ಬೆಂಗಳೂರು: ಕರ್ತವ್ಯ ನಿರತ ಪೋಲೀಸರ ಮೇಲೆ ಹಲ್ಲೆ, ಆಪ್ರಿಕಾ ಮೂಲದ ವಿದ್ಯಾರ್ಥಿಗಳು ಸೇರಿ ಮೂವರ ಬಂಧನ

ಸಂಚಾರ ನಿಯಮಗಳನ್ನು ಪಾಲಿಸದೆ,ಡ್ಡಾದಿಡ್ಡಿಯಾಗಿ ವಾಹನ ಚಲಾವಣೆ ಮಾಡುವುದಲ್ಲದೆ ಅದನ್ನು ಪ್ರಶ್ನಿಸುವ ಪೋಲೀಸರ ಮೇಲೆ ಹಲ್ಲೆ ಮಾಡುವ ಘಟನೆಗಳು.....
ಕರ್ತವ್ಯ ನಿರತ ಪೋಲೀಸರ ಮೇಲೆ ಹಲ್ಲೆ, ಆಪ್ರಿಕಾ ಮೂಲದ ವಿದ್ಯಾರ್ಥಿಅಗ್ಲು ಸೇರಿ ಮೂವರ ಬಂಧನ
ಕರ್ತವ್ಯ ನಿರತ ಪೋಲೀಸರ ಮೇಲೆ ಹಲ್ಲೆ, ಆಪ್ರಿಕಾ ಮೂಲದ ವಿದ್ಯಾರ್ಥಿಅಗ್ಲು ಸೇರಿ ಮೂವರ ಬಂಧನ
ಬೆಂಗಳೂರು: ಸಂಚಾರ ನಿಯಮಗಳನ್ನು ಪಾಲಿಸದೆ,ಡ್ಡಾದಿಡ್ಡಿಯಾಗಿ ವಾಹನ ಚಲಾವಣೆ ಮಾಡುವುದಲ್ಲದೆ ಅದನ್ನು ಪ್ರಶ್ನಿಸುವ ಪೋಲೀಸರ ಮೇಲೆ ಹಲ್ಲೆ ಮಾಡುವ ಘಟನೆಗಳು ಬೆಂಗಳುರು ನಗರದಲ್ಲಿ ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದೆ. 
ಇತ್ತೀಚಿನ ಘಟನೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಕಾರ್ ಚಲಾಯಿಸುತ್ತಿದ್ದ ಮೂವರನ್ನು ಪೋಲೀಸರು ಪ್ರಶ್ನಿಸಿದ್ದಾರೆ. ಹಾಗೆ ಪ್ರಶ್ನಿಸಲು ಅವರು ಪೋಲೀಸರ ಮೇಲೆ ಹಲ್ಲೆ ನಡೆಸಿದ್ದು ಸಮವಸ್ತ್ರಗಳನ್ನು ಹರಿದಿದ್ದಾರೆ. ಪ್ರಕರಣ ಸಂಬಂಧ ಎಚ್‌ಬಿಆರ್ ಲೇಔಟ್ 5ನೇ ಬ್ಲಾಕ್‌ ನಿವಾಸಿ ಕಿಲಾಂಬೊ ನಜೇಬಾ ಕ್ಲೆಮೆಂಟೈನ್ (24) ಹಾಗೂ ಆಕೆಯ ಗೆಳೆಯ ಕಲಾಲು ಮುಜಿಂಗಾ ಜೊನಾಥನ್ (22) ಎನ್ನುವವರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದು ಇವರು ಟೀಚರ್ಸ್ ಅಕಾಡೆಮಿ’ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಕಾಡುಗೊಂಡನಹಳ್ಳಿ ಠಾಣೆಯ ಕಾನ್‌ಸ್ಟೆಬಲ್‌ ಆನಂದ ಶಿರೋಳ ಎನ್ನುವವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾಗಿ ದೂರು ದಾಖಲಾಗಿದೆ. ಆನಂದ ಶಿರೋಳ ಸ್ವತಃ ದೂರು ಸಲ್ಲಿಸಿದ್ದು "ಕಾನ್‌ಸ್ಟೆಬಲ್ ಬಸವರಾಜ್ ಟೊಣಪೆ ಸೋಮವಾರ ಸಂಜೆ 4 ಗಂಟೆಗೆ ಎಚ್‌ಬಿಆರ್ ಲೇಔಟ್‌ ಮುಖ್ಯರಸ್ತೆಯಲ್ಲಿ ಗಸ್ತು ತಿರುಗುವಾಗ ಅರಣ್ಯ ಇಲಾಖೆ ಕಚೇರಿಯ ಹಿಂಭಾಗದ ರಸ್ತೆಯಲ್ಲಿ ಕೆಎ–01 ಝಡ್ 1837 ನೋಂದಣಿ ಸಂಖ್ಯೆಯ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ನಡೆಸಿದ್ದಾರೆ, ಸ್ಥಳೀಯರೊಡನೆ ಜಗಳಕ್ಕಿಳಿದಿದ್ದಾರೆ ಎಂದು ಠಾಣೆಯಿಂದ ಕರೆ ಬಂದಿತ್ತು. 
"ಕರೆಯ ಕಾರಣ ನಾವು ಸ್ಥಳಕ್ಕೆ ತೆರಳಿದ್ದೆವು. ನಾವು ಅಲ್ಲಿಗೆ ತೆರಳುವ ಸಮಯ ಆರೋಪಿಗಳು ಕಾರ್ ತೆಗೆದುಕೊಂಡು ಹೊರಟಿದ್ದರು. ನಾವು ಕಾರ್ ಅಡ್ಡಗಟ್ಟಿದಾಗ ಅವರು ನಮ್ಮ ಬೈಕ್ ಗೆ ಡಿಕ್ಕಿ ಹೊಡೆದರು, ಕಾರಿನಿಂದಿಳಿದ ಅವರು ನಮಗೆ ಅವಾಚ್ಯ ಶಬ್ದದಿಂಡ ನಿಂದಿಸಿದರು. ನಾವು ಕಾರ್ ಚಾಲನೆ ಕುರಿತು ಪ್ರಶ್ನಿಸಿದಾಗ ಯುವತಿ ನನ್ನ ಕೆನ್ನೆಗೆ ಹೊಡೆದಿದ್ದಾಳೆ, ಅವಳ ಜತೆಗಿದ್ದ ಯುವಕ ನಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಆಗಮಿಸಿದ ಹೊಯ್ಸಳ ಸಿಬ್ಬಂದಿಗಳ ಮೇಲೆಯೂ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ, ಸಮವಸ್ತ್ರ ಹರಿದು ಹಾಕಿದ್ದಾರೆ. ಕಡೆಗೂ ಹೆಚ್ಚಿನ ಸಿಬ್ಬಂದಿಗಳನ್ನು ಕರೆಸಿಕೊಂಡು ಆರೋಪಿಗಳನ್ನು ಠಾಣೆಗೆ ಕರೆದೊಯ್ಯಲಾಗಿದೆ" ಶಿರೋಳ ತಮ್ಮ ದೂರಿನಲ್ಲಿ ತಿಳಿದ್ದಾರೆ.  ಸದ್ಯ ಮೂವರು ಆರೋಪಿಗಳ ವಿರುದ್ಧ  ಸಾರ್ವಜನಿಕ ಆಸ್ತಿಗೆ ಹಾನಿ, ಕರ್ತವ್ಯಕ್ಕೆ ಅಡ್ಡಿ, ಸರ್ಕಾರಿ ನೌಕರರ ಮೇಲೆ ಹಲ್ಲೆ ಆರೋಪಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com