ಬಳ್ಳಾರಿ: ಮಹಾನಗರಪಾಲಿಕೆ ಸದಸ್ಯನ ಹತ್ಯೆಗೆ ಯತ್ನ, ಮಾರಕಾಸ್ತ್ರಗಳಿಂದ ಹಲ್ಲೆ

ಬಳ್ಳಾರಿ ನಗರಪಾಲಿಕೆ ಸದಸ್ಯ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹಂದ್ರಾಳ ಸೀತಾರಾಮ ಅವರ ಮೇಲೆ ಖಾರದ ಪುಡಿ ಎರಚಿ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ.
ಬಲ್ಳಾರಿ: ಮಹಾನಗರಪಾಲಿಕೆ ಸದಸ್ಯನ ಹತ್ಯೆಗೆ ಯತ್ನ, ಮಾರಕಾಸ್ತ್ರಗಳಿಂದ ಹಲ್ಲೆ
ಬಲ್ಳಾರಿ: ಮಹಾನಗರಪಾಲಿಕೆ ಸದಸ್ಯನ ಹತ್ಯೆಗೆ ಯತ್ನ, ಮಾರಕಾಸ್ತ್ರಗಳಿಂದ ಹಲ್ಲೆ
Updated on: 
ಬಳ್ಲಾರಿ: ಬಳ್ಳಾರಿ ನಗರಪಾಲಿಕೆ ಸದಸ್ಯ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ  ಹಂದ್ರಾಳ ಸೀತಾರಾಮ ಅವರ ಮೇಲೆ ಖಾರದ ಪುಡಿ ಎರಚಿ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ.
ಸೀತಾರಾಮ ಅವರ ಮನೆ ಮುಂದೆಯೇ ಅವರ ಹತ್ಯಾ ಪ್ರಯತ್ನ ನಡೆದಿದ್ದು ಆಂದ್ರ ಪ್ರದೇಶದ ಅನಂತಪುರ ಹಾಗೂ ತಾಡಪತ್ರಿಯಿಂದ ಬಂದಿದ್ದ ಹನ್ನೊಂದು ಜನರ ಗುಂಪು ಈ ದಾಳಿ ನಡೆಸಿದೆ.
ತಕ್ಷಣ ಜಾಗೃತರಾದ ಸೀತಾರಾಮ್ ಸ್ಥಳೀಯರು ಹಾಗೂ ಬೆಂಬಲಿಗರ ನೆರವಿನಿಂದ ತಪ್ಪಿಸಿಕೊಂಡಿದ್ದಾರೆ. ಹತ್ಯಾ ಪ್ರಯತ್ನದಲ್ಲಿದ್ದ ತಂಡದ ಓರ್ವ ಸದಸ್ಯರನ್ನು ಹಿಡಿದ ಸಾರ್ವಜನಿಕರು ಾವನನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.ಜತೆಗೆ ಕೃತ್ಯಕ್ಕೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಸೀತಾರಾಮ್ ಅವರ ಮೇಲೆ ಈ ಹಿಂದೆಯೂ ಸಾಕಷ್ಟು ಬಾರಿ ಹತ್ಯಾ ಪ್ರಯತ್ನಗಳು ನಡೆದಿದ್ದು ಇದು ಹಳೆ ದ್ವೇಷದ ಕಾರಣ ನಡೆದಿರಬಹುದೆಂದು ಶಂಕಿಸಲಾಗಿದೆ. ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com