ಕಟ್ಟಡ ನಿರ್ಮಾಣ ಕಾರ್ಮಿಕರ ಅನಾರೋಗ್ಯ ಪ್ರಕರಣ: ಸ್ಥಳಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳ ಭೇಟಿ
ವರ್ತೂರು ಶೋಭಾ ಡ್ರೀಮ್ಸ್ ಏಕರ್ಸ್ ನಲ್ಲಿ ಅಶುದ್ದ ನೀರು ಸೇವನೆಯಿಂದ ಮೂವರು ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಸೋಮವಾರ ಶೋಭಾ ಡ್ರೀಮ್ಸ್ ಸ್ಥಳಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳು........
ಬೆಂಗಳೂರು: ವರ್ತೂರು ಶೋಭಾ ಡ್ರೀಮ್ಸ್ ಏಕರ್ಸ್ ನಲ್ಲಿ ಅಶುದ್ದ ನೀರು ಸೇವನೆಯಿಂದ ಮೂವರು ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಸೋಮವಾರ ಶೋಭಾ ಡ್ರೀಮ್ಸ್ ಸ್ಥಳಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ಶೋಭಾ ಡೆವಲಪರ್ಸ್ ಸಂಸ್ಥೆಗೆ ಅವರು ನೋಟೀಸ್ ನೀಡಿದ್ದಾರೆ.
ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಸ್ಥೆಯಲ್ಲಿ ನೊಂದಾಯಿಸಿದವರಾಗಿದ್ದರೆ, ಅವರ ಕುಟುಂಬಗಳಿಗೆ 2 ಲಕ್ಷ ರೂ. ಇಲ್ಲದಿದ್ದರೆ, ಕೆಲಸಗಾರರ ಪರಿಹಾರನಿಧಿ ಕಾಯ್ದೆ ಪ್ರಕಾರ ಅವರಿಗೆ ಹಣ ನೀಡಲಾಗುತ್ತದೆ.
"ನಾವು ಕಾರ್ಮಿಕ ಆಯುಕ್ತರು ಮತ್ತು ಬಿಬಿಎಂಪಿ ಆರೋಗ್ಯ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ಲೇಬರ್ ಕಮೀಷನರ್ ಅವರು ತನಿಖೆಯನ್ನು ನಡೆಸುತ್ತಿರುವುದಾಗಿ ಹೇಳಿದ್ದಾರೆ ಮತ್ತು ತಪ್ಪಿತಸ್ಥರೆಂದು ಕಂಡುಬಂದರೆ, ಶೋಬಾ ಡೆವಲಪರ್ಸ್ ಸಂಸ್ಥೆಗೆ ನೀಡಲಾಗಿರುವ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದಿದ್ದಾರೆ."ಪರ್ಯಾಯ ಕಾನೂನು ವೇದಿಕೆಯ ಸದಸ್ಯೆ ದರ್ಶನಾ ಮಿತ್ರ ಹೇಲಿದರು.
"ವಾರಾಂತ್ಯದಲ್ಲಿ ಎಲ್ಲಾ ನಿರ್ಮಾಣ ಸ್ಥಳಗಳನ್ನು ಪರಿಶೀಲಿಸಲು ಅವರು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಅಧಿಕಾರಿ ಕಲ್ಪನಾ ಅವರಿಗೆ ನಾವು ಸೂಚನೆ ನೀಡಿದ್ದೇವೆ ಎಂದು ಆರೋಗ್ಯ ಆಯುಕ್ತ ಸರ್ಫರಾಜ್ ಖಾನ್ ಹೇಳಿದ್ದಾರೆ." ಎಂದು ಅವರು ಹೇಳಿದ್ದಾರೆ