲಿ ತಲೆ ಎತ್ತಲಿವೆ ಹೇರ್ ಸಲೂನ್: ಕ್ಷಣಾರ್ಧದಲ್ಲಿ ಕೇಶವಿನ್ಯಾಸ

ಮೆಟ್ರೊ ರೈಲಿಗೆ ಹತ್ತುವ ಮೊದಲು ನಿಮ್ಮ ಗಡ್ಡವನ್ನು ಟ್ರಿಮ್ ಮಾಡಿಸಿಕೊಳ್ಳಬೇಕೆ, ಪುರುಷರು ಮತ್ತು ಮಹಿಳೆಯರು ಕೂದಲು ಕತ್ತರಿಸಿಕೊಳ್ಳಬೇಕೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಮೆಟ್ರೊ ರೈಲಿಗೆ ಹತ್ತುವ ಮೊದಲು ನಿಮ್ಮ ಗಡ್ಡವನ್ನುಟ್ರಿಮ್ ಮಾಡಿಸಿಕೊಳ್ಳಬೇಕೆನಿಸುತ್ತದೆಯೇ ಅಥವಾ ಕೂದಲು ಕತ್ತರಿಸಿಕೊಳ್ಳಬೇಕೆನಿಸಿದರೆ ಅದುತಕ್ಷಣಕ್ಕೆ ಸಾಧ್ಯವಾಗುವ ಸಮಯ ಸನ್ನಿಹಿತವಾಗಿದೆ. ಆರು ತಿಂಗಳ ಹಿಂದೆ ಪ್ರಸ್ತಾವನೆಯಂತೆ ಬೆಂಗಳೂರುಮೆಟ್ರೊ ರೈಲು ನಿಗಮ ಹೈಟೆಕ್ ಯೂನಿಸೆಕ್ಸ್ ಸಲೂನ್ ನ್ನು ಆರಂಭಿಸುತ್ತಿದ್ದು ಮೊದಲ ಸಲೂನ್ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ಇದೇ ಭಾನುವಾರ ಉದ್ಘಾಟನೆಗೊಳ್ಳುತ್ತಿದೆ.

ಹೈದರಾಬಾದ್ ಮೂಲದ ಸೂಪರ್ ಎಕ್ಸ್ ಪ್ರೆಸ್ಸಲೂನ್ 5 ವರ್ಷಗಳ ಗುತ್ತಿಗೆ ಪಡೆದುಕೊಂಡಿದ್ದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆಸಲೂನ್ ತೆರೆದಿರುತ್ತದೆ. ಮೆಟ್ರೊ ನಿಲ್ದಾಣದೊಳಗೆ ಸಲೂನ್ ಆರಂಭಿಸುವುದು ದೇಶದಲ್ಲಿ ಇದೆ ಮೊದಲು.

ವೇಕಮ್ ವಾಷಿಂಗ್ ಎಂಬುದು ಸಲೂಲ್ ನ ಮುಖ್ಯಪರಿಕಲ್ಪನೆಯಾಗಿದೆ. ತಲೆಕೂದಲು ಕತ್ತರಿಸಿದ ನಂತರ ವಾಕ್ಯುಮ್ ಕ್ಲೀನರ್ ತರಹದ ಉಪಕರಣಉಪಯೋಗಿಸುತ್ತಾರೆ. ಇದರಿಂದ ತಲೆಕೂದಲು ಮತ್ತು ಗಡ್ಡ ಕತ್ತರಿಸಿಕೊಂಡ ವ್ಯಕ್ತಿಯ ಬಟ್ಟೆಯಲ್ಲಿಅಥವಾ ದೇಹದ ಮೇಲೆ ತಲೆಕೂದಲು ಬಿದ್ದಿರುವುದಿಲ್ಲ ಎಂದು ಸಲೂನ್ ನ ಶ್ರೀದೇವಿ ರೆಡ್ಡಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಅಲ್ಲದೆ ಗ್ರಾಹಕರ ಕೂದಲು ಕತ್ತರಿಸಲು ಬಳಸಿದಬಾಚಣಿಗೆಯನ್ನು ಆ ವ್ಯಕ್ತಿಗೆ ಉಚಿತವಾಗಿ ನೀಡಲಾಗುತ್ತದೆ. ಆವರಣ ಸುತ್ತಮುತ್ತಸ್ವಚ್ಛವಾಗಿಟ್ಟುಕೊಳ್ಳಲು ಈ ಎಲ್ಲಾ ಕ್ರಮವನ್ನು ಅನುಸರಿಸುತ್ತೇವೆ ಎನ್ನುತ್ತಾರೆ ಅವರು, ಈಸಂಸ್ಥೆ ಎಂ.ಜಿ.ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ ಮತ್ತು ಮಹಾಲಕ್ಷ್ಮಿ ಲೇ ಔಟ್ ಮೆಟ್ರೊನಿಲ್ದಾಣದಲ್ಲಿ ಕೂಡ ಸಲೂನ್ ಆರಂಭಿಸಲು ಗುತ್ತಿಗೆ ಪಡೆದುಕೊಂಡಿದೆ.

2012ರಲ್ಲಿಯೇ ಬೆಂಗಳೂರಿನ ಮೆಟ್ರೊನಿಲ್ದಾಣದಲ್ಲಿ ಸಲೂನ್ ತೆರೆಯಲು ನಾವು ಯೋಜನೆ ಹಾಕಿಕೊಂಡಿದ್ದೆವು. ಆದರೆ ಅಷ್ಟೊಂದು ಪ್ರೋತ್ಸಾಹಸಿಗದ ಕಾರಣ ಮುಂದೂಡಲಾಯಿತು. ಇಂದು ಪ್ರತಿ ಮೆಟ್ರೊ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 10,000ಪ್ರಯಾಣಿಕರು ಬಂದು ಹೋಗುತ್ತಾರೆ. ಹೀಗಾಗಿ ಇದು ಉತ್ತಮ ಅವಕಾಶ, ಕಡಿಮೆ ಸಮಯದಲ್ಲಿ ಅಗ್ಗದದರದಲ್ಲಿ ಸಲೂನ್ ನಲ್ಲಿ ಸೇವೆ ನೀಡುವುದು ನಮ್ಮ ಗುರಿಯಾಗಿದೆ. ಸಂತೋಷವು ಉತ್ತಮ ಕೂದಲು ದಿನ!ಎಂಬುದು ಸಲೂನ್ ನ ಧ್ಯೇಯವಾಕ್ಯವಾಗಿದೆ ಎನ್ನುತ್ತಾರೆ.

ಸಲೂನ್ ನಲ್ಲಿ 8 ಮಂದಿ ಎಲ್ಲಾ ಪುರುಷಸಿಬ್ಬಂದಿಯಿರುತ್ತಾರೆ. ಪ್ರತಿ ವ್ಯಕ್ತಿಗೆ ಶೇಕಡಾ 18ರಷ್ಟು ಜಿಎಸ್ ಟಿ ಸೇರಿದಂತೆ 150 ರೂಪಾಯಿ,ಮಹಿಳೆಯರಿಗೆ ಯಾವುದೇ ವಿನ್ಯಾಸದಲ್ಲಿ ತಲೆಕೂದಲು ಕತ್ತರಿಸಿಕೊಂಡರೆ 200 ರೂಪಾಯಿ ದರವಿಧಿಸಲಾಗುತ್ತದೆ ಎಂದು ಶ್ರೀದೇವಿ ರೆಡ್ಡಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com