ಬೆಂಗಳೂರು: ಬ್ಯಾಂಕ್ ಗೆ ಜಮೆಯಾಗಬೇಕಿದ್ದ 90 ಲಕ್ಷದೊಡನೆ ಇಬ್ಬರು ಪರಾರಿ

ಕ್ಯಾಶ್ ಮ್ಯಾನೆಜ್ ಮೆಂಟ್ ಸಂಸ್ಥೆಯೊಂದರ ಭ್ದರ್ತಆ ಸಿಬ್ಬಂದಿ, ಚಾಲಕ ಸೇರಿ ರೂ.90 ಲಕ್ಷದೊಡನೆ ಪರಾರಿಯಾಗಿರುವ ಘಟನೆ ಬೆಂಗಳುರಿನ ಜ್ಞಾನಭಾರತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಕ್ಯಾಶ್ ಮ್ಯಾನೆಜ್ ಮೆಂಟ್ ಸಂಸ್ಥೆಯೊಂದರ ಭದ್ರತಾ ಸಿಬ್ಬಂದಿ, ಚಾಲಕ ಸೇರಿ ರೂ.90 ಲಕ್ಷದೊಡನೆ ಪರಾರಿಯಾಗಿರುವ ಘಟನೆ ಬೆಂಗಳುರಿನ ಜ್ಞಾನಭಾರತಿಯಲ್ಲಿ ನಡೆದಿದೆ. ಆರೋಪಿಗಳು ಭದ್ರತಾ ಸಿಬ್ಬಂದಿ ಓರ್ವನಿಗೆ ಹತ್ತಿರದ ಅಂಗಡಿಯಿಂದ ಬಾಳೆಹಣ್ಣು ಖರೀದಿಸಿ ತರಲು ಹೇಳಿದ್ದು ಅವನು ಅತ್ತ ಹೊರಟ ಕೂಡಲೇ ವ್ಯಾನ್ ನಲ್ಲಿದ್ದ ಹಣದೊಡನೆ ಪರಾರಿಯಾಗಿದ್ದಾರೆ.
ನಗರದ ಹಲವಾರು ಮಾಲ್ ಗಳು ಮತ್ತು ಆಧುನಿಕ ಕಾಫಿ ಶಾಪ್ ಗಳಿಂದ ಸಂಗ್ರಹಿಸಲಾಗಿದ್ದ ಈ ಹಣವನ್ನು ಸಿಎಂಎಸ್ ಕ್ಯಾಶ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಮೂರು ಸಿಬ್ಬಂದಿಗಳು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇರಿಸಲು ಕೊಂಡೊಯ್ಯುತ್ತಿದ್ದರೆನ್ನಲಾಗಿದೆ.
ವಿದ್ಯಾರಣ್ಯಪುರ ನಿವಾಸಿ ನಾರಾಯಣಸ್ವಾಮಿ(47), ಮತ್ತು ಕಮಲಾನಗರದ ನರಸಿಂಹರಾಜು (27) ಆರೋಪಿಗಳಾಗಿದ್ದು ಈ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆಯಾಗಿದೆ.
ನರಸಿಂಹರಾಜುವಿಗೆ ಸೇರಿದ ಟಾಟಾ ಸುಮೋ ವಾಹನದಲ್ಲಿ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ನಗರದ ಇತರ ಭಾಗಗಳ ಸೂಪರ್ ಮಾರ್ಕೆಟ್ ಗಳು, ಮಾಲ್ ಗಳು ಮತ್ತು ಇತರೆ ವ್ಯಾಪಾರ ಕೇಂದ್ರಗಳಿಂದ ಹಣ ಸಂಗ್ರಹಣೆ ಮಾಡಲಾಗುತ್ತಿತ್ತು. ಇದರಲ್ಲಿ ನಾರಾಯಣಸ್ವಾಮಿ ಎನ್ನುವವನು ಸಹಾಯಕನಾಗಿದ್ದು ಚಾಲಕ ನರಸಿಂಹರಾಜು, ಇನ್ನೋರ್ವ ಸಿಬ್ಬಂದಿ ನಟರಾಜ್ ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ. ನಿನ್ನೆ ಸಂಜೆ 4.45ರ ಸುಮಾರು ಜ್ಞಾನಭಾರತಿ ವೃತ್ತದ ಬಳಿ ವ್ಯಾನ್ ನಿಲ್ಲಿಸಿದ ನಾರಾಯಣಸ್ವಾಮಿ ಮತ್ತು ನರಸಿಂಹರಾಜು ಭದ್ರತಾ ಸಿಬ್ಬಂದಿ ನಟರಾಜ್ ಗೆ ಹತ್ತಿರದ ಅಂಗಡಿಯೊಂದರಿಂದ ಬಾಳೆ ಹಣ್ಣುಗಳನ್ನು ತರ ಹೇಳಿದ್ದಾರೆ. ಆತ ಬಾಳೆಹಣ್ಣು ಖರೀದಿಸಿ ಹಿಂತಿರುಗುವಷ್ಟರಲ್ಲಿ ಇಬ್ಬರೂ ಹಣದ ಸಮೇತ ಪರಾರಿಯಾಗಿದ್ದಾರೆ ಎಂದು ಪೋಲೀಸರು ತಿಳಿಸಿದರು.
ತಕ್ಷಣವೇ ನಟರಾಜ್ ಸಂಸ್ಥೆಯ ಮ್ಯಾನೇಜರ್ ರಘುನಾಥ್ ಗೆ ವಿಚಾರ ತಿಳಿಸಿದ್ದಾನೆ. ರಘುನಾಥ್ ಜ್ಞಾನಭಾರತಿ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ.
"ಆರೋಪಿಗಳು ಕಂಪನಿಯಲ್ಲಿ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರು ಹಣವನ್ನು ಸಂಗ್ರಹಿಸಿ ನಂತರ ಅದನ್ನು ವಿವಿಧ ಬ್ಯಾಂಕ್ ಗಳಲ್ಲಿರುವ ವ್ಯಾಪಾರಿಗಳ ಖಾತೆಗಳಿಗೆ ಹಾಕುತ್ತಿದ್ದರು. ಈ ಸೇವೆಗಾಗಿ ಕಂಪನಿಯು ಆಯಾ ವ್ಯಾಪಾರಿಗಳಿಂದ ಕಮಿಷನ್ ಪಡೆಯುತ್ತದೆ.  ಸಂಥೆಯು ಅವರ ಸಿಬ್ಬಂದಿ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲನೆ ನಡೆಸಿದೆಯೆ? ಅವರು ಹಿಂದೆಯೂ ಇದೇ ಬಗೆಯ ಅಪರಾಧಗಳಲ್ಲಿ ತೊಡಗಿದ್ದವರೆ ಎನ್ನುವುದನ್ನು ನಾವು ಪತ್ತೆ ಮಾಡಬೇಕಿದೆ. ಆರೋಪಿಗಳಿದ್ದ ವ್ಯಾನ್ ಚಲಾವಣೆಯಲ್ಲಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದುಾದಷ್ಟು ಶೀಘ್ರವಾಗಿ ಆರೋಪಿಉಗಳನ್ನು ಬಂಧಿಸಲಿದ್ದೇವೆ" ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಪ್ರಕರಣಕ್ಕೆ ಬಳಸಿದ್ದವಾಹನ ನೆಲಮಂಗಲ ಸಮೀಪ ಮಾದನಾಯಕನಹಳ್ಳಿಯಲ್ಲಿ ದೊರಕಿದ್ದು ಅದನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಈ ವಾಹನವು ಜಿಪಿಎಸ್ ಟ್ರಾಕರ್ ನ್ನು ಒಳಗೊಂಡಿತ್ತು. ಮಾಗಡಿ ರಸ್ತೆ ನಿವಾಸಿಯಾದ ನಟರಾಜ್ ಈ ಘಟನೆಯಲ್ಲಿ ಆವ ಪಾತ್ರ ವಹಿಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಆರೋಪಿಗಳು ಈ ಖದೀಮ ಯೋಜನೆಯ ಕುರಿತು ಸಾಕಷ್ಟು ಮುಂಚಿತವಾಗಿ ಉಪಾಯ ನಡೆಸಿದ್ದರೆನ್ನಲಾಗಿದ್ದು ಈ ಸಂಬಂಧ ಅವರು ದೂರವಾಣಿ ಸಂಬಾಷಣೆ ನಡೆಸಿದ್ದರೆನ್ನುವುದು  ತಿಳಿದಿದೆ.
"ನಾವು ಯಾವುದೇ ವ್ಯಕ್ತಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಅವರ ಸಮಗ್ರ ಹಿನ್ನೆಲೆಯನ್ನು  ಪರೀಕ್ಷಿಸುತ್ತೇವೆ.(ಪೊಲೀಸ್ ಪರಿಶೀಲನೆಗಳು ಮತ್ತು ದಾಖಲೆ ತಪಾಸಣೆಗಳನ್ನು ಒಳಗೊಂಡಂತೆ) ಮತ್ತು ಕಡ್ಡಾಯ ಆಧಾರ್ ಸಂಖ್ಯೆಯ ಪರಿಶೀಲನೆಗಳನ್ನು ಸಹ ನಡೆಸುತ್ತೇವೆ. ನಾವು ಫೀಲ್ಡ್ ಸ್ಟಾಫ್ ಗಳಿಗೆ  ಒಂದು ವಿಶೇಷ ವಿಷೀಲ್ ಬ್ಲೌವರ್ ಸಿಸ್ಟಮ್ ಅಳವಡಿಸಿದ್ದು ಹಣಕಾಸು ನಿರ್ವಹಣೆಯಲ್ಲಿ ಸಾಕಷ್ಟು ಶಿಸ್ತು ಪಾಲಿಸುವಂತೆ ನೊಡಿಕೊಳ್ಳುತ್ತಿದ್ದೇವೆ" ಸಿಎಂಎಸ್ ಇನ್ಫೋ ಸಿಸ್ಟಮ್ಸ್ ಲಿಮಿಟೆಡ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com