ಚಾಮರಾಜನಗರಕ್ಕೆ ಸಿಎಂ ಸಿದ್ದರಾಮಯ್ಯ 10 ಬಾರಿ ಭೇಟಿ; ಜಿಲ್ಲೆಗೆ ಶಾಪ ವಿಮೋಚನೆ?

ಇದುವರೆಗೆ ಒಟ್ಟು 10 ಬಾರಿ ಚಾಮರಾಜನಗರಕ್ಕೆ ಸಿದ್ದರಾಮಯ್ಯ ಭೇಟಿಕೊಟ್ಟಿದ್ದು ಜಿಲ್ಲೆಗೆ ತಟ್ಟಿದ್ದ ಶಾಪ ವಿಮೋಚನೆಯಾಗಿದೆಯೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಮರಾಜನಗರ ತಾಲೂಕಿನ ನಾಗಾವಲಿಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಮರಾಜನಗರ ತಾಲೂಕಿನ ನಾಗಾವಲಿಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದರು
ಚಾಮರಾಜನಗರ: ಇದುವರೆಗೆ ಒಟ್ಟು 10 ಬಾರಿ ಚಾಮರಾಜನಗರಕ್ಕೆ ಸಿದ್ದರಾಮಯ್ಯ ಭೇಟಿಕೊಟ್ಟಿದ್ದು ಜಿಲ್ಲೆಗೆ ತಟ್ಟಿದ್ದ ಶಾಪ ವಿಮೋಚನೆಯಾಗಿದೆಯೆ?  ಚಾಮರಾಜನಗರಕ್ಕೆ ಭೇಟಿ ಕೊಟ್ಟ ಮುಖ್ಯಮಂತ್ರಿಗಳು, ಉನ್ನತ ಅಧಿಕಾರಿಗಳು ಆರು ತಿಂಗಳಿನಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆನ್ನುವ ನಂಬಿಕೆ ಬಹು ಹಿಂದಿನ ಕಾಲದಿಂದಲೂ ಇದೆ. ಸಮಾಜವಾದಿ ತತ್ವಪಾಲಕರಾಗಿದ್ದ ಜೆ.ಎಚ್. ಪಟೇಲ್  ಆದಿಯಾಗಿ ಬಹುತೇಕ ಮುಖ್ಯಮಂತ್ರಿಗಳು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿದ್ದದ್ದು ಇದೇ ಕಾರಣಕ್ಕಾಗಿತ್ತು. ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಚಾಮರಾಜನಗರ ಜಿಲ್ಲೆ ರಚನೆ ಮಾಡಿದಾಗ ಸಹ ಕೊಳ್ಳೆಗಾಲದ ಮಲೆ ಮಾದೇಶ್ವರ ಬೆಟ್ಟ್ದದಿಂದಲೇ ಜಿಲ್ಲೆಯ ಉದ್ಘಾಟನೆ ನೆರವೇರಿಸಿದ್ದು ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಇನ್ನು ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯ ಕಡೆ ದಿನಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.ಕಾಕತಾಳೀಯ ವೆನ್ನುವಂತೆ ಅವರು ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿಲ್ಲ.
ಆದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ಚಾಮರಾಜನಗರ ಪಟ್ಟಣಕ್ಕೆ 10  ಬಾರಿ, ಜಿಲ್ಲೆಗೆ 23 ಬಾರಿ ಭೇಟಿ ಕೊಟ್ಟಿದ್ದಾರೆ. ಇದಲ್ಲದೆ ಮುಖ್ಯಮಂತ್ರಿಗಳು ಜಿಲ್ಲೆಯ 280 ಕೋಟಿ ರೂ. ಮೌಲ್ಯದ ಕುಡಿಯುವ ನೀರಿನ ಯೋಜನೆ ಸೇರಿ ಒತ್ಟಾರೆ 800 ಕೋಟಿ ರೂ. ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಸಿದ್ದರಾಮಯ್ಯ ಇತ್ತೀಚೆಗೆ ಚಾಮರಾಜನಗರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ಜಿಲ್ಲಾ ಕಛೇರಿ ಆವರಣದಲ್ಲಿ ಚಾಮರಾಜನಗರ ಕೈಗಾರಿಕಾ ಪ್ರದೇಶ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. "ಚಾಮರಾಜನಗರವು ಪ್ರತ್ಯೇಕ ಜಿಲ್ಲೆಯಾಗಿದ್ದರೂ ನಾನನ್ದನ್ನು ಇನ್ನೂ ಮೈಸೂರಿನ ಭಾಗವಾಗಿಯೇ ನೊಡುತ್ತೇನೆ. ನಾನು ಇದುವರೆಗೆ ಒಟ್ಟು 23 ಬಾರಿ ಈ ಜಿಲ್ಲೆಗೆ ಭೇಟಿ ಕೊಟ್ಟಿದ್ದೇನೆ. ಈ ಜಿಲ್ಲೆ ಶಾಪಗ್ರಸ್ತ ಪ್ರದೇಶವಲ್ಲ. ನನಗೆ ನಂಬಿಕೆ ಇರುವಂತೆ ನಾನು ಇಲ್ಲಿಗೆ ಭೇಟಿ ನೀಡಿದ್ದರಿಂದಾಗಿ ಚುನಾವಣೆಯಾಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದಲ್ಲದೆ ನಾನು ಇನ್ನೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ.ನಾನು ಚಾಮರಾಜನಗರಕ್ಕೆ ಅತ್ಯಂತ ಸಂತಸ ಹಾಗು ಪ್ರೀತಿಯಿಂದ ಆಗಮಿಸುತ್ತೇನೆ." ಚಾಮರಾಜನಗರದ ನಾಗಾವಲಿಯಲ್ಲಿ ನಡೆದ ನವ ಕರ್ನಾಟಕ ರ್ಯಾಲಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿಗಳು ಮತ್ತೊಮ್ಮೆ ಅಧಿಕಾರ ಹಿಡಿಯುತ್ತಾರೆ ಎಂದು ಸಾಬೀತುಪಡಿಸಲು ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಮತ್ತು ಸರಕಾರವನ್ನು ಬೆಂಬಲಿಸಲು ಚಾಮರಾಜನಗರ ಜನತೆಗೆ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com