ಆಧಾರ್'ಗಾಗಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದ ರಾಯಚೂರು ವ್ಯಕ್ತಿ

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ (ಯುಐಡಿಎಐ) ನೀಡುವ ಆಧಾರ್ ಕಾರ್ಡ್ ಗಾಗಿ ಸತತ 7 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸಿದರೂ ಕೊನೆಗೂ ಆಧಾರ್ ದೊರೆಯದ ಕಾರಣ ಬೇಸತ್ತ ರಾಯಚೂರಿನ ವ್ಯಕ್ತಿಯೊಬ್ಬರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ರಾಯಚೂರು: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ (ಯುಐಡಿಎಐ) ನೀಡುವ ಆಧಾರ್ ಕಾರ್ಡ್ ಗಾಗಿ ಸತತ 7 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸಿದರೂ ಕೊನೆಗೂ ಆಧಾರ್ ದೊರೆಯದ ಕಾರಣ ಬೇಸತ್ತು ರಾಯಚೂರಿನ ವ್ಯಕ್ತಿಯೊಬ್ಬರು ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 
ಸಯ್ಯದ್ ಸಂಶುದ್ದೀನ್ ಹುಸೇನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್  ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ. 
ತಮ್ಮ ಹಾಗೂ ತಂದೆಯ ಬೆರಳಚ್ಚುಗಳು ಅದಲು ಬದಲಾಗಿದ್ದು, ಇದರಿಂದಾಗಿ ಆಧಾರ್ ಕಾರ್ಡ್ ದೊರೆಯದೇ ಸಯ್ಯದ್ ಅವರು ಸ್ಥಳೀಯ ಕಚೇರಿ ಹಾಗೂ ಪ್ರಾದೇಶಿಕ ಯುಐಡಿಎಐ ಕಚೇರಿಗಳಿಗೆ ನಾಲ್ಕು ಬಾರಿ ಭೇಟಿ ಮಾಡಿ ಆಧಾರ್ ಕಾರ್ಡ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರತಿಕ್ರಿಯೆ ಗಳು ಬಂದಿಲ್ಲ. ಸ್ಥಳೀಯ ಅಧಿಕಾರಿಗಳು ಕೂಡ ಯಾವುದೇ ಸಹಾಯವನ್ನು ಮಾಡಿಲ್ಲ. ಇದರಿಂದ ಬೇಸತ್ತ ಸಯ್ಯದ್ ಅವರು ನೇರವಾಗಿ ದೆಹಲಿಯಲ್ಲಿರುವ ಯುಐಡಿಎಐ ಕಚೇರಿಗೆ ಭೇಟಿ ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 
ಸಯ್ಯದ್ ಅವರು ಮನವಿ ಮಾಡಿಕೊಂಡ ಬಳಿಕ ಕೂಡಲೇ ಕ್ರಮ ಕೈಗೊಂಡ ಯುಐಡಿಎಐ ಅಧಿಕಾರಿಗಳು, ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಎಎಲ್'ಸಿಎಂ ನೀತಿ, ಆಧಾರ್ ನೀತಿ ಮತ್ತು ಆಧಾರ್ ನಿಯಮ 2106ರಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಇದಲ್ಲದೆ, ಪ್ರಕರಣ ಸಂಬಂಧ ಡಿಡಿಜಿ ಅವರ ಸಹಿ ಮಾಡಿದ ತನಿಖಾ ವರದಿಯನ್ನು ಮುಖ್ಯ ಕಚೇರಿ ಸಲ್ಲಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ. 
ಯುಐಡಿಎಐ ಸೂಚನೆ ನೀಡುತ್ತಿದ್ದಂತೆಯೇ ಎಚ್ಚತ್ತ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ನಾಲ್ಕು ತಿಂಗಳಾಗುತ್ತದೆ ಎಂದು ಸಯ್ಯದ್ ಅವರಿಗೆ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com