ಬೆಂಗಳೂರು: ಬಣ್ಣದ ಲೋಕವನ್ನು ತೆರೆದಿಟ್ಟ ಚಿತ್ರಸಂತೆ, ಕಲಾವಿದರ ಕೈಚಳಕಕ್ಕೆ ಮರುಳಾದ ಜನ

ಬೆಂಗಳೂರಿನ ಕುಮಾರಕೃಪಾ ರಸ್ತೆ ಇಂದು ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿತ್ತು. ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 15ನೇ ಚಿತ್ರಸಂತೆ ಇದಾಗಿದ್ದು ಕಲಾಸಕ್ತರಿಗೆ ರಸದೌತಣ ನೀಡಿದೆ
ಚಿತ್ರಸಂತೆ
ಚಿತ್ರಸಂತೆ
Updated on

ಬೆಂಗಳೂರು: ಬೆಂಗಳೂರಿನ ಕುಮಾರಕೃಪಾ ರಸ್ತೆ ಇಂದು ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿತ್ತು. ಕರ್ನಾಟಕ  ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 15ನೇ ಚಿತ್ರಸಂತೆ ಇದಾಗಿದ್ದು ಕಲಾಸಕ್ತರಿಗೆ ರಸದೌತಣ ನೀಡಿದೆ.

ಜನರಲ್ಲಿ ಪರಿಸರ ಕಾಳಜಿ ಮೂಡಿಸಲು ಉದ್ದೇಶ ಹೊಂದಲಾಗಿದ್ದು ಅದರಂತೆ ಪರಿಸರ ಸಂದೇಶ ಸಾರುವ ನಾನಾ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು.

ಬಾರಿ ಸಹ ಎಂದಿನಂತೆಯೇ ಚಿತ್ರಸಂತೆಯಲ್ಲಿ ಹಿರಿಯ ಕಿರಿಯ ಕಲಾವಿದರ ಸಂಗಮವಾಗಿತ್ತು. ಸ್ಥಳೀಯ ಕಲಾವಿದರೊಡನೆ ಕಲಬುರ್ಗಿ, ಕೋಲ್ಕತ್ತಾ, ಕೊಯಮತ್ತೂರುಗಳಂತಹಾ ದೂರದ ಊರಿನಿಂದ ಕಲಾವಿದರು ಆಗಮಿಸಿದ್ದರುಹಾಗೆಯೇ ತಂಜಾವೂರು, ಮೈಸೂರು ಶೈಲಿಯ ಚಿತ್ರಗಳು, ತೈಲ ವರ್ಣ ಚಿತ್ರ, ಕುಸುರಿ ಕೆತ್ತನೆಯ ಚಿತ್ರ, ಥ್ರಿಡಿ ಕ್ಯಾಲೆಂಡರ್ ನಂತಹಾ ನಾನಾ ವೈವಿದ್ಯಮಯ ಕಲಾ ಪ್ರದರ್ಶನ ಏರ್ಪಾಡಾಗಿತ್ತು.

ನಾಡಿನ ಖ್ಯಾತನಾಮ ಕಲಾವಿದರ ಚಿತ್ರಗಳು ಬಾರಿ ಚಿತ್ರಸಂತೆಯಲ್ಲಿ ಪ್ರದರ್ಶನಗೊಂಡಿದ್ದದ್ದು ವಿಶೇಷ.

ಬಿ.ಕೆ.ಎಸ್. ವರ್ಮಾ, ಕೆ.ಕೆ. ಹೆಬ್ಬಾರ್, ಜಯರಾಂ ಪಾಟೀಲ್, ಜಿ.ಎಸ್. ಖಂಡೇರಾವ್ ಅವರಂತಹಾ ಹಿರಿಯ ಕಲಾವಿದರ ಚಿತ್ರಗಳು ಇಲ್ಲಿ ಪ್ರದರ್ಶನಕ್ಕೆ ತೆರೆದುಕೊಂಡಿದ್ದವು. ಇನ್ನು ಸಾಕಷ್ಟು ಕಲಾವಿದರು ತಾವೇ ಸ್ವತಃ ಭಾಗವಹಿಸಿದ್ದು ತಮ್ಮ ಚಿತ್ರಗಳ್ ಅಪ್ರದರ್ಶನ ಹಾಗೂ ಮಾರಾಟದಲ್ಲಿ ತೊಡಗಿದ್ದರು. ಅದರಲ್ಲಿ ಕೆಲವರನ್ನು 'ಕನ್ನಡಪ್ರಭ.ಕಾಂ' ಮಾತನಾಡಿಸಿದಾಗ ಅವರು ಸಂತೋಷದಿಂದ ತಮ್ಮ ಅನುಭವ ಹಂಚಿಕೊಂಡಿದ್ದಾರೆ-

"ನಾನುಕಳೆದ ಆರು ವರ್ಷಗಳಿಂದ ಚಿತ್ರಸಂತೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಚಿತ್ರಸಂತೆಗೆ ವ್ಯಾಪಾರ ದೃಷ್ಟಿಯಿಂದಬರಬಾರದು. ಇಲ್ಲಿ ಒಂದು ದಿನ ಪ್ರದರ್ಶನ ನಡೆಸುವುದರಿಂದ ಇಲ್ಲಿಗೆ ಆಗಮಿಸುವ ಲಕ್ಷ ಲಕ್ಷ ಜನರು ನಮ್ಮಕಲೆಯನ್ನು ನೋಡಿ ಸಂತಸ ಹೊಂದುತ್ತಾರೆ. ಅದರಲ್ಲಿ ಕೆಲವರಿಗಾದರೂ ನಮ್ಮ ಬಗೆಗೆ, ನಮ್ಮ ಕಲೆಯ ಬಗ್ಗೆಅಪಾರ ಒಲವು ಮೂಡುತ್ತದೆ. ಹೀಗಾಗಿ ಇಲ್ಲಿ ದುಡ್ಡು ಮುಖ್ಯವಾಗುವುದಿಲ್ಲ" ಹಿರಿಯ ಕಲಾವಿದರಾದಯಶವಂತ ಹಿಬಾರೆ ಹೇಳಿದರು.

"ನಾನುಕೋಲ್ಕತ್ತಾದಿಂದ ಬಂದಿದ್ದು ಈ ಚಿತ್ರಸಂತೆಗಾಗಿಯೇ ಕೆಲ ಚಿತ್ರಗಳನ್ನು ರಚಿಸಿ ತಂದಿದ್ದೇನೆ."ಎನ್ನುತ್ತಾರೆ ಕೋಲ್ಕತ್ತಾದ ಓರ್ವ ಕಲಾವಿದ.

ಕೊಯಮತ್ತೂರಿನಿಂದಆಗಮಿಸಿದ್ದ ವಿ.ಸುಬ್ರಮಣಿ ಮಾತನಾಡಿ, “ನಾನು ಕಳೆದ ಆರು ವರ್ಷಗಳಿಂದ ಈ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಿದ್ದುಮೊದಲ ಎರಡು ವರ್ಷ ಆದಂತಹಾ ವ್ಯಾಪಾರ ಇತ್ತೀಚೆಗೆ ಆಗಿಲ್ಲ" ಎಂದರು.

ಇನ್ನುಈ ಬಾರಿಯ ಚಿತ್ರ ಸಂತೆಯಲ್ಲಿ ಸ್ಥಳೀಯ ಕಲೆಗಳಾದ ಯಕ್ಷಗಾನ ಸೇರಿದಂತೆ ಗ್ರಾಮೀಣ ಸೊಗಡನ್ನು ಎತ್ತಿ ಹಿಡಿಯುವಕಲಾಕೃತಿಗಳ ಪ್ರದರ್ಶನ ಏರ್ಪಾಡಾಗಿತ್ತು. ಹೀಗೆ ಒಟ್ಟಾರೆ ಬೆಳಗಿನಿಂದ ಸಂಜೆಯವರೆಗೆ ಆಯೋಜಿತವಾದ ಈಚಿತ್ರಸಂತೆ ಲಕ್ಷ ಜನರ ಮನಸ್ಸನ್ನು ರಂಜಿಸಿದ್ದು ಮಾತ್ರ ಸುಳ್ಳಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com