ಕಮಾಂಡ್ ಆಸ್ಪತ್ರೆ
ಕಮಾಂಡ್ ಆಸ್ಪತ್ರೆ

ಬೆಂಗಳೂರಿನ ಐಎಎಫ್ ಕಮಾಂಡ್ ಆಸ್ಪತ್ರೆಗೆ 2017ರ ಅತ್ಯುತ್ತಮ ರಕ್ಷಣಾ ವಲಯದ ಆಸ್ಪತ್ರೆ ಪ್ರಶಸ್ತಿ

ವಾಯುಪಡೆಯ ಸುಪರ್ದಿಯಲ್ಲಿರುವ ಬೆಂಗಳೂರಿನ ಕಮಾಂಡ್ ಆಸ್ಪತ್ರೆ ರಕ್ಷಣಾ ಇಲಾಖೆ ಆಸ್ಪತ್ರೆಗಳ ಸಾಲಿನಲ್ಲಿ 2017ರ ಅತ್ಯುತ್ತಮ ಆಸ್ಪತ್ರೆ ಎಂಬ ಗೌರವಕ್ಕೆ ಪಾತ್ರವಾಗಿದೆ.
Published on
ಬೆಂಗಳುರು: ವಾಯುಪಡೆಯ ಸುಪರ್ದಿಯಲ್ಲಿರುವ ಬೆಂಗಳೂರಿನ ಕಮಾಂಡ್ ಆಸ್ಪತ್ರೆ ರಕ್ಷಣಾ ಇಲಾಖೆ ಆಸ್ಪತ್ರೆಗಳ ಸಾಲಿನಲ್ಲಿ 2017ರ ಅತ್ಯುತ್ತಮ ಆಸ್ಪತ್ರೆ ಎಂಬ ಗೌರವಕ್ಕೆ ಪಾತ್ರವಾಗಿದೆ.
ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಆಪರೇಷನ್ ಮತ್ತು ಮ್ಯಾನೇಜ್ ಮೆಂಟ್, ವೈದ್ಯಕೀಯ ಸೇವೆಗಳು ಮತ್ತು ವೈದ್ಯಕೀಯ ಶಿಕ್ಷಣವನ್ನು ಒದಗಿಸುವ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಇವುಗಳಲ್ಲಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆ ಅತ್ಯುತ್ತಮ ಶ್ರೇಯಾಂಕ ಪಡೆದುಕೊಂಡಿದೆ. ಕಮಾಂಡ್ ಆಸ್ಪತ್ರೆ  ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದು ಅರ್ಜಿಯಲ್ಲಿ ಐದು ದಶಕಗಳಿಂದ ಸಾರ್ವಜನಿಕರಿಗೆ ಒದಗಿಸಲಾದ ಆರೋಗ್ಯ ಸೇವಾ ಸೌಲಭ್ಯಗಳ ಮಾಹಿತಿಗಳನ್ನು ಅಗತ್ಯ ದಾಖಲೆಗಳೊಡನೆ ಉಲ್ಲೇಖಿಸಲಾಗಿತ್ತು. 
ಇದನ್ನು ಪರಿಗಣಿಸಿದ ಪ್ರಶಸ್ತಿ ಆಯ್ಕೆ ಸಮಿತಿಯು ಕಮಾಡ್ ಆಸ್ಪತ್ರೆಗೆ  2017ರ ರಕ್ಷಣಾ ವಲಯದ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ. ಏರ್ ವೈಸ್ ಮಾರ್ಷಲ್ ಎಂ. ವಿ. ಸಿಂಗ್, ಕಮಾಂಡೆಂಟ್ ಮತ್ತು ಏರ್ ಕೊಮೊಡೊರ್ ಅಫ್ತಾಬ್ ಆಲಂ, ಉಪ ಕಮಾಂಡೆಂಟ್, ಕಮಾಂಡ್ ಹಾಸ್ಪಿಟಲ್ ವಾಯುಪಡೆ ಬೆಂಗಳೂರು ಇವರುಗಳು ಪ್ರಶಸ್ತಿ ಸ್ವೀಕರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com