ಬುದ್ದಿಜೀವಿಗಳು ಬರೆದಿದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕಾವ್ಯ: ಸಚಿವ ಅನಂತ್ ಕುಮಾರ್ ಹೆಗ್ಡೆ ಟೀಕೆ

ಸಾಹಿತಿಗಳ ವಿರುದ್ಧ ಮತ್ತೊಮ್ಮೆ ತೀವ್ರವಾಗಿ ಕಿಡಿಕಾರಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು, ಸೋ ಕಾಲ್ಡ್ ಬುದ್ದಿ ಜೀವಿಗಳು ಬರೆದಿದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕಾವ್ಯ ಎಂದು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ...
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ
ಬೆಳಗಾವಿ: ಸಾಹಿತಿಗಳ ವಿರುದ್ಧ ಮತ್ತೊಮ್ಮೆ ತೀವ್ರವಾಗಿ ಕಿಡಿಕಾರಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು, ಸೋ ಕಾಲ್ಡ್ ಬುದ್ದಿ ಜೀವಿಗಳು ಬರೆದಿದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕಾವ್ಯ ಎಂದು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. 
ಬೆಳಗಾವಿಯ ಕೆ.ಎಲ್.ಇ. ಜೀರಗಿ ಸಭಾಭವನದಲ್ಲಿ ನಿನ್ನೆ ನಡೆದ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ಸೋ ಕಾಲ್ಡ್ ಬುದ್ಧಿ ಜೀವಿಗಳು ಬರೆದಿದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕಾವ್ಯವಾಗಿರುತ್ತದೆ. ಸಾಹಿತಿಗಳ ಬರವಣಿಗೆಗೆ ಅರ್ಥವೂ ಇರುವುದಿಲ್ಲ, ತಲೆಬುಡವೂ ಇರುವುದಿಲ್ಲ. ಅವರಿಗೆ ಯಾವುದೋ ಸರ್ಕಾರಿ ನಿವೇಶನ ಬೇಕಾಗಿರುತ್ತದೆ. ಅದಕ್ಕಾಗಿ ವಿಚಾರವಾದಿಗಳ ಪಟ್ಟ ಕಟ್ಟಿಕೊಂಡಿರುತ್ತಾರೆಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 
ನಾವು ಏನಾಗಬೇಕೆಂದು ಕೇಳಿದಾಗ ಬುದ್ದಿ ಜೀವಿಗಳು ಮೊದಲು ಮಾನವರಾಗಬೇಕೆಂದು ಹೇಳುತ್ತಾರೆ, ಹಾಗಾದರೆ, ನಾವು ದನನಾ...? ನಾವು ಪ್ರಾಣಿಗಳ ಥರ ಇದ್ದೀವಾ...? ಮನುಷ್ಯರಾಗಿ ಹುಟ್ಟಿದ ಮೇಲೆ ಮತ್ತೆ ಮನುಷ್ಯರಾಗುವುದರಲ್ಲಿ ವಿಶೇಷ ಏನಿದೆ...? ಅವರಿಗೆ ದೃಷ್ಟಿದೋಷವಿರಬೇಕು. 
ಸಂಸ್ಕೃತದಲ್ಲಿ ಶ್ಲೋಕವೊಂದಿಗೆ. ಮನುಷ್ಯರಾಗಿ ಹುಟ್ಟಿದವರು ದೇವರಾಗಲು ಪ್ರಯತ್ನಿಸಬೇಕೆಂದು. ನಾವೆಲ್ಲರೂ ದೇವರಾಗಲು ಪ್ರಯತ್ನಿಸಬೇಕು. ಸರ್ಕಾರದಿಂದ ನಿವೇಶನ ಪಡೆದುಕೊಳ್ಳಲು ಕೆಲವು ಸಾಹಿತಿ ಎನ್ನುವ ಪಟ್ಟ ಕಟ್ಟಿಕೊಂಡಿದ್ದಾರೆ. ಬರೆದಿದ್ದೇ ಸಾಹಿತ್ಯ, ಗೀಚಿದ್ದೇ ಕವಿತೆ ಎನ್ನುವಂತಾಗಿದೆ ಇಂದಿನ ಪರಿಸ್ಥಿತಿ. ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ, ತಲೆ ಬುಡವೂ ಇರುವುದಿಲ್ಲ ಎಂದು ಟೀಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com