ನಮ್ಮ ಮೆಟ್ರೋ ನಿಲ್ದಾಣಕ್ಕೆ ಬಂಬೂ ಬಜಾರ್ ಜಾಗವೇ ಅಂತಿಮ

ಕಂಟೋನ್ ಮೆಂಟ್ ಮೆಟ್ರೊ ಸ್ಟೇಷನ್ ನ್ನು ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸಬೇಕೆಂಬ ...
ಬಂಬೂ ಬಜಾರ್ ರಸ್ತೆಯಲ್ಲಿ ಬಿಬಿಎಂಪಿ ಆಟದ ಮೈದಾನದಲ್ಲಿ ತಲೆಯೆತ್ತಲಿರುವ ಉದ್ದೇಶಿತ ಮೆಟ್ರೊ ನಿಲ್ದಾಣ
ಬಂಬೂ ಬಜಾರ್ ರಸ್ತೆಯಲ್ಲಿ ಬಿಬಿಎಂಪಿ ಆಟದ ಮೈದಾನದಲ್ಲಿ ತಲೆಯೆತ್ತಲಿರುವ ಉದ್ದೇಶಿತ ಮೆಟ್ರೊ ನಿಲ್ದಾಣ
ಬೆಂಗಳೂರು: ಕಂಟೋನ್ ಮೆಂಟ್ ಮೆಟ್ರೊ ಸ್ಟೇಷನ್ ನ್ನು ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸಬೇಕೆಂಬ ನಾಗರಿಕರ ಬೇಡಿಕೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಸೂಚಿಸಿರುವ ಪರ್ಯಾಯ ಸ್ಥಳವನ್ನು ಆಯ್ಕೆ ಮಾಡಲು ನಿರ್ಧರಿಸಿದೆ. 
ರೈಲ್ವೆ ನಿಲ್ದಾಣದ ಸಮೀಪ ಬಾಂಬೂ ಬಜಾರ್ ರಸ್ತೆಯಲ್ಲಿರುವ ಬೃಹಚ್ ಬೆಂಗಳೂರು ಮಹಾನಗರ ಪಾಲಿಕೆ ಒಡೆತನದ ಆಟದ ಮೈದಾನದಲ್ಲಿ ಮೆಟ್ರೊ ನಿಲ್ದಾಣವನ್ನು ಸ್ಥಾಪಿಸಲು ಮುಂದಾಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ವಿಷಯ ಖಚಿತಪಡಿಸಿದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬಿಎಂಆರ್ ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್, ಬಿಎಂಆರ್ ಸಿಎಲ್ ಪ್ರಸ್ತಾಪ ಮಾಡಿರುವ ತಾಂತ್ರಿಕ, ಹಣಕಾಸು ಮತ್ತು ತಾರ್ಕಿಕ ಪರಿಹಾರಗಳನ್ನು ಸರ್ಕಾರ ಅನುಮೋದಿಸಿದೆ. ಅದರ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೊಸ ಮೆಟ್ರೊ ನಿಲ್ದಾಣ ಶಿವಾಜಿನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ 800 ಮೀಟರ್ ದೂರದಲ್ಲಿದೆ. ಇಲ್ಲಿ ಪ್ರತಿನಿತ್ಯ ಸುಮಾರು 40,000 ಪ್ರಯಾಣಿಕರು ಹತ್ತಿಳಿಯುತ್ತಾರೆ. ಎರಡೂ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಎಸ್ಕಲೇಟರ್ ಗಳನ್ನು ಬಿಎಂಆರ್ ಸಿಎಲ್ ನಿರ್ಮಿಸುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. 
ಬಾಂಬೂ ಬಜಾರ್ ರಸ್ತೆಯ ಬಳಿ ರೈಲ್ವೆ ನಿಲ್ದಾಣ ಸ್ಥಾಪಿಸಲು ಬಿಬಿಎಂಪಿ ಕಚೇರಿಯನ್ನು ಕೆಡವಬೇಕಾಗುತ್ತದೆ ಮತ್ತು ಕೆಲವು ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಬೇಕು. ಆದರೆ ಖಾಸಗಿ ಆಸ್ತಿಪಾಸ್ತಿಗಳನ್ನು ಪಡೆಯಬೇಕಾದ ಪರಿಸ್ಥಿತಿಯುಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com