ಬಸ್ಸುಗಳಿಗೆ ಬೆಂಕಿ ತಗುಲಿರುವ (ಸಾಂದರ್ಭಿಕ ಚಿತ್ರ)
ಬಸ್ಸುಗಳಿಗೆ ಬೆಂಕಿ ತಗುಲಿರುವ (ಸಾಂದರ್ಭಿಕ ಚಿತ್ರ)

ಕಲಬುರ್ಗಿ: ರಾಜ್ಯಸಾರಿಗೆ ಸಂಸ್ಥೆ ಬಸ್ ಡಿಪೋದಲ್ಲಿ ಬೆಂಕಿ

ಇಲ್ಲಿನ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ 3ರಲ್ಲಿ ಇಂದು ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

ಕಲಬುರ್ಗಿ: ಇಲ್ಲಿನ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ 3ರಲ್ಲಿ ಇಂದು ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

ಇದಕ್ಕಿದ್ದಂತೆ  ಕಾಣಿಸಿಕೊಂಡ ಬೆಂಕಿ ಕೆಲ ಹೊತ್ತು ಧಗಧಗನೆ ಹೊತ್ತಿ ಉರಿದಿದೆ. ಪರಿಣಾಮ  ಹಲವು ಬಸ್ ಗಳಿಗೆ ಬೆಂಕಿ ವ್ಯಾಪಿಸಿದ್ದು, ದಟ್ಟವಾದ ಹೊಗೆ ಆವರಿಸಿಕೊಂಡಿತ್ತು

ಘಟನೆಯಲ್ಲಿ ಹಲವು ಬಸ್‌ಗಳು ಬೆಂಕಿ ತಗುಲಿ ಸುಟ್ಟು ಭಸ್ಮವಾಗಿವೆ. ಜತೆಗೆ ನೂರಾರು ಟೈರ್‌ಗಳು ಬೆಂಕಿಗಾಹುತಿ ಆಗಿವೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುವಂತಾಗಿದೆ.ಘಟನೆಯಿಂದ ಡಿಪೋಪಕ್ಕದ ಬಡಾವಣೆಯ ಜನರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು

Advertisement

X
Kannada Prabha
www.kannadaprabha.com