ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬೆಂಗಳೂರು ಶಾಸಕರಿಂದ ದುರುಪಯೋಗ: ಬಿಪಾಕ್

2013-14ರಿಂದ ಕಳೆದ ನಾಲ್ಕು ವರ್ಷಗಳಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ(ಲಾಡ್) ಹಣವನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 2013-14ರಿಂದ ಕಳೆದ ನಾಲ್ಕು ವರ್ಷಗಳಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ(ಲಾಡ್) ಹಣವನ್ನು ನಗರದ ಶಾಸಕರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ರಾಜಕೀಯ ಕಾರ್ಯ ಸಮಿತಿ(ಬಿಪಿಎಸಿ) ತಿಳಿಸಿದೆ.

ಅದು ತನ್ನ ವರದಿಯಲ್ಲಿ ಬೆಂಗಳೂರು ನಗರದ 27 ವಿಧಾನಸಭಾ ಕ್ಷೇತ್ರಗಳನ್ನು ಉಲ್ಲೇಖಿಸಿದೆ. ಲಾಡ್ ನಿಧಿಯಿಂದ ಅನುದಾನವಾಗಿ ಪ್ರತಿಯೊಬ್ಬ ಶಾಸಕರಿಗೂ 2 ಕೋಟಿ ರೂಪಾಯಿ ಹಣ ಸಿಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ಶಾಸಕರು 8 ಕೋಟಿ ರೂಪಾಯಿ ಪಡೆದಿದ್ದಾರೆ.

ಕರ್ನಾಟಕ ವಿಧಾಸಭೆ ಪ್ರದೇಶಾಭಿವೃದ್ಧಿ ಮಾರ್ಗಸೂಚಿ ಪ್ರಕಾರ, ಶಾಸಕರು ಈ ನಿಧಿಯನ್ನು ಶಿಕ್ಷಣ, ಮೂಲಭೂತಸೌಕರ್ಯ, ಕ್ರೀಡೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಶುಸಂಗೋಪನೆ, ತೋಟಗಾರಿಕೆ, ವಸತಿ, ಪ್ರವಾಸೋದ್ಯಮ ಮತ್ತು ಚರಂಡಿ ಕಾಮಗಾರಿಗಳಿಗೆ ಬಳಸಬಹುದು. ಆದರೆ ಸ್ಮಾರಕ ಭವನ, ಸಾಲ, ಅನುದಾನ ಇತ್ಯಾದಿಗಳಿಗೆ ಶಾಸಕರು ಹಣವನ್ನು ಬಳಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು ರಾಜಕೀಯ ಕಾರ್ಯ ಸಮಿತಿ ಸದಸ್ಯ ಆನಂದ್ ಗುಂಡೂ ರಾವ್ ಹೇಳುವ ಪ್ರಕಾರ, ಬೆಂಗಳೂರಿನ ಎಲ್ಲಾ 27 ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿವರ್ಷ 54 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಕಳೆದ 4 ವರ್ಷಗಳಲ್ಲಿ 216 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ನಮ್ಮ ವಿಶ್ಲೇಷಣೆ ಪ್ರಕಾರ, ಶೇಕಡಾ 20ರಷ್ಟು ಮೂಲಭೂತ ಸೌಕರ್ಯಗಳಿಗೆ, ನೀರಿಗೆ ಶೇಕಡಾ 18ರಷ್ಟು, ಶಿಕ್ಷಣಕ್ಕೆ ಶೇಕಡಾ 11ರಷ್ಟು, ಬೋರ್ ವೆಲ್ ಮತ್ತು ಪಂಪ್ ಸೆಟ್ ಗಳಿಗೆ ಶೇಕಡಾ7ರಷ್ಟು, ಚರಂಡಿ ಮತ್ತು ಒಳ ಚರಂಡಿ ಕಾಮಗಾರಿಗಳಿಗೆ ಶೇಕಡಾ 5ರಷ್ಟು ಮತ್ತು ಇತರ ಕೆಲಸಗಳಿಗೆ ಶೇಕಡಾ 38ರಷ್ಟು ವೆಚ್ಚ ಮಾಡಲಾಗಿದೆಯಷ್ಟೆ ಎಂದು ಬಿಪಿಎಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com