ಅಕ್ರಮ ಮರಳು ಗಣಿಗಾರಿಕೆ: ತೆಲಂಗಾಣದಿಂದ ಯಾದಗಿರಿ ಜಿಲ್ಲೆ ಗಡಿ ಒತ್ತುವರಿ

ಯಾದಗಿರಿ ಜಿಲ್ಲೆಯ ಚೆಲೇರಿ ಗ್ರಾಮದ ವ್ಯಾಪ್ತಿಯಲ್ಲಿ ತೆಲಂಗಾಣ ಸರ್ಕಾರ ಅಕ್ರಮ ಮರಳುಗಾರಿಕೆ ನಡೆಸಿದ್ದು ಇದು ಎರಡು ರಾಜ್ಯಗಳ ನಡುವೆ ಹೊಸ ಗಡಿ ಸಮಸ್ಯೆಗೆ ಕಾರಣವಾಗಿದೆ.
ಮರಳು ಗಣಿಗಾರಿಕೆ-ಸಾಂದರ್ಭಿಕ ಚಿತ್ರ
ಮರಳು ಗಣಿಗಾರಿಕೆ-ಸಾಂದರ್ಭಿಕ ಚಿತ್ರ
Updated on
ಯಾದಗಿರಿ : ಯಾದಗಿರಿ ಜಿಲ್ಲೆಯ ಚೆಲೇರಿ ಗ್ರಾಮದ ವ್ಯಾಪ್ತಿಯಲ್ಲಿ ತೆಲಂಗಾಣ ಸರ್ಕಾರ ಅಕ್ರಮ ಮರಳುಗಾರಿಕೆ ನಡೆಸಿದ್ದು ಇದು ಎರಡು ರಾಜ್ಯಗಳ ನಡುವೆ ಹೊಸ ಗಡಿ ಸಮಸ್ಯೆಗೆ ಕಾರಣವಾಗಿದೆ. ಕರ್ನಾಟಕದ ಅಧಿಕಾರಿಗಳು ಹೇಳುವಂತೆ ಈ ಗ್ರಾಮ ಕರ್ನಾಟಕದ ವ್ಯಾಪ್ತಿಗೆ ಸೇರಿದೆ. ಆದರೆ ಕರ್ನಾಟಕದ 47 ಎಕರೆ ಭೂಮಿ, ತಮಗೆ ಸೇರಿದ್ದು, ಅಲ್ಲಿನ ಕೆಲ್ರೆಯ ಭಾಗ ಸಂಪೂರ್ಣವಾಗಿ ತೆಲಂಗಾಣಕ್ಕೆ ಸೇರಿದೆ ಎನ್ನುವ ಮೂಲಕ ಅಲ್ಲಿನ ಹಳ್ಳ ಹಾಗೂ ಗ್ರಾಮದ ಭಾಗಗಳ ಮೇಲೆ ತನ್ನ ಹಿಡಿತ ಸಾಧಿಸಲು ತೆಲಂಗಾಣ ಸರ್ಕಾರ ಪ್ರಯತ್ನ ನಡೆಸಿದೆ.
ತೆಲಂಗಾಣವು ಗುರುಮಠಕಲ್ ವಿಧಾನ ಸಭೆಗೆ ಸೇರಿದ ಚೆಲೇರಿ ಗ್ರಾಮದ 143 ಎಕರೆ, 8 ಗುಂಟೆ ಜಾಗದಿಂದ ಮರಳು ಸಾಗಣೆ ನಡೆಸಿದ ವಿಚಾರ ಕಳೆದ ಡಿ.22 ರಂದು ಗ್ರಾಮಸ್ಥರ ಗಮನಕ್ಕೆ ಬಂಡ ನಂತರ ವಿವಾದ ತಲೆದೋರಿದೆ. ಹೀಗೆ ಗ್ರಾಮಸ್ಥರಿಂದ ಮರಳು ಗಣಿಗಾರಿಕೆಯ ಸಂಬಂಧ ದೂರು ಬಂದ ನಂತರ ಡಿ.23ಕ್ಕೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಈ ವಿಷಯದಲ್ಲಿ ಯಾದಗಿರಿ ಜಿಲ್ಲಾ ಉಪ ಕಮಿಷನರ್ ಗೆ ಪತ್ರ ಬರೆದಿದ್ದಾರೆ ಎಂದು ಗುರುಮಠಕಲ್ ವಿಶೇಷ ತಹಶೀಲ್ದಾರ್ ಆದ ಮುಹಮ್ಮದ್ ಇಜಾಝ್-ಉಲ್-ಹಕ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ತೆಲಂಗಾಣ ಅಧಿಕಾರಿಗಳು ಹಳ್ಳ ಇರುವ ಭೂಮಿಯನ್ನು  ಸೇರಿ ಒಟ್ಟು 47 ಎಕರೆ ಭೂಮಿ ತೆಲಂಗಾಣ ಸರ್ಕಾರಕ್ಕೆ ಸೇರಿದ್ದೆಂದು ಹೇಳಿದ್ದಾರೆ. ಆದರೆ ಕರ್ನಾಟಕದ ಅಧಿಕಾರಿಗಳ ಬಳಿ ಇರುವ ನಕಾಶೆಯ ಅನುಸಾರ ಇದು ಹೈದರಾಬಾದ್ ಕರ್ನಾಟಕ ಭಾಗವಾಗಿದ್ದು ಇಡೀ ಹಳ್ಳವು ಕರ್ನಾಟಕಕ್ಕೆ ಸೇರಿದೆ. ಇದೀಗ ಜ.4ರಂದು ಒಂದು ಒಪ್ಪಂದಕ್ಕೆ ಬಂದಿದ್ದು ಇದರಂತೆ ಹೊಸದಾಗಿ ಸರ್ವೆ ನಡೆಯುವವರೆಗೆ ಯಥಾಸ್ಥಿತಿ ಕಾಪಾಡಬೇಕೆಂದು ನಿರ್ಧರಿಸಲಾಗಿದೆ.
ಅವರು ಮೆಹಬೂಬ್ ನಗರ ಜಿಲ್ಲೆಯ ತನ್ನ ಉಪ ಕಮಿಷನರ್ ಜತೆ ಚರ್ಚೆ ನಡೆಇಸಿದ್ದು ಇದು ಅಂತರ್-ರಾಜ್ಯ ಗಡಿ ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸಲು ಉನ್ನತ ಮಟ್ಟದ ಸಭೆ ನಡೆಸಬೇಕು. ಗೊಂದಲಕ್ಕೆ ಕಾರಣವಾದ ಹಳ್ಳದ ಗಡಿಯನ್ನು ಅತಿಕ್ರಮಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಮರಳು ಗಣಿಗಾರಿಕೆಯನ್ನು ಕರ್ನಾಟಕವು ನಿಷೇಧಿಸಿದೆ ಎಂದು ಯಾದಗಿರಿ ಉಪ ಕಮೀಷನರ್ ಜೆ ಮಂಜುನಾಥ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com