ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯಾಗಿಸಲು ಮನವಿ, ಸಚಿವ ದೇಶಪಾಂಡೆಯಿಂದ ಮೋದಿಗೆ ಪತ್ರ

'ಭಾರತಕ್ಕೀಗ ತುರ್ತಾಗಿ ಎಅರ್ಡನೇ ರಾಜಧಾನಿಯ ಅಗತ್ಯವಿದ್ದು ಬೆಂಗಳೂರು ಈ ಅಗ್ತ್ಯವನ್ನು ನಿಭಾಯಿಸಲು ಸಿದ್ದವಿದೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು.'
ಆರ್. ವಿ. ದೇಶಪಾಂಡೆ
ಆರ್. ವಿ. ದೇಶಪಾಂಡೆ
Updated on: 
ಬೆಂಗಳೂರು: 'ಭಾರತಕ್ಕೀಗ ತುರ್ತಾಗಿ ಎಅರ್ಡನೇ ರಾಜಧಾನಿಯ ಅಗತ್ಯವಿದ್ದು ಬೆಂಗಳೂರು ಈ ಅಗ್ತ್ಯವನ್ನು ನಿಭಾಯಿಸಲು ಸಿದ್ದವಿದೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು.'  ಕರ್ನಾಟಕ ಬೃಹತ್, ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯಾಭಿವೃದ್ದಿ ಸಚಿವ ಆರ್.ವಿ. ದೇಶಪಾಂಡೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ದಕ್ಷಿಣ ಭಾರತದ ಅಭಿವೃದ್ದಿ ಹಾಗೂ ಒಟ್ಟಾರೆ ದೇಶದ ಪ್ರಗತಿಯ ಉದ್ದೇಶದಿಂಡ ಬೆಂಗಳೂರನ್ನು ಎರಡನೇ ರಾಜಧಾನಿಯಾಗಿಸಬೇಕು. ಎರಡನೇ ರಾಜಧಾನಿಯಾಗಲು ಬೇಕಾದ ಎಲ್ಲಾ ಅರ್ಹತೆಗಳು ಬೆಂಗಳುರಿಗಿದೆ ಎಂದು ಉಲ್ಲೇಖಿಸಿ ಜ.12ರಂದು ದೇಶಪಾಂಡೆ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ದೇಶದ ಎರಡನೇ ರಾಜಧಾನಿಯಾಗಲು ಬೆಂಗಲೂರು ಎಷ್ಟು ಸೂಕ್ತ, ರಾಜಧಾನಿಯಾಗಲು ನಗರಕ್ಕೆ ಅರ್ಹತೆಗಳೇನು ಎನ್ನುವುದನ್ನು ಪಟ್ಟಿ ಮಾಡಿ ತಿಳಿಸಿರುವ ದೇಶಪಾಂಡೆ ಆಡಳಿತದಲ್ಲಿ ರಚನಾತ್ಮಕ ಸುಧಾರಣೆ, ರಾಷ್ಟ್ರ ನಿರ್ಮಾಣ, ಅಂತರಾಷ್ಟ್ರೀಯ ಸಹಕಾರ ಸೇರಿ ನಾನಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆಗಾಗಿ ದೇಶಕ್ಕೆ ಎರಡನೇ ರಾಜಧಾನಿ ಅಗತ್ಯವಿದೆ. ರಾಷ್ಟ್ರೀಯ ದೃಷ್ಟಿಕೋನಗಳಲ್ಲಿ ದಕ್ಷಿಣ ಭಾರತದ ಸಕ್ರಿಯ ಪಾಲುದಾರಿಕೆಗಾಗಿ ಬೆಂಗಳೂರು ಋಆಷ್ಟ್ರದ ಎರಡನೇ ರಾಜಧಾನಿಯಾಗಬೇಕು. ದೇಶಪಾಂಡೆ ಒತ್ತಾಯಿಸಿದ್ದಾರೆ.
ಇನ್ನು ದೇಶಪಾಂಡೆ ಈ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com