ಉತ್ತಮ ಭವಿಷ್ಯಕ್ಕಾಗಿ ಈ ವಲಸಿಗ ಕಾರ್ಮಿಕರ ಮಕ್ಕಳಿಗೆ ಸಹಾಯ ಮಾಡಿ

ಕಟ್ಟಡ ನಿರ್ಮಾಣ ಕಾರ್ಮಿಕರಾದ ರಾಧಿಕಾಳ ಪೋಷಕರು ಕಳೆದ ನಾಲ್ಕು ವರ್ಷಗಳ ಹಿಂದೆ ಉತ್ತಮ ಜೀವನ ಅರಸಿ ಯಾದಗಿರಿಯಿಂದ ಬೆಂಗಳೂರಿಗೆ ಬಂದಿದ್ದಾರೆ.
ಉತ್ತಮ ಭವಿಷ್ಯಕ್ಕಾಗಿ ಈ ವಲಸಿಗ ಕಾರ್ಮಿಕರ ಮಕ್ಕಳಿಗೆ ಸಹಾಯ ಮಾಡಿ
ಉತ್ತಮ ಭವಿಷ್ಯಕ್ಕಾಗಿ ಈ ವಲಸಿಗ ಕಾರ್ಮಿಕರ ಮಕ್ಕಳಿಗೆ ಸಹಾಯ ಮಾಡಿ
Updated on
ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರಾದ ರಾಧಿಕಾಳ ಪೋಷಕರು ಕಳೆದ ನಾಲ್ಕು ವರ್ಷಗಳ ಹಿಂದೆ ಉತ್ತಮ ಜೀವನ ಅರಸಿ ಯಾದಗಿರಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅವರು ಭೈರತಿ, ಬನಶಂಕರಿ ನಡುವೆ ತಮ್ಮ ವಾಸ್ತವ್ಯವನ್ನು ಬದಲಿಸುತ್ತಿದ್ದು ಒಂದು ಟೆಂಟ್ ಮನೆಯಲ್ಲಿ ವಾಸವಿದ್ದಾರೆ. ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆಯೂ ಇಲ್ಲದ ಅವರಿಂದ ಮಗಳ ಪೋಷಣೆ ಸಹ ಕಷ್ಟವಾಗುತ್ತಿದೆ.
ಇದೇ ವೇಳೆ ರಾಧಿಕಾ ಜೀವನ ಸಹ ಕಳೆದ ಣಾಲ್ಕು ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. "ರಾಧಿಕಾ ಈಗ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಆಕೆ ತರಗತಿಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಅಲ್ಲದೆ ಅವಳು ಸುಲಭವಾಗಿ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಾಳೆ, ಅವಳ ಕೈಬರಹ ಮತ್ತು ಪ್ರಾಮಾಣಿಕತೆಯು ಬಗೆಗೆ ಸಹಪಾಠಿಗಳು ಮತ್ತು ಶಿಕ್ಷಕರು ಮೆಚ್ಚುಗೆ ಸೂಚಿಸುತ್ತಾರೆ. ಈ ವೇಳೆ ನೈರ್ಮಲ್ಯ ಮತ್ತು ಆರೋಗ್ಯದ ಬಗ್ಗೆ ಸೂಕ್ತವಾದ ಕಾಳಜಿಯನ್ನು ಸಹ ಅವಳು ತೆಗೆದುಕೋಳ್ಳುತ್ತಿದ್ದಾಳೆ. " ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಇತರ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸಲು 2014 ರಲ್ಲಿ ಆನಂದ ಸಾಗರ ಟ್ರಸ್ಟ್ ಅನ್ನು ಸ್ಥಾಪಿಸಿದ್ದ ಅಮರ್ ಡೇನಿಯಲ್ ಹೇಳಿದರು.
"ಸುಮಾರು 5,000 ರಿಂದ 7,000 ವಲಸಿಗ ಕಾರ್ಮಿಕರು ಪ್ರತಿ ದಿನವೂ ಬೆಂಗಳೂರಿಗೆ ಬರುತ್ತಾರೆ. ಈ ಕಾರ್ಮಿಕರ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಬಹಳಷ್ಟು ಸಂದರ್ಭದಲ್ಲಿ  ಅವರ ಬದುಕು ಕರುಣಾಜನಕ ಸ್ಥಿತಿಗಳಲ್ಲಿ ಇರುತ್ತದೆ.  ಪೌಷ್ಟಿಕ ಆಹಾರ ಮತ್ತು ಸರಿಯಾದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅವರು ಶಾಲೆಗಳಿಂದ ಹೊರಗುಳಿಯುತ್ತಾರೆ. ಸಮಾಜ ವಿರೋಧಿ ಕೃತ್ಯಗಳತ್ತ ಆಕರ್ಷಿತರಾಗುತ್ತಾರೆ" ಅಮರ್ ಹೇಳಿದ್ದಾರೆ. ಇವರು ಇಂತಹಾ ಮಕ್ಕಳಿಗೆ ನೈರ್ಮಲ್ಯದ ಕುರಿತ ಕಾಳಜಿ ಬಗೆಗೆ ತಿಳಿಸುತ್ತಾರೆ. ಇದರೋಡನೆ ಅವರಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಬದುಕಲು ಬೇಕಾದ ತರಬೇತಿ ನೀಡುತ್ತಿದ್ದಾರೆ.
ಕೊತ್ತನೂರು ಪೋಸ್ಟ್ ನ ಹೆನ್ನೂರು ರಸ್ತೆ ಹಿಂಭಾಗದಲ್ಲಿರುವ ಆನಂದ ಸಾಗರದಲ್ಲಿ ಮಕ್ಕಳು ಪೌಷ್ಟಿಕ ಊಟ, ಸುರಕ್ಷಿತ ಮತ್ತು ಆರೋಗ್ಯಕರ ಪರಿಸರ ಮತ್ತು ಅಗತ್ಯ ಜೀವನ ಕೌಶಲ್ಯಗಳ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿನ ಮಕ್ಕಳು ಕೊತ್ತನೂರ್ ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು, ಅವರು ಕನ್ನಡ, ಸೇರಿ ಮೂರು ಭಾಷೆಗಳನ್ನು ಕಲಿಯುತ್ತಾರೆ. ಮತ್ತು ಗಣಿತ ವಿಷಯವನ್ನೂ ವ್ಯಾಸಂಗ ನಡೆಸುತ್ತಾರೆ.
ಅಮರ್ ಅವರು ಒಮ್ಮೆ ಚಿಕ್ಕಬಳ್ಳಾಪುರದಲ್ಲಿನ ಕೆಲವು ಬಡ ಮಕ್ಕಳನ್ನು ಕರೆತಂದು ಕೊತ್ತನೂರು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಆಗ ಅಲ್ಲಿನ ಮುಖ್ಯೋಪಾದ್ಯಾಯರು ನಗರದ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗಾಗಿ ನೀವು ಏಕೆ ಒಂದು ವಸತಿ ವ್ಯವಸ್ಥೆ ಮಾಡಬಾರದು ಎಂದು ಕೇಳಲಾಗಿ ಅಮರ್ ಅವರಿಗೆ ಆನಂದ ಸಾಗರ ಟ್ರಸ್ಟ್ ನ ಕಲ್ಪನೆ ಮೂಡಿತ್ತು. ಆನಂದ ಸಾಗರದಲ್ಲಿ 6-14 ವರ್ಷದ 15 ಮಕ್ಕಳು ನೆಲೆಸಿದ್ದಾರೆ. "ನಮ್ಮ ಕೇಂದ್ರವು ಅರ್ಧ ಎಕರೆಯಷ್ಟು ವಿಸ್ತಾರವಾಗಿದ್ದು 10 ಕೊಠಡಿಗಳನ್ನು ಹೊಂದಿದೆ. ಕೇಂದ್ರದ ನಿರ್ವಹಣೆಗಾಗಿ ತಿಂಗಳಿಗೆ ಸುಮಾರು `60,000 ವೆಚ್ಚವಾಗುತ್ತದೆ. ಸ್ಥಳೀಯ ವ್ಯಕ್ತಿಗಳ ಸಹಾಯದಿಂದ ನಾನು ಈ ಕೇಂದ್ರವನ್ನು ಚನಿರ್ವಹಿಸುತ್ತಿದ್ದೇನೆ" ಅಮರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com