
ಬೆಂಗಳೂರು: ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಯುವಕರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಪತ್ರಕರ್ತೆ ತನ್ನಿಬ್ಬರು ಗೆಳೆಯರೊಂದಿಗೆ ಆರ್ ಎಚ್ ಬಿ ರಸ್ತೆ ಬಳಿ ಬಿಬಿಎಂಪಿ ಪಾರ್ಕ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದರು. ಬಂಧಿತರನ್ನು ಡಿಪ್ಲೊಮಾ ವಿದ್ಯಾರ್ಥಿ ಬಿಜಿತ್, ಮಿತುನ್ ಮತ್ತು ಆಶಿತ್ ಅಲಿಯಾಸ್ ನಿಖಿಲ್ ಎಂದು ಗುರುತಿಸಲಾಗಿದೆ.
ಇಂದಿರಾನಗರ ನಿವಾಸಿಯಾಗಿರುವ ಪತ್ರಕರ್ತೆ ಮಧ್ಯರಾತ್ರಿ 1.20ರ ಸುಮಾರಿಗೆ ತನ್ನಿಬ್ಬರು ಪುರುಷ ಸ್ನೇಹಿತರೊಂದಿಗೆ ಪೂರ್ವಂಕರ ಪಾರ್ಕ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ಯುವಕರು ಆಕೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಲು ಆರಂಭಿಸಿದರು. ಆಗ ಆಕೆ ಅವರನ್ನು ಬೈಯಲು ಆರಂಭಿಸಿದಾಗ ಅವರು ಸಹ ಜೋರು ಜೋರಾಗಿ ಮಾತನಾಡಲು ಆರಂಭಿಸಿದರು. ಆಗ ಆಕೆಯ ಸ್ನೇಹಿತ ಈ ಬಗ್ಗೆ ವಿಚಾರಿಸಿದಾಗ ಯುವಕರು ಆತನಿಗೆ ಹೊಡೆದು ನಿಂದಿಸಲಾರಂಭಿಸಿದರು. ಪತ್ರಕರ್ತೆ ತಕ್ಷಣವೇ ಪೊಲೀಯ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು.
ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಪೊಲೀಸರು ಬಿಜಿತ್ ನನ್ನು ಬಂಧಿಸಿದರು. ಆಗ ಅವನು ಮತ್ತಿಬ್ಬರ ಹೆಸರು ಹೇಳಿದನು. ಅವರ ನಿವಾಸದ ಬಳಿ ಬಂಧಿಸಲಾಯಿತು.
Advertisement