ನಾಲ್ಕು ಎಕರೆ ಆಸ್ತಿಯು ಸಂಪೂರ್ಣವಾಗಿ ತನೆಗೆ ಸಿಗಬೇಕೆಂದು ಆಸೆಯಿಂದ ಕಣಚೂರಿನ ದಿನೇಶ್ ಎಂಬಾತ ಈ ಕೃತ್ಯ ಎಸಗಿದ್ದು ತನ್ನ ಅಣ್ಣ ವೆಂಕಟೇಶ್ ಹಾಗೂ ಅತ್ತಿಗೆ ರುಕ್ಮಿಣಿಗೆ ಅವರ ಊಟದಲ್ಲಿ ವಿಷ ಬೆರೆಸಿ ಕೊಟ್ಟಿದ್ದಾನೆ. ವಿಷ ಬೆರೆಸಿದ್ದ ಊಟ ಮಾಡಿದ್ದ ದಂಪತಿಗಳನ್ನು ಪಕ್ಕದ ಮನೆಯವರು ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.