ಚಳಿಗಾಲ ಮುಗಿದು ಬೇಸಿಗೆಗೆ ಸಜ್ಜಾಗಿರುವ ಬೆಂಗಳೂರು ನಗರ

ಸದ್ಯದಲ್ಲಿಯೇ ಬೆಂಗಳೂರು ನಿವಾಸಿಗಳು ಸೆಖೆಯ ಧಗೆಯನ್ನು ಅನುಭವಿಸಲಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸದ್ಯದಲ್ಲಿಯೇ ಬೆಂಗಳೂರು ನಿವಾಸಿಗಳು ಸೆಖೆಯ ಧಗೆಯನ್ನು ಅನುಭವಿಸಲಿದ್ದಾರೆ. ಸರಾಸರಿ ಮಟ್ಟಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಇತ್ತೀಚಿನ ದಿನಗಳಲ್ಲಿ ದಾಖಲಾಗಿದ್ದು, ಮುಂದಿನ ವಾರ ಅದಿನ್ನೂ ಹೆಚ್ಚಾಗಲಿದೆ.
ಉತ್ತರದಿಂದ ಬೀಸುವ ಗಾಳಿಯ ಪ್ರಮಾಣ ಕಡಿಮೆಯಾಗಿರುವುದರಿಂದ ಉಷ್ಣಾಂಶ ಹೆಚ್ಚಾಗಿದೆ ಎನ್ನಬಹುದು. ಕರ್ನಾಟಕಕ್ಕೆ ಪೂರ್ವ ಮತ್ತು ಉತ್ತರ ಭಾಗದಿಂದ ಗಾಳಿಯ ಹರಿವಿನಿಂದ ಉಷ್ಣಾಂಶ ಹೆಚ್ಚಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮಹದೇವ್ ಮೇತ್ರಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ರಾಜ್ಯಕ್ಕೆ ಗಾಳಿಯ ಹರಿವಿನಿಂದ ಬಿಸಿಲಿನ ಹವಾಮಾನ ಇರಲಿದೆ. ಹವಾಮಾನದಲ್ಲಿ ತೇವಾಂಶ ಶೇಕಡಾ 40ರಿಂದ 46ರಷ್ಟಿರುತ್ತದೆ ಎನ್ನುತ್ತಾರೆ. 
ಮೊನ್ನೆ ಶನಿವಾರ ಬೆಂಗಳೂರಿನಲ್ಲಿ 3 ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಶೇಕಡಾ 30.5ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com