ರೂ. 5,233 ಕೋಟಿ ಮೊತ್ತದ 52 ಹೊಸ ಯೋಜನೆಗಳಿಗೆ ಕರ್ನಾಟಕ ರಾಜ್ಯ ಸಮಿತಿ ಒಪ್ಪಿಗೆ

ರೂ. 5,233.82 ಕೋಟಿ ಮೌಲ್ಯದ 52 ಹೊಸ ಯೋಜನೆಗಳಿಗೆ ರಾಜ್ಯ ಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸಮಿತಿ ಮಂಗಳವಾರ ಒಪ್ಪಿಗೆ ನೀಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು; ರೂ. 5,233.82 ಕೋಟಿ ಮೌಲ್ಯದ 52 ಹೊಸ ಯೋಜನೆಗಳಿಗೆ ರಾಜ್ಯ ಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸಮಿತಿ ಮಂಗಳವಾರ ಒಪ್ಪಿಗೆ ನೀಡಿದೆ. 
ರೂ. 5,233.82 ಕೋಟಿಯಲ್ಲಿ ರೂ. 63,913 ಉದ್ಯೋಗ ಸೃಷ್ಟಿಸುವುದಕ್ಕೆ ರಾಜ್ಯ ಸರ್ಕಾರ ಬಳಕೆ ಮಾಡಲಿದ್ದು, ಬೆಂಗಳೂರು ನಗರಕ್ಕಾಗಿ ರೂ.2,369.56 ವೆಚ್ಚ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಉಳಿದ ಹಣವನ್ನು ರಾಜ್ಯ ಇತರೆ ಭಾಗಗಳಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. 
ಬೆಂಗಳೂರು ಹೊರವಲಯಕ್ಕೆ ರೂ. 2,864.26 ಖರ್ಚು ಮಾಡಲು ಉದ್ದೇಶಿಸಲಾಗಿದ್ದು, ಕೈಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರಂತರ ಶ್ರಮಪಡುತ್ತಿದೆ ಎಂದು ರಾಜ್ಯದ ಮಾಹಿತಿ ಸಚಿವಾಲಯ ತಿಳಿಸಿದೆ. 
ಡಿ.30 ರಂದು ಸಮಿತಿ ಸಭೆ ನಡೆಸಿದ್ದು, ಸಭೆಯಲ್ಲಿ 52 ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com