ಬಿಬಿಎಂಪಿಗೆ ರೂ.559 ಕೋಟಿ ನಷ್ಟ: ದೇವೇಗೌಡ ಕುಟುಂಬದ ವಿರುದ್ಧ ಆಸ್ತಿ ತೆರಿಗೆ ವಂಚನೆ ಆರೋಪ

ಬಿಬಿಎಂಪಿ ವ್ಯಾಪ್ತಿಯ 63 ಕಟ್ಟಡಗಳ ಮಾಲೀಕರು ಪಾಲಿಕೆ ಅಧಿಕಾರಿಗಳಿಗೆ ಸುಳ್ಳು ಆಸ್ತಿ ಘೋಷಣೆಮಾಡಿಕೊಂಡು ಹಲವು ವರ್ಷಗಳಿಂದ ಬರೋಬ್ಬರಿ ರೂ.559 ಕೋಟಿ ನಷ್ಟು ಆಸ್ತಿ ತೆರಿಗೆ ವಂಚನೆ ಮಾಡಿದ್ದು, ಇದರಲ್ಲಿ ಮಾಜಿ ಪ್ರಧಾನಮಂತ್ರಿ ದೇವೇಗೌಡ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು; ಬಿಬಿಎಂಪಿ ವ್ಯಾಪ್ತಿಯ 63 ಕಟ್ಟಡಗಳ ಮಾಲೀಕರು ಪಾಲಿಕೆ ಅಧಿಕಾರಿಗಳಿಗೆ ಸುಳ್ಳು ಆಸ್ತಿ ಘೋಷಣೆಮಾಡಿಕೊಂಡು ಹಲವು ವರ್ಷಗಳಿಂದ ಬರೋಬ್ಬರಿ ರೂ.559 ಕೋಟಿ ನಷ್ಟು ಆಸ್ತಿ ತೆರಿಗೆ ವಂಚನೆ ಮಾಡಿದ್ದು, ಇದರಲ್ಲಿ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರ ಕುಟುಂಬ ಸದಸ್ಯರಿಗೆ ಸೇರಿದ ಆಸ್ತಿಗಳಿವೆ ಎಂಬ ಆರೋಪಗಳೂ ಕೂಡ ಕೇಳಿ ಬಂದಿವೆ.
ಪಾಲಿಕೆ ವ್ಯಾಪ್ತಿಯಲ್ಲಿ 77ಕ್ಕೂ ಅಧಿಕ ಟೆಕ್ ಪಾರ್ಕ್ ಗಳು, 51 ಮಾಲ್ ಗಳು, 4,834 ಕೈಗಾರಿಕೆಗಳು ಮತ್ತು ಸಾವಿರಾರು ವಸತಿ ಸಂಕೀರ್ಣಗಳಿವೆ. ಆಸ್ತಿಗಳ ಮಾಲೀಕರು 2008ರಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ (ಎಸ್ಎಎಸ್) ತಮ್ಮ ಕಟ್ಟಡಗಳ ಅಳತೆಯನ್ನು ತಪ್ಪಾಗಿ ಘೋಷಿಸಿಕೊಂಡು ತೆರಿಗೆ ವಂಚಿಸುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಮೊದಲ ಹಂತದಲ್ಲಿ ಮಾಲ್ ಗಳು ಹಾಗೂ ಟೆಕ್ ಪಾರ್ಕ್ ಕಟ್ಟಡಗಳ ನಿಖರ ವಿಸ್ತೀರ್ಣ ಪತ್ತೆಗಾಗಿ ಟೋಟಲ್ ಸ್ಟೇಷನ್ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. 
ಮಹದೇವಪುರ ವಲಯದ ವ್ಯಾಪ್ತಿಯಲ್ಲಿ ಬೆಳ್ಳಂದೂರು ಸಮೀಪದಲ್ಲಿರುವ ಆರ್'ಎಂಝಡ್ ಸೆಂಟೆನೇಲ್ ಕಟ್ಟಡದ ಸುಳ್ಳು ಆಸ್ತಿ ಘೋಷಣೆ ಮಾಡಿಕೊಂಡು ಕಳೆದ 10 ವರ್ಷದಲ್ಲಿ ರೂ.3.17 ಕೋಟಿ ಬಿಬಿಎಂಪಿಗೆ ಆಸ್ತಿ ತೆರಿಗೆ ವಂಚನೆ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. 
ಆರ್'ಎಂಝಡ್ ಸೆಂಟೆನೇಲ್ ಕಟ್ಟಡ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಸದಸ್ಯರಿಗೆ ಸೇರಿದ್ದಾಗಿದೆ. ದೇವೇಗೌಡರ ಸೊಸೆಯಂದಿರಾದ ಹೆಚ್.ಕವಿತಾ ರೂ.55, 21, 479, ಭವಾನಿ ರೇವಣ್ಣ ರೂ.41,79,440, ಅನಿತಾ ಕುಮಾರಸ್ವಾಮಿ ರೂ.54,85,521, ಮಕ್ಕಳಾದ ಹೆಚ್.ಡಿ.ಶೈಲಾ ರೂ.55,21,479, ಹೆಚ್.ಡಿ.ಅನುಸೂಯ ರೂ.55,21,479, ಪುತ್ರ ಹೆಚ್.ಡಿ. ರಮೇಶ್ ರೂ.55,21,389 ಸುಳ್ಳು ಆಸ್ತಿ ಘೋಷಣೆಯಿಂದ ಆಸ್ತಿ ತೆರಿಗೆ ವಂಚನೆ ಮಾಡಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com