ಆನ್‌ಲೈನ್‌ನಲ್ಲಿ ಗಿಣಿ ಕೊಳ್ಳಲು ಮುಂದಾದ ಮಹಿಳೆಗೆ 71 ಸಾವಿರ ಪಂಗನಾಮ!

ಪ್ರಾಣಿ ಪ್ರಿಯೆಯೊಬ್ಬರು ಆನ್‌ಲೈನ್‌ನಲ್ಲಿ ಗಿಣಿ ಕೊಳ್ಳಲು ಹೋಗಿ 71,000 ರುಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ...
ಗಿಣಿ
ಗಿಣಿ
ಬೆಂಗಳೂರು: ಪ್ರಾಣಿ ಪ್ರಿಯೆಯೊಬ್ಬರು ಆನ್‌ಲೈನ್‌ನಲ್ಲಿ ಗಿಣಿ ಕೊಳ್ಳಲು ಹೋಗಿ 71,000 ರುಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. 
32 ವರ್ಷದ ಶ್ರೀಜಾ ಎಂಬುವರು ಸರ್ಜಾಪುರ ರಸ್ತೆಯ ವಿಜಯ ಕುಮಾರ್ ಲೇಔಟ್ ನ ನಿವಾಸಿಯಾಗಿದ್ದು ಆನ್‌ಲೈನ್‌ನಲ್ಲಿ ಖರೀದಿಗೆ ಪ್ರಯತ್ನಿದ್ದು ಈ ವೇಳೆ 71,500 ರುಪಾಯಿ ವಂಚನೆಗೆ ಒಳಗಾಗಿದ್ದಾರೆ. 
ಪ್ರಾಣಿ ಪ್ರಿಯೆ ಆಗಿರುವ ಶ್ರೀಜಾ ಅವರು ಇದೀಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದು ವಂಚಕರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. 
ಶ್ರೀಜಾ ಗಿಣಿ ಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಬಾಬ್ಜಿ ಎಂಬಾತನ ಪರಿಚಯವಾಗಿದೆ. ಆತ ತನ್ನ ಫೇಸ್ ಬುಕ್ ಖಾತೆ ಮತ್ತು ವಾಟ್ಸ್ ಆ್ಯಪ್ ನಂಬರ್ ಹಂಚಿಕೊಂಡಿದ್ದರಿಂದ ನಂಬಿಕೆಗೆ ಅರ್ಹ ವ್ಯಕ್ತಿ ಎಂದುಕೊಂಡೆ. ಹೀಗಾಗಿ ಆತ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ನೆಟ್ ಬ್ಯಾಂಕ್ ಮೂಲಕ ಹಣ ವರ್ಗಾಯಿಸಿದ್ದೆ ಎಂದು ದೂರಿದ್ದಾರೆ. 
ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಅಡಿಯಲ್ಲಿ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇನ್ನು ಪೊಲೀಸರು ಆನ್ ಲೈನ್ ನಲ್ಲಿ ಖರೀದಿ ಮಾಡುವಾಗ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಎಚ್ಚರಿಸುತ್ತಿದ್ದರು ಮೋಸ ಹೋಗುವವರು ಮೋಸ ಹೋಗುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com