ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು: ಕ್ಯಾಬ್ ಗಳ ಕನಿಷ್ಠ ದರ ನಿಗದಿ, ಟ್ಯಾಕ್ಸಿ ಸೇವೆ ಈಗ ಮತ್ತಷ್ಟು ದುಬಾರಿ
ರಾಜ್ಯ ಸರ್ಕಾರ ಸಿಲಿಕಾನ್ ಸಿಟಿಯ ಕ್ಯಾಬ್ ಗಳಿಗೆ ಕನಿಷ್ಠ ದರ ನಿಗದಿ ಮಾಡಿದ್ದು, ಇನ್ನುಮುಂದೆ ಟ್ಯಾಕ್ಸಿ ಸೇವೆ ಮತ್ತಷ್ಟು ....
ಬೆಂಗಳೂರು: ರಾಜ್ಯ ಸರ್ಕಾರ ಸಿಲಿಕಾನ್ ಸಿಟಿಯ ಕ್ಯಾಬ್ ಗಳಿಗೆ ಕನಿಷ್ಠ ದರ ನಿಗದಿ ಮಾಡಿದ್ದು, ಇನ್ನುಮುಂದೆ ಟ್ಯಾಕ್ಸಿ ಸೇವೆ ಮತ್ತಷ್ಟು ದುಬಾರಿಯಾಗಲಿದೆ.
ಸಣ್ಣ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ ಕನಿಷ್ಠ ದರ 44 ರುಪಾಯಿ ಹಾಗೂ ಐಷಾರಾಮಿ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ 80 ರುಪಾಯಿ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಟ್ಯಾಕ್ಸಿಗಳಿಗೆ ಕನಿಷ್ಠ ದರ ನಿಗದಿ ಪಡಿಸಿದ್ದರೂ ಟ್ಯಾಕ್ಸಿ ಕಂಪನಿಗಳು ಬಯಸಿದಷ್ಟು ಕಡಿಮೆ ದರ ವಿಧಿಸಬಹುದಾಗಿದೆ. ಆದರೆ ಕನಿಷ್ಠ ದರಕ್ಕಿಂತ ಹೆಚ್ಚು ವಿಧಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ನೂತನ ದರ ಪಟ್ಟಿಯ ಪ್ರಕಾರ, ಕಾರುಗಳ ಮಾರುಕಟ್ಟೆ ಬೆಲೆ ಆಧರಿಸಿ, ಪ್ರಯಾಣ ದರವನ್ನು ಎ, ಬಿ, ಸಿ ಮತ್ತು ಡಿ ನಾಲ್ಕು ಮಾದರಿಯ ದರಗಳನ್ನು ನಿಗದಿಪಡಿಸಲಾಗಿದೆ. ಸಣ್ಣ ಕಾರುಗಳು ಡಿ ದರ್ಜೆಯಲ್ಲಿ ಬರುತ್ತಿದ್ದು, ಅವುಗಳಿಗೆ ಕನಿಷ್ಠ 44 ರುಪಾಯಿ ಹಾಗೂ 16 ಲಕ್ಷ ರುಪಾಯಿಗೂ ಹೆಚ್ಚಿನ ಬೆಲೆಯ ಕಾರುಗಳಿಗೆ ಎ ದರ್ಜೆ ನೀಡಲಾಗಿದ್ದು, ಅದಕ್ಕೆ ಕನಿಷ್ಠ 80 ರುಪಾಯಿ ನಿಗದಿಪಡಿಸಲಾಗಿದೆ.
ಈ ಹಿಂದೆ 2013ರ ಜೂನ್ ನಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಸಣ್ಣ ಮಾದರಿಯ ಕಾರುಗಳ ಗರಿಷ್ಠ ಪ್ರಯಾಣ ದರವು 14.50 ರು. ಮತ್ತು ಮಧ್ಯಮ ಮಾದರಿ ಕಾರುಗಳಿಗೆ 19.50 ರು. ಪ್ರಯಾಣ ದರವಿತ್ತು. ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ಪ್ರಯಾಣ ದರ ಪರಿಷ್ಕರಣೆಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ದರ ಪರಿಷ್ಕರಣೆ ಮಾಡಿ, ಕನಿಷ್ಠ ದರ ನಿಗದಿಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ