ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

2017ರಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ ಕನಿಷ್ಠ 5 ಆತ್ಮಹತ್ಯೆಗಳು ನಡೆದಿವೆ: ಸಮೀಕ್ಷೆ

ಕಳೆದ ನಾಲ್ಕು ವರ್ಷಗಳಲ್ಲಿ ಕಳೆದ ವರ್ಷ ಅಂದರೆ 2017ರಲ್ಲಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ....
Published on
ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಕಳೆದ ವರ್ಷ ಅಂದರೆ 2017ರಲ್ಲಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಅಧಿಕವಾಗಿದೆ.
ನಗರ ಪೊಲೀಸರಿಗೆ ಸಿಕ್ಕಿರುವ ಅಂಕಿಅಂಶ ಪ್ರಕಾರ, 2017ರಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ ಸರಾಸರಿ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಸುಮಾರು 1,921 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ ಕಳೆದ ವರ್ಷ ಅಧಿಕವಾಗಿದೆ. ಇವರಲ್ಲಿ 1,268 ಪುರುಷರು ಮತ್ತು 653 ಮಹಿಳೆಯರು ಜೀವನದಲ್ಲಿ ಈ ಅಂತಿಮ ಹೆಜ್ಜೆ ತೆಗೆದುಕೊಂಡಿದ್ದಾರೆ. 2016ರಲ್ಲಿ 1,795 ಮಂದಿ ಬೆಂಗಳೂರು ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರಲ್ಲಿ 1,207 ಪುರುಷರು ಮತ್ತು 588 ಮಹಿಳೆಯರಾಗಿದ್ದಾರೆ.
ನಮ್ಮಲ್ಲಿಗೆ ಪ್ರತಿದಿನ ಸರಾಸರಿ 5 ಒತ್ತಡದಿಂದ ಬಳಲುತ್ತಿದ್ದೇವೆ ಎಂದು ಹೇಳಿಕೊಂಡು ಕರೆ ಮಾಡುತ್ತಾರೆ.ಆತ್ಮಹತ್ಯೆ ಮಾಡಿಕೊಳ್ಳಲು ಇಂತವರಲ್ಲಿ ಬಹುತೇಕರು ಪ್ರಯತ್ನಿಸುತ್ತಿದ್ದು ಅವರನ್ನು ವೈಯಕ್ತಿಕವಾಗಿ ಕರೆದು ಮಾತನಾಡಿಸುತ್ತೇವೆ. ಶೈಕ್ಷಣಿಕ ಒತ್ತಡ ಅಥವಾ ತಂದೆ ತಾಯಿಗಳ ನಿರೀಕ್ಷೆಗಳನ್ನು ತಾಳಲಾರದೆ ಯುವ ಜನತೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಸಾಮುದ್ರಾ ಫೌಂಡೇಶನ್ ನ ಯುವ ಸಹಾಯವಾಣಿಯ ಕೌನ್ಸೆಲರ್ ಹರ್ಷಿತಾ ಹೇಳುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com