ಬೆಂಗಳೂರು: ಮನೆ ಮಾಲೀಕರೆಂದು ಹೇಳಿಕೊಂಡು ಬಾಡಿಗೆದಾರರಿಂದ ಮುಂಗಡ ಹಣ ಪಡೆದು ವಂಚನೆ

ನಗರದಲ್ಲಿರುವ ನಿಮ್ಮ ಫ್ಲಾಟ್ ನ್ನು ನಿಮಗೇ ಅರಿವಾಗದಂತೆ ಬಾಡಿಗೆಗೆ ನೀಡುವವರಿದ್ದಾರೆ ಎಚ್ಚರ!
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳುರು: ನಗರದಲ್ಲಿರುವ ನಿಮ್ಮ ಫ್ಲಾಟ್ ನ್ನು ನಿಮಗೇ ಅರಿವಾಗದಂತೆ ಬಾಡಿಗೆಗೆ ನೀಡುವವರಿದ್ದಾರೆ ಎಚ್ಚರ! ಇಂತಹಾ ಒಂದು ವಿಚಿತ್ರ ಘಟನೆಯಲ್ಲಿ ಫ್ಲಾಟ್ ನ ಮಾಲೀಕರೆಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಬಾಡಿಗೆಗಾಗಿ ಕೇಳಿಕೊಂಡು ಬಂದಿದ್ದವರಿಂದ 50,000 ರೂ. ಸಂಗ್ರಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಡಿಗೆದಾರರಿಂದ ಫ್ಲಾಟ್ ಅಡ್ವಾನ್ಸ್ ಹೆಸರಿನಲ್ಲಿ ಈ ಹಣ ಪಡೆದಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕೆ ಆರ್ ಪುರಮ್, ಎಚ್ಎಸ್ಆರ್ ಲೇಔಟ್, ವೈಟ್ ಫೀಲ್ಡ್, ಹೆಣ್ನೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಇಂತಹಾ ವಂಚನೆ ಪ್ರಕರಣಗಳು ವರದಿಯಾಗುತ್ತಿದೆ ಎಂದು ಪೋಲೀಸರು ಹೇಳಿದ್ದಾರೆ.
ಮನೆ ಬಾಡಿಗೆ ಪಡೆಯುವ ಆಸಕ್ತಿಯುಳ್ಳವರಿಗೆ ಮನೆ ಮಾಲೀಕರು ಮನೆ ತೋರಿಸಲು ಸಮಯವಿರುವುದಿಲ್ಲ. ಅಂತಹಾ ಸಮಯದಲ್ಲಿ ಅವರು ಅಪಾರ್ಟ್ ಮೆಂಟ್ ನ ಸೆಕ್ಯುರಿಟಿಗಳಿಗೆ ಫ್ಲಾಟ್ ನ ಕೀ ಹಸ್ತಾಂತರಿಸುತ್ತಾರೆ, ಆನ್ ಲೈನ್ ನಲ್ಲಿ ಜಾಹೀರಾತನ್ನು ನೀಡುತ್ತಾರೆ. ಈ ಜಾಹಿರಾತುಗಳ ಬ್ರೌಸ್ ಮಾಡಿದ  ದುಷ್ಕರ್ಮಿಗಳು ಇದೇ ರೀತಿಯ ವೆಬ್ ಸೈಟ್ ನಲ್ಲಿ ತಮ್ಮ ಜಾಹೀರಾತನ್ನು ಅಪ್ ಮಾಡುತ್ತಾರೆ. ಆದರೆ ನಿಜವಾದ ಫ್ಲಾಟ್ ಮಾಲೀಕರ ಬದಲು ತಮ್ಮ ಸಂಪರ್ಕ ಸಂಖ್ಯೆಗಳನ್ನು ಹಾಕಿರುತ್ತಾರೆ. ಹಾಗೆಯೇ ಆ ದುಷ್ಕರ್ಮಿಗಳು ಮನೆ ಬಾಡಿಗೆಗೆ ಕೊಳ್ಳಲು ಬಂದವರಿಂದ ಮುಂಗಡ ಹಣ ಪಡೆಯುತ್ತಾರೆ.
ಇತ್ತೀಚೆಗೆ ವರದಿಯಾದ ಘಟನೆಯಲ್ಲಿ, ಮರ್ಸಿಡಿಸ್ ಬೆಂಜ್ ಸಂಸ್ಥೆಯ ಉದ್ಯೋಗಿ ರಮೇಶ್ (ಕೋರಿಕೆಯ ಮೇರೆಗೆ ಹೆಸರು ಬದಲಿಸಲಾಗಿದೆ) 50,000 ರೂ. ಕಳೆದುಕೊಂಡಿದ್ದಾರೆ. ಒಡಿಶಾ ಮೂಲದ ರಮೇಶ್  ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸುಇಸುತ್ತಿದ್ದು 2 ಬಿಎಚ್ ಕೆ ಮನೆಗಾಘಿ ಹುಡುಕುತ್ತಿದ್ದರು.
ಅವರು ಬಿಇಎಂಎಲ್ ಬಸ್ ನಿಲ್ದಾಣದ ಸಮೀಪ  ಹೇಮಂತ್ ಸ್ಪಂಡಾನಾ ಅಪಾರ್ಟ್ಮೆಂಟ್ ಬಾಡಿಗೆಗೆ ಇರುವುದನ್ನು ಆನ್ ಲೈನ್ ಜಾಹೀರಾತಿನ ಮೂಲಕ ನೋಡಿ ಸಂಪರ್ಕಿಸಿದ್ದರು. ಹಾಗೆ ಸಂಪರ್ಕಕ್ಕೆ ಬಂದ ಲೋಕನಾಥ ರೆಡ್ಡಿ ಎನ್ನುವ ವ್ಯಕ್ತಿ ಫ್ಲಾಟ್ ನೋಡುವಂತೆ ಹೇಳಿದ್ದಲ್ಲದೆ ತಾನೇ ಅದರ ಮಾಲೀಕನಾಗಿರ್ತುವುದಾಗಿ ಹೇಳಿದ್ದ. ಅದಾಗಿ ಫ್ಲಾಟ್ ನೋಡ ಹೋದ ಸಮಯದಲ್ಲಿ ರಮೇಶ್ ಪುನಃ ರೆಡ್ಡಿಗೆ ಕರೆ ಮಾಡಿದ್ದು ಆಗ ರೆಡ್ಡಿ ತನ್ನ ಸಂಬಂಧಿ ರೋಷನ್ ಕುಮಾರ್ ಫ್ಲಾಟ್ ತೋರಿಸಲು ಬರುತ್ತಾರೆಂದು ಹೇಳಿದ. ಮತ್ತೆ ಅಲ್ಲಿಗೆ ಆಗಮಿಸಿದ ರೋಷನ್ ಕುಮಾರ್ ಸೆಕ್ಯುರಿಟಿ ಗಾರ್ಡ್ ನಿಂದ ಮನೆಯ ಕೀ ಪಡೆದು ರಮೇಶ್ ಗೆ ಮನೆ ತೋರಿಸಿದ್ದ. ಆ ಮನೆ ರಮೇಶ್ ಗೆ ಸಹ ಇಷ್ಟವಾಗಿದ್ದು ಅವರು ಮತ್ತೆ ರೆಡ್ಡಿಗೆ ಕರೆ ಮಾಡಿ ಒಂದು ಲಕ್ಷ ಮುಂಗಡ ಹಣ ಹಾಗೂ 17,000 ಮಾಸಿಗ ಬಾಡಿಗೆಗೆ ಮಾತುಕತೆ ನಡೆಸಿದ್ದರು. ಇದರ ನಂತರ ರಮೇಶ್ ರೆಡ್ಡಿ ಹೇಳಿದ್ದ ಖಾತೆಗೆ 50 ಸಾವಿರ ರೂ. ವರ್ಗಾಯಿಸಿದ್ದರು. ರೆಡ್ಡಿ ಸಹ ಶೀಘ್ರವಾಗಿ ದಾಖಲೆ ಪತ್ರಗಳು, ಬಾಡಿಗೆ ಕರಾರುಗಳನ್ನು ಮಾಡಿಸಿಕೊಡುವುದಾಗಿ ರಮೇಶ್ ಗೆ ಭರವಸೆ ಇತ್ತಿದ್ದ.
ಇದಾಗಿ ರಮೇಶ್ ತಾವು ಹೊಸ ಮನೆಗೆ ತೆರಳಲು ಎಲ್ಲಾ ಸಿದ್ದತೆ ನಡೆಸಿದ್ದ ಸಮಯದಲ್ಲಿ ಅವರಿಗೆ ಆ ಫ್ಲಾಟ್ ನ ನಿಜವಾದ ಮಾಲೀಕ ಲೋಕನಾಥ್ ಅರೆಡ್ಡಿ ಅಲ್ಲ, ಇನ್ನೊಬ್ಬರೆನ್ನುವುದು ತಿಳಿದಿದೆ. ರಮೇಶ್ ತಕ್ಷಣ ಈ ಸಬಂಧ ಪೋಲೀಸರಿಗೆ ದೂರಿತ್ತಿದ್ದಾರೆ. "ಅವರು ನನ್ನನ್ನು ಮನೆಗೆ ಕರೆದೊಯ್ದು ಅದನ್ನು ತೋರಿಸಿದ ರೀತಿಯಲ್ಲಿ ನನಗೆ ಸಂಪೂರ್ಣವಾಗಿ ನಂಬಿಕೆ ಹುಟ್ಟಿತ್ತು. ಆದರೆ ಮನೆ ಮಾಲೀಕರೆಂದು ಬಂದ ರೆಡ್ಡಿ ಯಾರೆಂದು ಸೆಕ್ಯುರಿಟಿ ಗಾರ್ಡ್ ಗೆ ಸಹ ತಿಳಿದಿಲ್ಲವೆನ್ನುವುದು ನನಗೆ ಆಘಾತ ತಂದಿದೆ."
ಫ್ಲಾಟ್ ನ ನಿಜವಾದ ಮಾಲೀಕರಿಗೆ ನನ್ನ ವಿಚಾರ ತಿಳಿದಾಗ ಅವರೂ ಸಹ ಅಚ್ಚರಿಗೆ ಒಳಗಾದರು.. ನಂತರ, ಈ ವಿಚಾರವನ್ನು ಖಚಿತಪಡಿಸಲು ರಮೇಶ್ ಮತ್ತು ಫ್ಲಾಟಿನ ಮಾಲೀಕರು ಮಾಲೀಕರು ಮತ್ತೆ ಪೊಲೀಸ್ ಠಾಣೆಗೆ ತೆರಳಿದರು. ಎಚ್ಎಎಲ್ ಪೊಲೀಸರು ಈ ಸಂಬಂಧ ಎನ್ ಸಿಆರ್ ದೂರು ದಾಖಲಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com