ಮಹಾಭಾರತದ ಧೃತರಾಷ್ಟ್ರರಂತಹ ದುಷ್ಟರ ಕಂಡು ಕರ್ನಾಟಕ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ: ಸಚಿವ ಹೆಗಡೆ

ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು, ಮಹಾಭಾರತದಲ್ಲಿದ್ದ ಪರಿಸ್ಥಿತಿಯಂತೆಯೇ ಇಂದು ರಾಜ್ಯದ ಸ್ಥಿತಿಯಿದೆ ಎಂದು ಶುಕ್ರವಾರ ಹೇಳಿದ್ದಾರೆ...
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ
ಉಡುಪಿ: ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು, ಮಹಾಭಾರತದಲ್ಲಿದ್ದ ಪರಿಸ್ಥಿತಿಯಂತೆಯೇ ಇಂದು ರಾಜ್ಯದ ಸ್ಥಿತಿಯಿದೆ ಎಂದು ಶುಕ್ರವಾರ ಹೇಳಿದ್ದಾರೆ. 
ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಜ್ಞಾನಯಜ್ಞದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿರುವ ಅವರು, ಎಲ್ಲಾ ತಿಳಿದೂ ಧೃತರಾಷ್ಟ್ರ ಕಣ್ಣುಮುಚ್ಚಿಕೊಂಡಂತೆಯೇ ಇಂದೂ ಹೇಡಿ ಧೃತರು ಇದ್ದಾರೆ. ಅಂತಹವರೇ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವುದಕ್ಕೆ ಬರುತ್ತಾರೆಂದು ಯಾರ ಹೆಸರನ್ನೂ ಹೇಳದೇ ಮಾರ್ಮಿಕವಾಗಿ ನುಡಿದಿದ್ದಾರೆ. 
ಅಂದೂ ದುರ್ಯೋಧನ ಇದ್ದ. ದುಶ್ಯಾಸನ ಇದ್ದ. ಇಂದೂ ಇದ್ದಾರೆ. ಅಂದೂ ಧೃತರಾಷ್ಟ್ರ ಎಲ್ಲವನ್ನೂ ತಿಳಿದೂ ಕಣ್ಣುಮುಚ್ಚಿಕೊಂಡಿದ್ದ. ಇಂದೂ ಕಣ್ಣುಮುಚ್ಚಿ ಅವಿತುಕೊಂಡಿರುವ ಹೇಡಿ ಧೃತರಾಷ್ಟ್ರರು ಇದ್ದಾರೆ. ಅಂತಹವರೇ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವುದಕ್ಕೆ ಬರುತ್ತಾರೆ. ಕೃಷ್ಣನನ್ನು ಎದುರಿಸಿದವರು ಎನಾಗುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ. 
ಅಂತಹವರ ನಡುವೆಯೂ ಒಬ್ಬ ಎದ್ದು ಕುಳಿತಿದ್ದಾನೆ. ದೇಶದಲ್ಲಿ ಬದಲಾವಣೆಯನ್ನು ತರುತ್ತೇನೆಂದು ಹೇಳುತ್ತಿದ್ದಾನೆ. ಆದ್ದರಿಂದ ಧರ್ಮವೇ ಗೆಲ್ಲುತ್ತದೆ ಎಂದು ಹೇಳಿದ ಹೆಗಡೆ ಅವರು, ಯಾರೂ ಒಪ್ಪುತ್ತಾರೆ, ಬಿಡುತ್ತಾರೋ ಗೊತ್ತಿಲ್ಲ. ನಾನಂತೂ ಒಂದು ದೇಶ ಒಂದು ಕಾನೂನು ಎಂಬ ಶ್ರೀಗಳ ಸಂಕಲ್ಪವನ್ನು ಹೊತ್ತುಕೊಳ್ಳುವುದಕ್ಕೆ ಇಲ್ಲಿದೆ ಬಂದಿದ್ದೇನೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com